Premada Oorali: 50 ದಿನ ಪೂರೈಸಿದ ಪ್ರೇಮದ ಊರಲಿ!

Premada Oorali: ಕನ್ನಡದ 'ಪ್ರೇಮದ ಊರಲಿ' ಸಿನಿಮಾ ರಾಜ್ಯದಾದ್ಯಂತ 50 ದಿನಗಳನ್ನು ಪೂರೈಸಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳುತ್ತಿದೆ.

Nov 16, 2026 - 13:16
Nov 16, 2026 - 13:16
Premada Oorali: 50 ದಿನ ಪೂರೈಸಿದ ಪ್ರೇಮದ ಊರಲಿ!

Premada Oorali: ಕನ್ನಡದ 'ಪ್ರೇಮದ ಊರಲಿ' ಸಿನಿಮಾ ರಾಜ್ಯದಾದ್ಯಂತ  50 ದಿನಗಳನ್ನು ಪೂರೈಸಿದ್ದು, ಯಶಸ್ವಿಯಾಗಿ ಪ್ರದರ್ಶನಗೊಳುತ್ತಿದೆ. ಈ ಚಿತ್ರ ಮೆಗಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. 

ಸೆ.25 ರಂದು ಕೇವಲ 60 ಶೋ ಪ್ರದರ್ಶನದೊಂದಿಗೆ ಬಿಡುಗಡೆಗೊಂಡ ಈ ಮ್ಯೂಸಿಕಲ್ ರೋಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾಕ್ಕೆ ಪ್ರೇಕ್ಷಕರು ಮನಸೊತ್ತಿದ್ದಾರೆ. 

ಇದು ಹಳ್ಳಿಯೊಂದರ ತಂದೆ-ಮಗನ ಕಥೆಯಾಗಿದೆ. ಶ್ರೀರಾಮ್, ರಂಗಾಯಣ ರಘು, ತಪಸ್ವಿನಿ ಪೂನಾಚ ರಾಮಿಕಾ ಶಿವು, ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಗಿರಿ, ಧರ್ಮಣ್ಣ ಕಡೂರು, ಮಿತ್ರ, ಇಳಾ ವಿಟ್ಲ, ಸುಶ್ಮಿತಾ, ಸುವಿಶ್ ಚಂದ್ರ,  ಅಭಿಷೇಕ್ ಕಲ್ಮಾಣಿ ಮತ್ತು ಅಭಿ ಮಹೇಶ್ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 

ನಿರ್ದೇಶಕ ಮನೋಜ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ವೆನಿಲ್ಲಾ ಎಂಟರ್‌ಟೈನ್‌ಮೆಂಟ್ಸ್ & ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಜಂಟಿಯಾಗಿ ನಿರ್ಮಿಸಲಾಗಿದೆ. ಸುನಾದ್ ಗೌತಮ್ ಸಂಗೀತ ನೀಡಿದ್ದು, ರಾಜ್‌ಕಾಂತ್ ಎಸ್.ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.