ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?
Daily Horoscope: ಇಂದು (ಶನಿವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಕೆಲವರಿಗೆ ಅರ್ಧ ದಿನ, ಕೆಲವರಿಗೆ ಇಡೀ ದಿನ ವಿರಾಮ.. ಎಳೆಯರು ವಾಹನ ಚಾಲನೆಯಲ್ಲಿ ಎಚ್ಚರ. ಪ್ರಕೃತಿಯ ಜೊತೆಯಲ್ಲಿ ಸಾಮರಸ್ಯದಿಂದ ಆನಂದ. ಮಹಾಪುರುಷರ ದರ್ಶನಯೋಗ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಸಾಮರಸ್ಯ, ಸಮತೋಲನವೇ ಜೀವನ.. ಪ್ರತಿಭೆಗೆ ಎಲ್ಲೆಡೆ ಗೌರವ... ಗೃಹೋದ್ಯಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ವೃತ್ತಿಪರರಿಗೆ ಸಮಯದ ಸವಾಲು. ಕುಟುಂಬದಲ್ಲಿ ಸದ್ಭಾವನೆ ವೃದ್ಧಿ. ಗಣೇಶ ಕಬಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.
ಮಿಥುನ:
ಸಕಾಲದಲ್ಲಿ ಸ್ಪಂದಿಸಿದರೆ ಕಾರ್ಯಸಿದ್ಧಿ.. ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ ಅಕಸ್ಮಾತ್ ಧನಲಾಭ ಸಂಭವ. ಎಳೆಯರ ಮನೋವಿಕಾಸಕ್ಕೆ ಸೂಕ್ತ ಪ್ರಯತ್ನ. ದಂಪತಿಗಳ ನಡುವೆ ಹೊಂದಾಣಿಕೆ ಇರಲಿ. ಗಣೇಶ ಅಷ್ಟಕ, ಬಿಲ್ವಾಷ್ಟಕ, ಮಹಿಷಮರ್ದಿನಿ ಸ್ತೋತ್ರ ಓದಿ.
ಕರ್ಕಾಟಕ:
ನಿತ್ಯದ ಜಂಜಾಟದಿಂದ ಅರ್ಧ ಬಿಡುಗಡೆ.. ಉದ್ಯೋಗ ಸ್ಥಾನದಲ್ಲಿ ಸೌಹಾರ್ದ ವಾತಾವರಣ. ಖಾದಿ ಉದ್ಯಮ ಬೆಳೆಸಲು ಆಸಕ್ತಿ. ತಾಯಿಯ ಆರೋಗ್ಯ ಗಮನಿಸಿ. ಭಜನೆ, ಹರಿಕಥೆ, ಸತ್ಸಂಗಗಳ ಕಡೆಗೆ ಸೆಳೆತ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಗ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
ಸಿಂಹ:
ಉದ್ಯೋಗ ಸ್ಥಾನದಲ್ಲಿ ನಾಯಕತ್ವ ಭದ್ರ.. ವಸ್ತ್ರ, ಆಭರಣಾದಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವ್ಯಾಪಾರ. ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಅಧಿಕ ಲಾಭ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ವ್ಯವಹಾರ ಸಂಬಂಧ ತಿರುಗಾಟದ ಸಾಧ್ಯತೆ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
ಕನ್ಯಾ:
ಮಹತ್ವಾಕಾಂಕ್ಷೆ ಈಡೇರುವ ಸಮಯ.. ಕೃಷಿ ಆಧಾರಿತ ಉದ್ಯಮಗಳಿಗೆ ಅನುಕೂಲದ ದಿನ. ಗೃಹೋಪಕರಣ ಖರೀದಿಗೆ ಧನವ್ಯಯ. ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. ವಾಹನ ಚಾಲನೆಯಲ್ಲಿ ಎಚ್ಚರ.ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ತುಲಾ:
ಒಂದೊಂದೇ ಹೆಜ್ಜೆಯಿಟ್ಟು ನಡೆಯಿರಿ.. ಕಸೂತಿ, ಕರಕೌಶಲದ ಕೆಲಸಗಳನ್ನು ಬಲ್ಲವರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ಇಷ್ಟದೇವರ ದರ್ಶನದಿಂದ ಹರ್ಷ. ಸಾಹಿತ್ಯ ಅಧ್ಯಯನಕ್ಕೆ ಸಮಯ ನೀಡಿಕೆ. ಗಣೇಶ ಕವಚ, ನರಸಿಂಹ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ವೃಶ್ಚಿಕ:
ಉದ್ಯೋಗ ಮುಂದುವರಿಸಲು ಪ್ರೋತ್ಸಾಹ.. ಒಂದಿಲ್ಲೊಂದು ಬಗೆಯ ಹವ್ಯಾಸ ಬೆಳೆಸಿಕೊಳ್ಳುವ ಪ್ರಯತ್ನ. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು. ಉದ್ಯೋಗ ಅರಸುವವರಿಗೆ ಶುಭಸೂಚನೆ. ಆಧ್ಯಾತ್ಮಿಕ ಸಾಧನೆಗೆ ಒಲವು ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಧನು:
ಪರೋಪಕಾರದಿಂದ ಪರಮಾರ್ಥ ಸಿದ್ಧಿ.. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ. ಸಣ್ಣ ಗೃಹೋದ್ಯಮಗಳಿಗೆ ಶುಕ್ರದೆಶೆ. ವಿವಾಹಾಪೇಕ್ಷಿಗಳಿಗೆ ಶುಭಸೂಚನೆ. ಕರಕುಶಲ ಸಾಮಗ್ರಿ ತಯಾರಕರಿಗೆ ಪ್ರೋತ್ಸಾಹ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
ಮಕರ:
ಹಿರಿಯರಿಂದ ಸೂಕ್ತ ಮಾರ್ಗದರ್ಶನ.. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ಅಸಹಾಯಕರಿಗೆ ನೆರವಾಗುವ ಅವಕಾಶ. ಬಂಧುಗಳೊಂದಿಗೆ ಸಂತೋಷ ಕೂಟದ ಸಾಧ್ಯತೆ. ಗಣೇಶ ಕವಚ, ದತ್ತಪಂಜರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ.. ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯಲ್ಲಿ ಜಯ. ವೃತ್ತಿರಂಗದ ಮಿತ್ರರಿಂದ ಸಹಾಯಕ್ಕೆ ಕೋರಿಕೆ. ಗ್ರಾಹಕರ ವಿಶ್ವಾಸ ಉಳಿಸುವ ಪ್ರಯತ್ನ. ಅವಿವಾಹಿತ .ಹುಡುಗ-ಹುಡುಗಿಯರಿಗೆ ವಿವಾಹ ಯೋಗ. ಗಣೇಶ ಅಷ್ಟಕ, ವೆಂಕಟೇಶ್ವರ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಕೆಲಸದ ಒತ್ತಡದ ನಡುವೆ ಸಮಾಜಕಾರ್ಯ. ಪ್ರಭಾವಿ ವ್ಯಕ್ತಿಗಳ ಸಹಾಯ. ಭೂಮಿ ವ್ಯವಹಾರ ಮುಂದುವರಿಕೆ. ಗುರುಸಮಾನ ವ್ಯಕ್ತಿಯ ಆಗಮನ. ವ್ಯವಹಾರ ಸಂಬಂಧ ಪ್ರಯಾಣದ ಸಾಧ್ಯತೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.