ಡಿ.6ಕ್ಕೆ ಹೊಸಗುಂದ ಉತ್ಸವ & ವೈಭವದ ಲಕ್ಷದೀಪೋತ್ಸವ
Hoshagunda Festival & Grand Lakshadeepotsava: ಹೊಸಗುಂದದ ಸಂಕಲ್ಪಸಿದ್ಧಿ ಉಮಾಮಹೇಶ್ವರ ದೇಗುಲದಲ್ಲಿ ಡಿ.6 ಭಾನುವಾರದಂದು ಹೊಸಗುಂದ ಉತ್ಸವ ಹಾಗೂ ವೈಭವದ ಲಕ್ಷದೀಪೋತ್ಸವ ನಡೆಯಲಿದೆ.
ಸಾಗರ: ತಾಲೂಕಿನ ಹೊಸಗುಂದದ ಸಂಕಲ್ಪಸಿದ್ಧಿ ಉಮಾಮಹೇಶ್ವರ ದೇಗುಲದಲ್ಲಿ ಡಿ.6 ಭಾನುವಾರದಂದು ಹೊಸಗುಂದ ಉತ್ಸವ ಹಾಗೂ ವೈಭವದ ಲಕ್ಷದೀಪೋತ್ಸವ ನಡೆಯಲಿದೆ.
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಭಾರತೀ ಸ್ವಾಮೀಜಿಗಳ ಅಮೃತಹಸ್ತದಿಂದ ಪ್ರತಿಷ್ಠಾಪನೆಗೊಂಡಿರುವ ಈ ದೇವಾಲಯವು ಪ್ರಕೃತಿ, ಸಂಸ್ಕೃತಿ ಹಾಗೂ ಭಕ್ತಿಯ ಸಂಗಮವಾಗಿದೆ.
ಕಲ್ಯಾಣ ಚಾಲುಕ್ಯ ಶೈಲಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ದೇವಸ್ಥಾನದಲ್ಲಿ, ಮಹಿಷಮರ್ದಿನಿ, ವೀರಭದ್ರ, ಗಣಪತಿ, ಸುಬ್ರಹ್ಮಣ್ಯ ಸೇರಿದಂತೆ ಪರಿವಾರ ದೇವರುಗಳ ಸನ್ನಿಧಿಗಳಿವೆ. ದ್ರಾವಿಡ ಶೈಲಿಯ ಲಕ್ಷ್ಮೀಗಣಪತಿ ಮತ್ತು ಕೇರಳ ಶೈಲಿಯ ಕಂಚಿಕಾಳಮ್ಮ ದೇವಿಯ ಸನ್ನಿಧಾನವು ಭಕ್ತರ ಆಕರ್ಷಣೆಯಾಗಿದೆ.

ಸೇವೆಗಳ ವಿವರ: ಲಕ್ಷದೀಪೋತ್ಸವದ ಅಂಗವಾಗಿ ಭಕ್ತರಿಗೆ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಏಕಾದಶ (11) ದೀಪಗಳ ಸೇವೆ ಸೇವೆಗೆ ರೂ.110, 100 ದೀಪಗಳಿಗೆ ರೂ.1,000, 250 ದೀಪಗಳಿಗೆ ರೂ.2,500, 500 ದೀಪಗಳಿಗೆ ರೂ.5,000 ಹಾಗೂ ಸಹಸ್ರ ದೀಪಗಳ ಸೇವೆಗೆ ರೂ.10,000 ನಿಗದಿಪಡಿಸಲಾಗಿದೆ.
ರುದ್ರಪಾರಾಯಣಕ್ಕೆ ರೂ.250), ಏಕಾದಶ ರುದ್ರಕ್ಕೆ ರೂ.1500), ಶತವಾರ ರುದ್ರಕ್ಕೆ ರೂ.5,000, ಒಂದು ದಿನದ ಅನ್ನದಾನ ಸೇವೆಗೆ ರೂ.25,000 ಮತ್ತು ಒಂದು ದಿನದ ಅಲಂಕಾರ ಸೇವೆಗೆ (ಹೂವು & ವಿದ್ಯುತ್ ದೀಪಾಲಂಕಾರ) ರೂ.25,000 ನಿಗದಿ ಮಾಡಲಾಗಿದೆ.
ದೇವರ ಸನ್ನಿಧಿಯಲ್ಲಿ ಸಂಕಲ್ಪ ಸೇವೆ ಸಲ್ಲಿಸಲು ಇಚ್ಛಿಸುವ ಭಕ್ತರು ತಮ್ಮ ಹೆಸರು, ರಾಶಿ, ನಕ್ಷತ್ರ, ಗೋತ್ರ ಹಾಗೂ ಪ್ರಸಾದ ಕಳುಹಿಸಬೇಕಾದ ವಿಳಾಸವನ್ನು 9900039443 ಮೊಬೈಲ್ ಸಂಖ್ಯೆಗೆ ಕಳುಹಿಸಬಹುದು.
ಸೇವಾರ್ಥಿಗಳು ಉಮಾಮಹೇಶ್ವರ ಸೇವಾ ಟ್ರಸ್ಟ್ ಖಾತೆಗೆ (3151101005112, IFSC:CNRB0003151) ಅಥವಾ 9900039443 ಸಂಖ್ಯೆಗೆ ಗೂಗಲ್ ಪೇ / ಫೋನ್ ಪೇ ಮೂಲಕವು ಸೇವಾ ಶುಲ್ಕ ಪಾವತಿಸಬಹುದು.
ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಶೃಂಗೇರಿ ಮಠದ ಆಡಳಿತಾಧಿಕಾರಿ ಪಿ.ವಿ.ಮುರಳಿ, ಆಜೀವ ಟ್ರಸ್ಟೀ ಹಾಗೂ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟೀ ಸಿ.ಎಂ.ಎನ್.ಶಾಸ್ತ್ರೀ, ಸಂಸ್ಥಾಪಕ ಟ್ರಸ್ಟೀ ಶೋಭಾ ಎನ್ ಶಾಸ್ತ್ರೀ ಮಾತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಕೋರಿದ್ದಾರೆ.