Mangaluru: ಪೊಳಲಿ ಟೈಗರ್ಸ್ ತಂಡದ ಮುಡಿಗೇರಿದ 'ಕುಡ್ಲದ ಪಿಲಿಪರ್ಬ- 2026' ಕಿರೀಟ
Mangaluru: 'ಕುಡ್ಲದ ಪಿಲಿಪರ್ಬ- 2026'ರ ಕಿರೀಟವು ಪೊಳಲಿ ಟೈಗರ್ಸ್ ತಂಡದ ಮುಡಿಗೇರಿದೆ.
ಮಂಗಳೂರು: ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿ, ಕೇಂದ್ರ ಮೈದಾನದಲ್ಲಿ ಜರುಗಿದ 'ಕುಡ್ಲದ ಪಿಲಿಪರ್ಬ-2026 ಸೀಸನ್-5'ಕ್ಕೆ ಅದ್ದೂರಿ ತೆರೆ ಬಿದ್ದಿದೆ.
ಒಟ್ಟು 11 ತಂಡಗಳ ನಡುವಿನ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಅಂತಿಮವಾಗಿ 'ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್' ತಂಡವು ಪ್ರತಿಷ್ಠಿತ 'ಪಿಲಿಪರ್ಬ-2026'ರ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ನಂದಿಗುಡ್ಡ ಫ್ರೆಂಡ್ಸ್ ಹುಲಿ ಬಾಬುಗುಡ್ಡ ತಂಡವು ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡರೆ, ರಾಜ್ ಫ್ರೆಂಡ್ಸ್ ಪೊಳಲಿ ಪುರಲ್ದ ಅಪ್ಪೆನ ಮೋಕೆದ ಜೋಕುಲು & ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗವು ಜಂಟಿಯಾಗಿ ತೃತೀಯ ಪ್ರಶಸ್ತಿಗೆ ಭಾಜನವಾದವು.

ಪಿಲಿಪರ್ಬದ ವಿಶೇಷ ಬಹುಮಾನಗಳಾದ 'ಕಪ್ಪು ಪಿಲಿ' ಪ್ರಶಸ್ತಿಯನ್ನು ಟ್ಯಾಲೆಂಟ್ ಟೈಗರ್ಸ್ ಎಂವೈಬಿ ಕಚ್ಚೂರು ಮಾಲ್ತಿದೇವಿ ಅಪ್ಪೆನ ಮೋಕೆದ ಜೋಕುಲು ತಂಡವು ತನ್ನದಾಗಿಸಿಕೊಂಡಿತು.
'ಮರಿ ಹುಲಿ' ಪ್ರಶಸ್ತಿಯನ್ನು ರಾಜ್ ಫ್ರೆಂಡ್ಸ್ ಪೊಳಲಿ ಪುರಲ್ದ ಅಪ್ಪೆನ ಮೋಕೆದ ಜೋಕುಲು ಹಾಗೂ ಕಾರ್ಕಳ ಟೈಗರ್ಸ್ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಜಂಟಿಯಾಗಿ ಪಡೆದುಕೊಂಡಿತು.
ಬಹುನಿರೀಕ್ಷಿತ ಪ್ರಶಸ್ತಿಯಾದ 'ಪರ್ಬದ ಪಿಲಿ' ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ ಭಾಜನವಾಯಿತು.
ಶಿಸ್ತಿನ ತಂಡವಾಗಿ ಪಾಂಡೇಶ್ವರ ಶಾರದಾ ಹುಲಿ ಹೊರ ಹೊಮ್ಮಿತು. ತಾಸೆ ಹಿಮ್ಮೇಳ ವಿಭಾಗದಲ್ಲಿ ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್, ಬಣ್ಣಗಾರಿಕೆ ಮತ್ತು ಮುಡಿ ವಿಭಾಗದಲ್ಲಿ ಫ್ರೆಂಡ್ಸ್ ಬಪ್ಪಲ್ ಶ್ರೀ ದುರ್ಗಾಪರಮೇಶ್ವರಿ ಹುಲಿ ಪ್ರಶಸ್ತಿಯನ್ನು ಪಡೆದಕೊಂಡಿತು.
ಮೆರವಣಿಗೆ ವಿಭಾಗ ಹಾಗೂ ಧರಣಿ ಮಂಡಲ ಪ್ರಶಸ್ತಿಯನ್ನು ಹನುಮಾನ್ ಟೈಗರ್ಸ್ ಉಪ್ಪಳ ಬಾಚಿಕೊಂಡಿತು. ಕೊನೆಯದಾಗಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಶಾಸಕ ಡಾ.ಭರತ್ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು, ಚಲನಚಿತ್ರ ನಟ ಶೈನ್ ಶೆಟ್ಟಿ, ಅರ್ಜುನ್ ದೇವ್, ತನ್ವಿ ರಾಮ್, ರೂಪಶ್ರೀ ವರ್ಕಾಡಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಸಹಾನ್, ಜಗದೀಶ್ ಕದ್ರಿ, ನರೇಶ್ ಪ್ರಭು, ಸೇರಿದಂತೆ ಇತರರು ಇದ್ದರು.