ಆರ್ಯಾಪು: ಗಿರಿಜಾ ಕಲ್ಯಾಣೋತ್ಸವ ಹಾಗೂ ಸಂತರ ಉಪಸ್ಥಿತಿಯಲ್ಲಿ ನಡೆಯುವ ಕೇಸರಿ ಸಂಗಮ ಕಾರ್ಯಕ್ರಮದಲ್ಲಿ ಹಿಂದುಗಳೆಲ್ಲರೂ ಪಾಲ್ಗೊಳ್ಳಬೇಕು ಎಂದು ಡಾ.ಸುರೇಶ್ ಪುತ್ತೂರಾಯ ಹೇಳಿದರು.
ಇಲ್ಲಿನ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ, ಗಿರಿಜಾ ಕಲ್ಯಾಣೋತ್ಸವ, ಕೇಸರಿ ಸಂಗಮ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಪೂರ್ವಭಾವಿ ಸಭೆ & ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೂ ಸಮಾಜಕ್ಕೆ ದೊಡ್ಡ ಶಕ್ತಿಯಾಗಿರುವ ಯುವಕರಿಗೆ ಕ್ಷಾತ್ರ ತೇಜಸ್ಸನ್ನು ತುಂಬುವ ದೃಷ್ಟಿಯಿಂದ, ಕಳೆದ 3 ವರ್ಷಗಳಿಂದಲೂ ಶ್ರೀನಿವಾಸ ಕಲ್ಯಾಣೋತ್ಸವದಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಮೂಲಕ ಲಕ್ಷಾಂತರ ಹಿಂದೂ ಬಂಧುಗಳನ್ನು ಒಗ್ಗೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಪುತ್ತೂರಿನ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ, ಗಿರಿಜಾ ಕಲ್ಯಾಣೋತ್ಸವ ಏರ್ಪಡಿಸಿರುವುದು ಹಿಂದೂಗಳಾದ ನಮ್ಮೆಲ್ಲರ ಸೌಭಾಗ್ಯ. ಶಿವ ಪಾರ್ವತಿಯ ಕಲ್ಯಾಣವನ್ನು ಕಣ್ತುಂಬಿಕೊಳ್ಳಲು ಅವಕಾಶವನ್ನು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ. ಜೊತೆಗೆ ಸಾಮೂಹಿಕ ವಿವಾಹದಲ್ಲೂ ನಾವೆಲ್ಲರು ಪಾಲ್ಗೊಳ್ಳಬೇಕು ಎಂದರು.
ಕ್ಷೇತ್ರದ ತಂತ್ರಿ ಪ್ರೀತಂ ಪುತ್ತೂರಾಯ ಮಾತನಾಡಿ, 'ಧಾರ್ಮಿಕ ಕಾರ್ಯಕ್ರಮದಲ್ಲಿ ನಾವೆಲ್ಲ ಪಾಲ್ಗೊಂಡಾಗ ಮಾತ್ರ, ನಮಗೆಲ್ಲ ಭಗವಂತನ ಅನುಗ್ರಹ ಪ್ರಾಪ್ತಿಯಾಗಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತಿಲ ಪರಿವಾರದ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪ್ರಮುಖರಾದ ರವಿಕುಮಾರ್ ರೈ, ಕೋಶಾಧಿಕಾರಿ ಉದಯ ರೈ. ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಘಾಟೆ, ಅನಿಲ್ ತೆಂಕಿಲ, ಕಾರ್ಯಾಧ್ಯಕ್ ಅನಿಲ್ ಕಣ್ಣಾರ್ನೂಜಿ, ಉಪಸ್ತಿತರಿದ್ದರು. ಉದಯಕುಮಾರ್ ಸ್ವಾಗತಿಸಿದರು. ಅನಿಲ್ ತೆಂಕಿಲ ವಂದಿಸಿದರು.