Mangaluru Dasara: ಗೋಕರ್ಣನಾಥೇಶ್ವರ ದೇವರ ಮೆರವಣೆಗೆ.. ಪರ್ಯಾಯ ಮಾರ್ಗ ಬಳಕೆಗೆ ಪೋಲೀಸರ ಸಲಹೆ

Mangaluru Dasara: ದಸರಾ ಪ್ರಯುಕ್ತ ನಾಳೆ ಸಂಜೆ 4 ರಿಂದ ಅ.22 ಬೆಳಗ್ಗೆ 6 ಗಂಟೆವರೆಗೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರು ಹಾಗೂ ಟ್ಯಾಬುಲುಗಳ ಮೆರವಣೆಗೆ ನಡೆಯಲಿದೆ. ವಾಹನ ದಟ್ಟಣೆ ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

Oct 20, 2026 - 12:31
Oct 20, 2026 - 12:35
Mangaluru Dasara: ಗೋಕರ್ಣನಾಥೇಶ್ವರ ದೇವರ ಮೆರವಣೆಗೆ.. ಪರ್ಯಾಯ ಮಾರ್ಗ ಬಳಕೆಗೆ ಪೋಲೀಸರ ಸಲಹೆ

ಮಂಗಳೂರು: ದಸರಾ ಪ್ರಯುಕ್ತ ನಾಳೆ (ಅ.21) ಸಂಜೆ 4 ರಿಂದ ಅ.22 ಬೆಳಗ್ಗೆ 6 ಗಂಟೆವರೆಗೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರು ಹಾಗೂ ಟ್ಯಾಬುಲುಗಳ ಮೆರವಣೆಗೆ ನಡೆಯಲಿದೆ. 

ಕುದ್ರೋಳಿ ದೇವಸ್ಥಾನದ ದ್ವಾರ - ಮಣ್ಣಗುಡ್ಡೆ ಜಂಕ್ಷನ್ - ನಾರಾಯಣಗುರು ವೃತ್ತ (ಲೇಡಿಹಿಲ್) - ಲಾಲ್‌ಭಾಗ್ - ಬಳ್ಳಾಲ್ ಭಾಗ್ - ಪಿವಿಎಸ್ ಜಂಕ್ಷನ್ - ನವಭಾರತ ವೃತ್ತ -ಸಿಟಿ ಸೆಂಟರ್ - ಹಂಪನಕಟ್ಟೆ- ಕೆಬಿ ಕಟ್ಟೆ - ಕಾರ್ ಸ್ಟ್ರೀಟ್ - ನ್ಯೂಚಿತ್ರಾ ಜಂಕ್ಷನ್ ಮೂಲಕ ಮೆರವಣಿಗೆಯು ಸಾಗಲಿದೆ. 

ಈ ಹಿನ್ನೆಲೆ, ಮಧ್ಯಾಹ್ನ  2 ಗಂಟೆಯಿಂದ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡಿವುದಕ್ಕೆ ಪೊಲೀಸರು ಸಲಹೆ ನೀಡಿದ್ದಾರೆ. ಜೊತೆಗೆ ಮೆರವಣಿಗೆ ಹೋಗುವ ರಸ್ತೆ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆಯೂ ಸೂಚಿಸಲಾಗಿದೆ.  
 
ಪರ್ಯಾಯ ಮಾರ್ಗಗಳು: 

* ಕೊಟ್ಟಾರ ಚೌಕಿ ಜಂಕ್ಷನ್‌ನಿಂದ ಲೇಡಿಹಿಲ್ ಮುಖಾಂತರ ಮಂಗಳೂರು ನಗರಕ್ಕೆ ಬರುವ ಎಲ್ಲಾ ವಿವಿಧ ವಾಹನಗಳು ಬದಲಿ ಮಾರ್ಗವಾದ ಕುಂಟಿಕಾನ - ಕೆಪಿಟಿ - ನಂತೂರು ಮುಖೇನ ಮಂಗಳೂರು ನಗರಕ್ಕೆ ಸಂಚರಿಸುವುದು.  

* ಬಂಟ್ಸ್ ಹಾಸ್ಟೆಲ್‌ನಿಂದ ಪಿವಿಎಸ್ ಮುಖಾಂತರ ಎಂಜಿ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಬಂಟ್ಸ್ ಹಾಸ್ಟೆಲ್ - ಭಾರತ್ ಬೀಡಿ - ಬಟ್ಟಗುಡ್ಡ - ಕೆಪಿಟಿ ಮುಖೇನ ಅಥವಾ ಬಂಟ್ಸ್ ಹಾಸ್ಟೆಲ್ - ಭಾರತ್ ಬೀಡಿ-ಮಲ್ಲಿಕಟ್ಟೆ ಮಾರ್ಗವಾಗಿ ಸಂಚರಿಸುವುದು.

* ಕೆಎಸ್‌ಆರ್‌ಟಿಸಿ ಜಂಕ್ಷನ್‌ನಿಂದ ಲಾಲ್ ಬಾಗ್ ಕಡೆಗೆ ಬರುವ ವಾಹನಗಳು ಕೆಎಸ್‌ಆರ್‌ಟಿಸಿ ಜಂಕ್ಷನ್ - ಕಾಪಿಕಾಡ್- ಕುಂಟಿಕಾನ ಮೂಲಕ ಅಥವಾ ಕೆಎಸ್‌ಆರ್‌ಟಿಸಿ ಜಂಕ್ಷನ್ - ಬಿಜೈ ಬಟ್ಟಗುಡ್ಡ ಮಾರ್ಗವಾಗಿ ಸಂಚರಿಸುವುದು. 

* ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ಸುಗಳು ಕೆಎಸ್‌ಆರ್‌ಟಿಸಿ ಜಂಕ್ಷನ್‌ನಿಂದ - ಕಾಪಿಕಾಡ್- ಕುಂಟಿಕಾನ ಮೂಲಕ ಅಥವಾ ಬಿಜೈ ಬಟ್ಟಗುಡ್ಡ ಮೂಲಕ ಸಂಚರಿಸುವುದು.  

* ಹಂಪನಕಟ್ಟೆ ಕಡೆಯಿಂದ ಕೆಎಸ್ಆರ್ ರಸ್ತೆ - ನವಭಾರತ್ ವೃತ್ತದ ಮೂಲಕ ಪಿವಿಎಸ್ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಹಂಪನಕಟ್ಟೆ - ಎಲ್.ಹೆಚ್.ಹೆಚ್ - ಅಂಬೇಡ್ಕರ್ ಜಂಕ್ಷನ್ ಮೂಲಕ ಸಂಚರಿಸುವುದು.

* ನ್ಯೂ ಚಿತ್ರಾ ಜಂಕ್ಷನ್‌ನಿಂದ ನವಭಾರತ ಕಡೆಗೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.

* ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್ - ದುರ್ಗಾಮಹಲ್ - ಕುದ್ರೋಳಿ ದೇವಸ್ಥಾನ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.

ಮಂಗಳೂರು ದಸರಾ ಮೆರವಣಿಗೆ ನೋಡಲು ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬಹುದು:

* ಕರಾವಳಿ ಮೈದಾನ ಪಾರ್ಕಿಂಗ್
* ಅಳಕೆ ಮಾರ್ಕೆಟ್ ಪಾರ್ಕಿಂಗ್ 
* ಉರ್ವ ಮಾರ್ಕೆಟ್ ಮೈದಾನ  
* ಉರ್ವ ಕೆನರಾ ಸ್ಕೂಲ್ ಪಾರ್ಕಿಂಗ್ 
* ಕೆನರಾ ಡೊಂಗರಕೇರಿ ಸ್ಕೂಲ್ ಪಾರ್ಕಿಂಗ್
* ಪೊಂಪೈ ಚರ್ಚ್ ಪಾರ್ಕಿಂಗ್ 
* ದುರ್ಗಾಮಹಲ್ ಹೊಟೇಲ್ ಪಾರ್ಕಿಂಗ್ 
* ಕುದ್ರೋಳಿ ನಾರಾಯಣ ಕಾಲೇಜು ಪಾರ್ಕಿಂಗ್ 
* ಬಿಇಎಂ ಸ್ಕೂಲ್ ಪಾರ್ಕಿಂಗ್ 
* ಸರ್ಕಾರಿ ಹೆಣ್ಣುಮಕ್ಕಳ ಪ್ರೌಢ ಶಾಲೆ ಕಾರ್ ಸ್ಟ್ರೀಟ್
* ಹೊಟೇಲ್ ವಿಮಲೇಶ್ ಪಾರ್ಕಿಂಗ್

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.