ಜಮ್ಮು-ಕಾಶ್ಮೀರದಲ್ಲಿ ಸಿಕ್ಕಿಬಿದ್ದ ಲಷ್ಕರ್ ಕಮಾಂಡರ್: ಶರಣಾಗುವಂತೆ ಸೂಚನೆ

Jammu and Kashmir: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದ ನಂತರ, ಲಷ್ಕರ್-ಎ-ತೈಬಾದ ಕಮಾಂಡರ್ ಲತೀಫ್ ಭಟ್ ಸಿಕ್ಕಿಬಿದ್ದಿದ್ದಾನೆ.

Nov 18, 2026 - 09:09
Nov 18, 2026 - 09:09
ಜಮ್ಮು-ಕಾಶ್ಮೀರದಲ್ಲಿ ಸಿಕ್ಕಿಬಿದ್ದ ಲಷ್ಕರ್ ಕಮಾಂಡರ್: ಶರಣಾಗುವಂತೆ ಸೂಚನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆದ ನಂತರ, ಲಷ್ಕರ್-ಎ-ತೈಬಾದ ಕಮಾಂಡರ್ ಲತೀಫ್ ಭಟ್ ಸಿಕ್ಕಿಬಿದ್ದಿದ್ದಾನೆ.

ನ.11 ರಂದು ಸಿಆರ್‌ಪಿಎಫ್ ಚೆಕ್‌ಪಾಯಿಂಟ್ ಮೇಲೆ ಜರುಗಿದ ದಾಳಿಯ ರೂವಾರಿ ಭಟ್‌ಗೆ ಭದ್ರತಾ ಪಡೆಗಳು ವೀಡಿಯೊ ಕರೆ ಮಾಡಿ, ಶರಣಾಗುವಂತೆ ಕೇಳಿವೆ. ಆದರೆ, ಆತ ನಿರಾಕರಿಸಿದ್ದಾನೆ. 

'ಹಮ್ ತುಮಾರೆ ಸಾಥ್ ಹೈ' (ನಾವು ನಿನ್ನೊಂದಿಗೆ ಇದ್ದೇವೆ) ಎಂದು ಅಧಿಕಾರಿಯೊಬ್ಬರು ಭಟ್‌ಗೆ ಹೇಳುತ್ತಾರೆ. ಅದಕ್ಕೆ ಭಟ್‌ 'ಮುಜೆ ಅಲ್ಲಾ ಸೆ ಮುಲಾಕತ್ ಕರ್ನಾ ಹೈ. ಮೈ ಬಹುತ್ ಖುಷ್ ಹು (ನಾನು ಅಲ್ಲಾನನ್ನು ಭೇಟಿಯಾಗಲು ಬಯಸುತ್ತೇನೆ. ನನಗೆ ತುಂಬಾ ಸಂತೋಷವಾಗಿದೆ) ಎನ್ನುತ್ತಾನೆ. 

ಭಟ್ ಸಹಚರ ಉಮರ್ ನಿಸಾರ್ ದಾರ್ ಸೋಮವಾರ ಕುಲ್ಗಾಮ್‌ನಲ್ಲಿ ನಡೆದ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಅಖ್ರಾನ್‌ನ ಸಿಆರ್‌ಪಿಎಫ್ ಚೆಕ್‌ಪಾಯಿಂಟ್ ಮೇಲೆ ನಡೆದ ದಾಳಿಯಲ್ಲಿ ಈ ಇಬ್ಬರು ಭಾಗಿಯಾಗಿದ್ದರು ಎಂದು ವರದಿಯಾಗಿದೆ.

ಈ ಘಟನೆಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು.

ಭಟ್ ಮತ್ತು ದಾರ್ ದಾಳಿಗೂ ಮುನ್ನ ಹಲವಾರು ಸ್ಥಳಗಳಲ್ಲಿ ತಿರುಗಾಡಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮಂಗಳವಾರ ಪೊಲೀಸರು  ಬಿಡುಗಡೆ ಮಾಡಿದ್ದಾರೆ. 

ಭದ್ರತಾ ಪಡೆಗಳ ಪ್ರಕಾರ, ಜು.22 ರಂದು ಅನಂತ್‌ನಾಗ್‌ನಲ್ಲಿ ಪೊಲೀಸರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿಯೂ ಭಟ್ ಭಾಗಿಯಾಗಿದ್ದನು. ಇದರಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದರು. ಆ.1 ರಂದು ಕುಲ್ಗಾಮ್‌ನಲ್ಲಿ ಜರುಗಿದ ಇಬ್ಬರು ವಲಸೆ ಕಾರ್ಮಿಕರ ಹತ್ಯೆ ಹಿಂದೆಯೂ ಈತನ ಕೈವಾಡವಿದೆ ಎಂದು ಶಂಕಿಸಲಾಗಿದೆ. 

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.