ತಿರುಪ್ಪರಂಕುಂದ್ರಂ: ದೀಪತ್ತೂನ್ ಸ್ತಂಭದಲ್ಲಿ ಬೆಳಗಿದ ದೀಪ

Thiruparankundram : ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ದೀಪತ್ತೂನ್ ಸ್ತಂಭದಲ್ಲಿ ಶನಿವಾರ ಸಂಜೆ ಸುಪ್ರೀಂಕೋರ್ಟ್ ನೇಮಿಸಿದ ಇಬ್ಬರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಲಾಯಿತು.

Nov 28, 2026 - 21:43
Nov 28, 2026 - 21:45
ತಿರುಪ್ಪರಂಕುಂದ್ರಂ: ದೀಪತ್ತೂನ್ ಸ್ತಂಭದಲ್ಲಿ ಬೆಳಗಿದ ದೀಪ
ಚಿತ್ರಕೃಪೆ: https://www.thehindu.com/

ಮಧುರೈ: ತಿರುಪ್ಪರಂಕುಂದ್ರಂ ಬೆಟ್ಟದ ದೀಪತ್ತೂನ್ ಸ್ತಂಭದಲ್ಲಿ ಶನಿವಾರ ಸಂಜೆ ಸುಪ್ರೀಂಕೋರ್ಟ್ ನೇಮಿಸಿದ ಇಬ್ಬರು ಮಾಜಿ ಹೈಕೋರ್ಟ್ ನ್ಯಾಯಾಧೀಶರ ಸಮ್ಮುಖದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಲಾಯಿತು.

ಬೆಟ್ಟದ ಮೇಲಿನ ದೀಪತ್ತೂನ್ ಸ್ತಂಭದಲ್ಲಿ ದೀಪ ಬೆಳಗುವುದನ್ನು ಕಂಡು ಭಕ್ತರು ಸಂಭ್ರಮಿಸಿದರು. 'ವೆಟ್ರಿವೇಲ್ ಮುರುಗನುಕ್ಕು ಅರೋಹರ' ಮತ್ತು 'ವೆಟ್ರಿವೇಲ್, ವೀರವೇಲ್' ಎಂಬ ಜಯಘೋಷಗಳೊಂದಿಗೆ ಸುಬ್ರಹ್ಮಣ್ಯ ಸ್ವಾಮಿಯನ್ನು ನೆನೆದರು. ಈ ದೀಪ ಬೆಳಗಿಸಲು 30 ಕೆಜಿ ತುಪ್ಪ, 50 ಮೀಟರ್ ಉದ್ದದ ಹತ್ತಿ ಬತ್ತಿ ಹಾಗೂ 5 ಕೆಜಿ ಕರ್ಪೂರ ಬಳಸಲಾಯಿತು. 

ಮೇಘಾಲಯ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್.ವೈದ್ಯನಾಥನ್ ಅವರು, ಅಧಿಕಾರಿಗಳು ಹಾಗೂ ದೇಗುಲದ ಅರ್ಚಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಶನಿವಾರ ಸಂಜೆ 5 ಗಂಟೆಗೆ ದೀಪವನ್ನು ಬೆಳಗಿಸಲಾಗುವುದು ಎಂದು ಘೋಷಿಸಿದ್ದರು.

ನ್ಯಾಯಮೂರ್ತಿ ವೈದ್ಯನಾಥನ್ ಹಾಗೂ ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ವಿ.ಪಾರ್ಥಿಬನ್ ಅವರು, ಬೆಳಗ್ಗೆಯೇ ಚೆನ್ನೈನಿಂದ ತಿರುಪ್ಪರಂಕುಂದ್ರಂಗೆ ಆಗಮಿಸಿದ್ದರು. 

ಭದ್ರತೆಗಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.