Brindavihari: ಬೃಂದವಿಹಾರಿ ರಿಲೀಸ್ ಡೇಟ್ ಮುಂದೂಡಿಕೆ
Brindavihari: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬೃಂದಾವಿಹಾರಿ' ಸಿನಿಮಾದ ರಿಲೀಸ್ ಡೇಟ್ ಮುಂದೂಡಲಾಗಿದ್ದು, ನ.20 ರಂದು ಬಿಡುಗಡೆಯಾಗಲಿದೆ.
Brindavihari: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬೃಂದಾವಿಹಾರಿ' ಸಿನಿಮಾದ ರಿಲೀಸ್ ಡೇಟ್ ಮುಂದೂಡಲಾಗಿದ್ದು, ನ.20 ರಂದು ಬಿಡುಗಡೆಯಾಗಲಿದೆ. ಈ ಮೊದಲು ಅ.16 ತೆರೆಗೆ ಬರಬೇಕಿತ್ತು.
ಸದ್ಯ, ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ 'ಪ್ರೇಮದ ಊರಲಿ' ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಬಾಕ್ಸ್ ಆಫೀಸ್ ಸಂಘರ್ಷ ತಪ್ಪಿಸಲು ಚಿತ್ರತಂಡವು ಈ ಕ್ರಮವನ್ನು ಕೈಗೊಂಡಿದೆ.
ಈ ಸಿನಿಮಾವು 1945 ರಲ್ಲಿ ನಡೆಯುವ ರೋಮ್ಯಾಂಟಿಕ್ & ಕೌಟುಂಬಿಕ ಕಥೆಯಾಧರಿಸಿದ್ದು, ಗಣೇಶ್ 'ಮಾಧವ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಿಕಾ ಭಟ್ 'ರಾಧಾ' ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಮಾಳವಿಕಾ ಶರ್ಮಾ, ರಂಗಾಯಣ ರಘು, ಸಾಧು ಕೋಕಿಲ ಹಾಗೂ ಅಚ್ಯುತ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀನಿವಾಸ್ ರಾಜು ಆಕ್ಷನ್ ಕಟ್ ಹೇಳಿದ್ದು, ಸಮೃದ್ಧಿ ಮಂಜುನಾಥ್ ಬಂಡವಾಳ ಹಾಕಿದ್ದಾರೆ. ಹೆಶಮ್ ಅಬ್ದುಲ್ ವಹಾಬ್ ಮ್ಯೂಸಿಕ್ ನೀಡಿದ್ದಾರೆ. ವೆಂಕಟ್ ಪ್ರಸಾದ್ ಕ್ಯಾಮೆರಾ ವರ್ಕ್ ಮಾಡಿದ್ದು, ಕವಿರಾಜ್ ಮತ್ತು ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
'ಪ್ರೇಮದ ಊರಲಿ'ಗೆ ಜೈ ಎಂದ ಪ್ರೇಕ್ಷಕರು
ಕನ್ನಡದ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಸ್ಯಾಕ್ನಿಲ್ಕ್ ಪ್ರಕಾರ, 20ನೇ ದಿನವಾದ ಬುಧವಾರದಂದು ರೂ.4.50 ಕೋಟಿ ನೆಟ್ ಗಳಿಕೆಯಾಗಿದ್ದು, 1,372 ಶೋಗಳು ಪ್ರದರ್ಶನಗೊಂಡಿವೆ. ಈ ಮೂಲಕ ವಿಶ್ವಾದ್ಯಂತ ರೂ.72.71 ಗ್ರಾಸ್ ಕಲೆಕ್ಷನ್ ಮಾಡಿದೆ.
ಸೆ.25 ರಂದು ಬರೀ 60 ಶೋ ಪ್ರದರ್ಶನದೊಂದಿಗೆ ಈ ಸಿನಿಮಾ ಬಿಡುಗಡೆಗೊಂಡಿತ್ತು. ಇದು ಹಳ್ಳಿಯೊಂದರ ತಂದೆ-ಮಗನ ಕಥೆಯಾಗಿದೆ. ಶ್ರೀ ಮಹದೇವ್, ರಂಗಾಯಣ ರಘು, ತಪಸ್ವಿನಿ ಪೂನಾಚ & ರಾಮಿಕಾ ಶಿವು ಮುಖ್ಯಭೂಮಿಕೆಯಲ್ಲಿದ್ದಾರೆ.
ನಿರ್ದೇಶಕ ಮನೋಜ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ವೆನಿಲ್ಲಾ ಎಂಟರ್ಟೈನ್ಮೆಂಟ್ಸ್ & ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ನಡಿ ಜಂಟಿಯಾಗಿ ನಿರ್ಮಿಸಲಾಗಿದೆ.