ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
1.ಮೇಷ:
ಗುರುದೇವತಾನುಹ್ರಹದಿಂದ ಯಶಸ್ಸುಗಳ ಸರಮಾಲೆ. ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ, ಕಾರ್ಯಾಲಯದಲ್ಲಿ ಸೌಹಾರ್ದ. ಉದ್ಯಮಗಳ ಆರ್ಥಿಕ ಸ್ಥಿತಿ ಸುಧಾರಣೆ. ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ. ಸಂಸಾರದಲ್ಲಿ ನೆಲೆಗೊಂಡ ನೆಮ್ಮದಿ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.
2.ವೃಷಭ:
ಎಲ್ಲರಿಗೂ ಶೀಘ್ರ ಕೆಲಸ ಮುಗಿಸುವ ಉತ್ಸಾಹ. ಉದ್ಯಮದಲ್ಲಿ ಲಾಭ ವೃದ್ಧಿ.ವ್ಯವಹಾರ ಕ್ಷೇತ್ರ ವಿಸ್ತರಣೆ. ಲೇವಾದೇವಿ ವ್ಯವಹಾರಸ್ಥರಿಗೆ ಅನನುಕೂಲ. ದಾಂಪತ್ಯ ಜೀವನದಲ್ಲಿ ಸೌಖ್ಯ.ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.
3.ಮಿಥುನ:
ಸ್ಥಾನಕ್ಕೆ ತಕ್ಕ ಗೌರವ ಪ್ರಾಪ್ತಿ. ಹೊಸ ವಿದ್ಯೆಯಿಂದ ಕಾರ್ಯಸಾಧನೆ. ಸ್ವಂತ ಉದ್ಯಮದ ತಾತ್ಕಾಲಿಕ ಹಿನ್ನಡೆ. ಧ್ಯಾನ, ಯೋಗ ಸಾಧನೆಯಲ್ಲಿ ಮುನ್ನಡೆ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ವಿಶಿಷ್ಟ ಗೌರವ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದೇವೀಸ್ತೋತ್ರ ಓದಿ.
೪.ಕರ್ಕಾಟಕ:
ಅನುಭವದ ಕಾರಣದಿಂದ ಉನ್ನತ ಸ್ಥಾನ. ಉದ್ಯಮದಲ್ಲಿ ಸಾಧಾರಣ ತೃಪ್ತಿಕರ ಲಾಭ. ಕೃಷ್ಯುತ್ಪಾದನೆ ಮಾರಾಟದಿಂದ ಮಧ್ಯಮ ಲಾಭ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ. ಹಳೆಯ ಗೆಳೆಯರೊಂದಿಗೆ ಮತ್ತೆ ಸಂಪರ್ಕ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
5.ಸಿಂಹ:
ಕಾರ್ಯಸಾಧನೆಯಲ್ಲಿ ನಿರಂತರತೆ ಭಂಗವಿಲ್ಲ. ಉದ್ಯೋಗದಲ್ಲಿ ಉನ್ನತ ಸ್ಥಾನ ಹೊಂದುವ ಪ್ರಯತ್ನ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಹತ್ತಿರದ ದೇವಾಲಯಕ್ಕೆಭೇಟಿ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ. ಗಣೇಶ ದ್ವಾದಶನಾಮ ಸ್ತೋತ್ರ, ಹನುಮಾನ್ ಚಾಲೀಸಾ, ಮಹಾಲಕ್ಷ್ಮಿ ಅಷ್ಟಕ ಓದಿ.
6. ಕನ್ಯಾ:
ಉದ್ಯೋಗದ ಪರಿಸರದಲ್ಲಿ ಗೌರವ ವೃದ್ಧಿ. ಅಕಸ್ಮಾತ್ ಧನಪ್ರಾಪ್ತಿಯ ಸಾಧ್ಯತೆ. ಸರಕಾರಿ ಉದ್ಯೋಗಿಗಳಿಗೆ ಕಾರ್ಯ ಮುಗಿದ ತೃಪ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆಗೆ ಪ್ರಥಮ ಪ್ರಾಶಸ್ತ್ಯ. ದೂರದೃಷ್ಟಿಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ. ಗಣಪತಿ ಅಥರ್ವಶೀರ್ಷ, ದಕ್ಚಿಣಾಮೂರ್ತಿ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
7.ತುಲಾ:
ದೈವಾನುಗ್ರಹವೊಂದೇ ತಾರಕ ಎಂಬುದು ಸತ್ಯವಾದ ಸಂದರ್ಭ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯಿಂದ ಕಾರ್ಯನಿರ್ವಹಣೆ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವ್ಯವಹಾರದ ಕ್ಷೇತ್ರ ವಿಸ್ತರಣೆಗೆ ವಿಘ್ನ.. ದೇವಿಯ ಆಲಯ ದರ್ಶನದಿಂದ ಸಮಾಧಾನ.ಗಣೇಶ ಸ್ತೋತ್ರ, ದೇವೀಕವಚ, ಹನುಮಾನ್ ಚಾಲೀಸಾ ಓದಿ.
8 ವೃಶ್ಚಿಕ:
ಕೀರ್ತಿಗೆ ಕಾರಣವಾದ ದೈವಾನುಗ್ರಹ.. ಉದ್ಯೋಗದಲ್ಲಿ ವ್ಯಾವಹಾರಿಕ ಪ್ರೋತ್ಸಾಹ.. ಸರಕಾರಿ ನೌಕರರಿಗೆ ಶುಭ
ಸಮಾಚಾರ. ಸ್ವಂತ ಉದ್ಯಮ ವಿಸ್ತರಣೆಗೆ ಕಾರ್ಯ ಯೋಜನೆ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ಶನಿಸ್ತೋತ್ರ ಓದಿ.
9. ಧನು:
ಪೂರ್ಣಾರೋಗ್ಯದಿಂದ ಮನಸ್ವಾಸ್ಥ್ಯ.. ಹಳೆಯ ಒಡನಾಡಿಗಳ ಭೇಟಿಯಿಂದ ನವೋತ್ಸಾಹ. ಉದ್ಯೋಗದಲ್ಲಿ ಗೌರವದ ಸ್ಥಾನ. ಆದಾಯ ಹೆಚ್ಚಳದ ಯೋಜನೆಗಳು ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಗಣೇಶ ಪಂಚರತ್ನ, ದತ್ತಪಂಜರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
10.ಮಕರ:
ಆತ್ಮಬಲ ವೃದ್ಧಿಯಲ್ಲಿ ಯಶಸ್ಸು.ಕಿರಿಯ ಸಹೋದ್ಯೋಗಿಗಳಿಂದ ಗೌರವ. ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ. ಉದ್ಯೋಗ ಪರಿವರ್ತನೆ ಪ್ರಯತ್ನಕ್ಕೆ ಹಂತಹಂತವಾಗಿ ಯಶಸ್ಸು. ಆಪ್ತರಿಂದ ಸಕಾಲಕ್ಕೆ ಸಹಾಯ.ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
11. ಕುಂಭ:
ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭಸಮಾಜಸೇವೆಯಿಂದ ಗೌರವ..ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
12. ಮೀನಾ
ಭಗವಂತನ ಕರುಣೆಯಿಂದ ಜೀವನ ಸುಗಮ.ಉದ್ಯೋಗ ಸ್ಥಾನದಲ್ಲಿ ಅನುಕೂಲದ ಸ್ಥಿತಿ. ಸಮಾಜಕಾರ್ಯಕ್ಕೆ ಅನುಕೂಲದ ವಾತಾವರಣ.ಸರಕಾರಿ ಅಧಿಕಾರಿಗಳ ಹಾಗೂ ನೌಕರರ ಉತ್ತಮ ಸ್ಪಂದನೆಯಿಂದ ಕಾರ್ಯಗಳು ನಿರ್ವಿಘ್ನ. ಸಂಸಾರದಲ್ಲಿ ಸಂಗಾತಿಯ ಪೂರ್ಣ ಸಹಕಾರ .ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.