ದಿನ ಭವಿಷ್ಯ (ಸೋಮವಾರ): ಇಂದು ಯಾರಿಗೆ ಶುಭ?

Daily Horoscope: ಇಂದು (ಸೋಮವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Oct 26, 2026 - 10:01
ದಿನ ಭವಿಷ್ಯ (ಸೋಮವಾರ): ಇಂದು ಯಾರಿಗೆ ಶುಭ?

ಮೇಷ:

ಸೋಮವಾರದ  ಶುಭಫಲಗಳು.. ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ, ವ್ಯವಹಾರದಲ್ಲಿ ಜಯ.. ಅಧಿಕಾರಿ ವರ್ಗಕ್ಕೆ ಸಮಾಧಾನ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ನೆಮ್ಮದಿ. ಎಚ್ಚರಿಕೆಯ ನಡೆಯಿಂದ ಕ್ಷೇಮ. ಗಣೇಶ ಕವಚ, ಶಿವ ಸಹಸ್ರನಾಮ, ಶನಿ ಮಹಾತ್ಮೆ ಓದಿ.

ವೃಷಭ:

ಮತ್ತೆ ಮತ್ತೆ ವಿಮರ್ಶಿಸಿ  ನಿರ್ಧಾರಗಳನ್ನು ತೆಗೆದುಕೊಳ್ಳಿ.. ಮನೆಯವರ ಆರೋಗ್ಯದ ಕಡೆಗೆ ಗಮನ ಇರಲಿ. ಲೇವಾದೇವಿ ವ್ಯವಹಾರದಿಂದ ದೂರವಿರಿ. ಮನೆಮಂದಿಯ ಪಾಲಿಗೆ ನಿರಾತಂಕದ ದಿನ. ದೂರ ಪ್ರಯಾಣ ಮುಂದಕ್ಕೆ ಹಾಕಿರಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಿಥುನ:

ಕೆಲವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ.. ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಮಂದಗತಿ. ವ್ಯವಹಾರದಲ್ಲೂ ಸ್ವಲ್ಪ ನಿಧಾನ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಸಣ್ಣಪುಟ್ಟ ಸಮಸ್ಯೆಗಳಿಗೆ ಅಂಜಬೇಡಿ. ಗಣೇಶ ಅಷ್ಟಕ, ಕಾರ್ತಿಕೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

ಕರ್ಕಾಟಕ:

ಈ ದಿನ ಎಲ್ಲೆಡೆ ಯಶಸ್ಸು.. ಪ್ರಾಚೀನ ಜೀವನ ವಿಧಾನದಿಂದ ಆರೋಗ್ಯ ಪ್ರಾಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಪಾಲುದಾರಿಕೆಯಲ್ಲಿ ಪಾರದರ್ಶಕತೆಯಿಂದ ಶುಭ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಸಿಂಹ:

ಮುಂದಿಟ್ಟ ಹೆಜ್ಜೆ ಹಿಂದಿಡದಿರಿ.. ಮೊದಲ ನೋಟಕ್ಕೆ ಯಾರನ್ನೂ ನಂಬಬೇಡಿ. ಮಾಜಿ ಪಾಲುದಾರನಿಂದ ಮತ್ತೊಮ್ಮೆ ಹೊಸ ಪ್ರಸ್ತಾವ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ. ಅಧ್ಯಾಪಕ ವರ್ಗದವರು ಎಚ್ಚರಿಕೆಯಲ್ಲಿ ಸಾಗಿ. ಗಣೇಶ ಕವಚ, ಶಿವ ಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಕನ್ಯಾ:

ಲಾಭ- ನಷ್ಟದ ಗಣನೆಯಿಲ್ಲದೆ ಕ್ರಮ ತೆಗೆದುಕೊಳ್ಳಿ.. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ವಿದ್ಯಾರ್ಥಿವೃಂದಕ್ಕೆ ಮುಂದಿನ ಯೋಚನೆ. ರೈಲ್ವೇ ಪ್ರಯಾಣದಲ್ಲಿ ಜಾಗರೂಕತೆ ಇರಲಿ. ಬಾಲ್ಯದ ಗುರುಗಳ ಭೇಟಿಯ ಸಾಧ್ಯತೆ.ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನರಸಿಂಹ ಕವಚ ಓದಿ.

ತುಲಾ:

ಬಾಲ್ಯದ ಗುರುಗಳ ಭೇಟಿ.. ಆರೋಗ್ಯ ಸುಧಾರಣೆಗಾಗಿ ಧನವ್ಯಯ. ಪ್ರಾಕೃತಿಕ ತಾಣಕ್ಕೆ ಸಣ್ಣ ಭೇಟಿ. ಹಿಂದೆ ಕಲಿತಿದ್ದ ಕಲೆ ಉಪಯೋಗಕ್ಕೆ. ಧಾರ್ಮಿಕ ಕೂಟಗಳಲ್ಲಿ ಭಾಗಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.

ವೃಶ್ಚಿಕ:

ದೂರದೇಶದಲ್ಲಿರುವ ಮಕ್ಕಳ ಆಗಮನ. ಉದ್ಯೋಗಸ್ಥರಿಗೆ ಸಪ್ತಾಹ ಅಂತ್ಯದ ಆನಂದ. ಪರಿಸರ ರಕ್ಷಣೆಯ ಕಾರ್ಯಗಳಲ್ಲಿ ಭಾಗಿ. ಗೃಹೋದ್ಯಮಗಳಿಗೆ ಅನುಕೂಲದ ದಿನ. ತಾಯಿಯ ಕಡೆಯ ಬಂಧುಗಳ ಆಗಮನ. ಗಣೇಶ ಸ್ತೋತ್ರ, ವೇದಸಾರ ಶಿವಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

ಧನು:

ಸಂಸಾರದ ಆವಶ್ಯಕತೆಗಳ ಕಡೆಗೆ ಗಮನ.. ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಅನುಕೂಲ. ಬೌದ್ಧಿಕ ಕೆಲಸಗಳಿಗೆ ಒದಗಿದ ವಿಘ್ನ ದೂರ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವಕಾಶ. ಬೀದಿಬದಿಯ ವ್ಯಾಪಾರಿಗಳಿಗೆ ಅನುಕೂಲದ ದಿನ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಮಕರ:

ಸಪ್ತಾಹದ ಮೊದಲ ದಿನದಿಂದ ಹೊಸ ವಿಭಾಗದ ಹೊಷೆಗಾರಿಕೆ.. ತಾಯಿಯ ಆರೋಗ್ಯದ ಕಡೆಗೆ ಗಮನ. ಗೃಹೋಪಯೋಗಿ ಸಾಮಗ್ರಿಗಳ ಖರೀದಿಗೆ ಧನವ್ಯಯ. ಆಪ್ತ ಗೆಳೆಯರಿಂದ ಅನಿರೀಕ್ಷಿತ ದೂರ ಪ್ರವಾಸದಿಂದ ಆನಂದ. ಗಷೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ:

ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ.. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ನಾಳೆಯ ಸಾಮಾಜಿಕ ಕಾರ್ಯಗಳಿಗೆ ಸಿದ್ಧತೆ. ಮಕ್ಕಳ ವ್ಯವಹಾರ ಸ್ಥಿರಗೊಳಿಸಲು ಸಹಾಯ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಶನಿ ಮಹಾತ್ಮೆ ಓದಿ.

ಮೀನ:

ಸಪ್ತಾಹದ ಮೊದಲ ದಿನ ಎಲ್ಲವೂ ಶುಭ.. ಅಧಿಕಾರಿ ವರ್ಗದಿಂದ ಅನುಕೂಲಕರ ಸ್ಪಂದನ. ಖಾದ್ಯ ಪದಾರ್ಥ ಉದ್ಯಮಿಗಳಿಗೆ ಹೆಚ್ಚು ಅನುಕೂಲದ ಸೂಚನೆ. ಮಕ್ಕಳ ಅಧ್ಯಯನಾಸಕ್ತಿಗೆ ಪ್ರೋತ್ಸಾಹ. ಸ್ವಂತದ ಆರೋಗ್ಯದ ಕಡೆಗೆ ಗಮನ ಇರಲಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.