Premada Oorali: 'ಪ್ರೇಮದ ಊರಲಿ' 50 ಕೋಟಿ ಕ್ಲಬ್ ಸೇರಿ ಬಿಡ್ತು!

Premada Oorali: ಕನ್ನಡದ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದ್ದು, ಸದ್ಯ 50 ಕೋಟಿ ಕ್ಲಬ್ ಸೇರಿದೆ.

Oct 12, 2026 - 21:24
Premada Oorali: 'ಪ್ರೇಮದ ಊರಲಿ' 50 ಕೋಟಿ ಕ್ಲಬ್ ಸೇರಿ ಬಿಡ್ತು!

Premada Oorali: ಕನ್ನಡದ 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಸ್ಯಾಕ್ನಿಲ್ಕ್ ಪ್ರಕಾರ, 17ನೇ ದಿನವಾದ ಭಾನುವಾರದಂದು ರೂ.8 ಕೋಟಿ ನೆಟ್ ಗಳಿಕೆಯಾಗಿದ್ದು, 1,291 ಶೋಗಳು ಪ್ರದರ್ಶನಗೊಂಡಿವೆ. ಈ ಮೂಲಕ ವಿಶ್ವಾದ್ಯಂತ ರೂ.56.39 ಗ್ರಾಸ್ ಕಲೆಕ್ಷನ್ ಮಾಡಿದೆ. 

ಸೆ.25 ರಂದು ಬರೀ 60 ಶೋ ಪ್ರದರ್ಶನದೊಂದಿಗೆ ಈ ಸಿನಿಮಾ ಬಿಡುಗಡೆಗೊಂಡಿತ್ತು. ಇದು ಹಳ್ಳಿಯೊಂದರ ತಂದೆ-ಮಗನ ಕಥೆಯಾಗಿದೆ. ಶ್ರೀ ಮಹದೇವ್, ರಂಗಾಯಣ ರಘು, ತಪಸ್ವಿನಿ ಪೂನಾಚ ಹಾಗೂ ರಾಮಿಕಾ ಶಿವು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. 

ನಿರ್ದೇಶಕ ಮನೋಜ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ವೆನಿಲ್ಲಾ ಎಂಟರ್‌ಟೈನ್‌ಮೆಂಟ್ಸ್ & ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಜಂಟಿಯಾಗಿ ನಿರ್ಮಿಸಲಾಗಿದೆ.

ಸುನಾದ್ ಗೌತಮ್ ಮ್ಯೂಸಿಕ್ ನೀಡಿದ್ದು, ಈಗಾಗಲೇ ಸಿನಿಮಾದ ಹಾಡುಗಳು ಹಿಟ್ ಆಗಿವೆ. ರಾಜ್‌ಕಾಂತ್ ಎಸ್.ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.