Football: ಉರುಗ್ವೆ ವಿರುದ್ಧ ಭಾರತಕ್ಕೆ ಸೋಲು!

Football: ಉರುಗ್ವೆ ವಿರುದ್ಧ ಭಾರತವು 1-6 ಅಂತರದಲ್ಲಿ ಸೋಲು ಕಂಡಿದೆ.

Oct 7, 2026 - 18:30
Football: ಉರುಗ್ವೆ ವಿರುದ್ಧ ಭಾರತಕ್ಕೆ ಸೋಲು!

ಕೋಲ್ಕತ್ತಾ: ಇಲ್ಲಿ ಮಂಗಳವಾರ ನಡೆದ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ, 2 ಬಾರಿಯ ಫಿಫಾ ವಿಶ್ವಕಪ್ ಚಾಂಪಿಯನ್ ಉರುಗ್ವೆ ವಿರುದ್ಧ ಭಾರತವು 1-6 ಅಂತರದಲ್ಲಿ ಸೋಲು ಕಂಡಿದೆ. 

ಉರುಗ್ವೆಯ ಡಾರ್ವಿನ್ ನುನೆಜ್ ಮೊದಲು ಗೋಲು ಗಳಿಸಿ, ತಮ್ಮ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು. 22ನೇ ನಿಮಿಷದಲ್ಲಿ ಭಾರತದ ಅನಿರುದ್ಧ್ ಥಾಪಾ ಗೋಲು ಗಳಿಸಿ 1-1 ಸಮಬಲ ಸಾಧಿಸಿದರು. 

ಆ ನಂತರ, ಉರುಗ್ವೆ ಮೈಲುಗೈ ಸಾಧಿಸಿತು. ಮ್ಯಾಕ್ಸಿಮಿಲಿಯಾನೋ ಅರಾಜೊ 2 ಗೋಲು ಗಳಿಸಿದರೆ, ರೊಡ್ರಿಗೋ ಜಲಜಾರ್, ಜುವಾನ್ ಸನಾಬ್ರಿಯಾ ಹಾಗೂ ರೊಡ್ರಿಗೋ ಅಗುಯಿರೆ ತಲಾ 1 ಗೋಲು ಸಿಡಿಸಿದರು.

ಇದಕ್ಕೂ ಮುನ್ನ, ಭಾರತವು ಬ್ರೆಜಿಲ್ ವಿರುದ್ಧ 0-4 ಅಂತರದಲ್ಲಿ ಸೋತಿತ್ತು. ಹಾಗೆಯೇ ಪನಾಮ ಎದುರಿಗೆ ಪಂದ್ಯವನ್ನು 1-1 ಅಂತರದಲ್ಲಿ 'ಟೈ' ಮಾಡಿಕೊಂಡಿತ್ತು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.