Asian Games-2026: ನಾಡಿದ್ದು ಫೈನಲ್.. ಭಾರತಕ್ಕೆ ಚಿನ್ನ ಸಿಗುತ್ತಾ?
Asian Games-2026: ಏಷ್ಯನ್ ಗೇಮ್ಸ್-2026ರ ಪುರುಷರ ಟಿ-20 ಕ್ರಿಕೆಟ್ ಫೈನಲ್ ಪಂದ್ಯವು ನಾಡಿದ್ದು (ಅ.3) ನಡೆಯಲಿದೆ. ಚಿನ್ನದ ಪದಕಕ್ಕೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
Asian Games-2026: ಏಷ್ಯನ್ ಗೇಮ್ಸ್-2026ರ ಪುರುಷರ ಟಿ-20 ಕ್ರಿಕೆಟ್ ಫೈನಲ್ ಪಂದ್ಯವು ನಾಡಿದ್ದು (ಅ.3) ನಡೆಯಲಿದೆ. ಚಿನ್ನದ ಪದಕಕ್ಕೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಜಪಾನ್ನ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ಈ ಪಂದ್ಯವು ಆಯೋಜನೆಗೊಂಡಿದ್ದು, ಭಾರತೀಯ ಕಾಲಮಾನ ಬೆಳಗ್ಗೆ 10 ಗಂಟೆ ಶುರುವಾಗಲಿದೆ.
ಇಂದು (ಗುರುವಾರ) ನಡೆದ ಎರಡನೇ ಸೆಮಿಫೈನಲ್ನಲ್ಲಿ ಭಾರತವು ಶ್ರೀಲಂಕಾ ವಿರುದ್ಧ ಜಯಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಿಗದಿತ 20 ಓವರ್ಗಳಲ್ಲಿ ಇಶಾನ್ ಕಿಶನ್ (80 ರನ್) ಹಾಗೂ ವೈಭವ್ ಸೂರ್ಯವಂಶಿ (38 ರನ್) ಅವರ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 169 ರನ್ ಪೇರಿಸಿತು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ, ಬರೀ 9.5 ಓವರ್ಗಳಲ್ಲಿ 45 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ( ಮತ್ತು ಅಭಿಷೇಕ್ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿದರು.
ಮೊದಲ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ, ಪಾಕಿಸ್ತಾನವು ಫೈನಲ್ಗೆ ಲಗ್ಗೆ ಇಟ್ಟಿದೆ.