ನೆಲ್ಲಿಕಟ್ಟೆ ಅಂಬಿಕಾ ಪದವಿ-ಪೂರ್ವ ವಿದ್ಯಾಲಯದಲ್ಲಿ ಹಠಯೋಗ ಶಿಬಿರ
Ambika PU College: ನೆಲ್ಲಿಕಟ್ಟೆ ಅಂಬಿಕಾ ಪದವಿ-ಪೂರ್ವ ವಿದ್ಯಾಲಯದಲ್ಲಿ ಹಠಯೋಗ ಶಿಬಿರವನ್ನು ನಡೆಸಲಾಗುತ್ತಿದೆ.
ಪುತ್ತೂರು: ಮಂಗಳೂರಿನ ಜಿಜ್ಞಾಸು ಯೋಗಕೇಂದ್ರದ ಯೋಗ ಶಿಕ್ಷಕ ಜಿಜ್ಞಾಸು ವಾಸುದೇವ ಅವರ ನೇತೃತ್ವದಲ್ಲಿ, ಪಟ್ಟಣದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಅ.25 ರವರೆಗೆ ಹಠಯೋಗ ಶಿಬಿರ ನಡೆಯಲಿದ್ದು, ಈಗಾಗಲೇ, ಶುರುವಾಗಿದೆ.
18 ವರ್ಷ ಮೇಲ್ಪಟ್ಟ ಆಸಕ್ತರಿಗೆ ಈ ಯೋಗ ಶಿಬಿರದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಯೋಗಾಭ್ಯಾಸವನ್ನು ಪ್ರಾರಂಭ ಮಾಡ ಬಯಸುವವರು ಅಥವಾ ಯೋಗಾಭ್ಯಾಸಿಗಳು ಕೂಡ ಪಾಲ್ಗೊಳ್ಳಬಹುದು.
ಹಠಯೋಗದ ಮೂಲತತ್ವಗಳಿಗೆ ಅನುಸಾರವಾದ ಪರಿಶುದ್ಧ ಹಾಗೂ ಅನುಭವಾತ್ಮಕ ಯೋಗ ಕಲಿಕೆ ಈ ಶಿಬಿರದಲ್ಲಿ ನಡೆಯಲಿದೆ. ಆರೋಗ್ಯ ಸಮಸ್ಯೆಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು ಮತ್ತು ಸಮಗ್ರ ದೈಹಿಕ-ಮಾನಸಿಕ ಸ್ವಾಸ್ಥ್ಯಕ್ಕಾಗಿ ಅಗತ್ಯವಾದ ಸಾಧನಗಳನ್ನು ಪಡೆಯುವಲ್ಲಿ ಈ ಶಿಬಿರ ಸಹಕಾರಿ ಎನಿಸಲಿದೆ. ಹೆಚ್ಚಿನ ಮಾಹಿತಿಗೆ: 8792346935