Music Director Deva: ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನ
Deva: ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನರಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಚೆನ್ನೈ: 'ದೇವಾ' ಎಂದೇ ಖ್ಯಾತರಾಗಿದ್ದ ತಮಿಳು ಸಂಗೀತ ನಿರ್ದೇಶಕ ದೇವನೇಸನ್ ಚೊಕ್ಕಲಿಂಗಂ (Devanesan Chokkalingam) ಇಂದು ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಬೆಳಿಗ್ಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಸೂರ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ. 'ಟಿ' ನಗರದಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ.
ನವೆಂಬರ್ 20, 1950ರಲ್ಲಿ ಜನಿಸಿದ ದೇವಾ, 1990ರ ದಶಕದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳ 400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ.
ತಮಿಳಿನಲ್ಲಿ ದೇವಾ ಸಂಗೀತ ನೀಡಿದ್ದ ಅಣ್ಣಾಮಲೈ, ಬಾಷಾ, ಅಸೈ, ಕಾದಲ್ ಕೊಟ್ಟೈ, ನೆರುಕ್ಕು ನೇರ್, ನಿನೈತೆನ್ ವಂಧ್ಯಾ, ಪ್ರಿಯಮುದನ್, ವಾಲೀ ಹಾಗೂ ಕುಶಿ ಸಿನಿಮಾಗಳು ಹಿಟ್ ಆಗಿದ್ದವು.
ಕನ್ನಡ ಚಿತ್ರಗಳಲ್ಲೂ ಅವರು ಕೆಲಸ ಮಾಡಿದ್ದಾರೆ. ಅಮೃತವರ್ಷಿಣಿ, ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ರಾಜ ಸರಸಿಂಹ, ವಿಜಯದಶಮಿ ಹಾಗೂ ಕದಂಬ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.