Day2Day News: ಆಕರ್ಷಕ ಜಾಹೀರಾತು.. ಡೇ2ಡೇ ನ್ಯೂಸ್ ದೀಪಾವಳಿ ವಿಶೇಷಕ್ಕೆ ಆಹ್ವಾನ
Day2Day News Diwali Special: ಡೇ2ಡೇ ನ್ಯೂಸ್ ವತಿಯಿಂದ 'ದೀಪಾವಳಿ ವಿಶೇಷ–2026' ಪ್ರಕಟವಾಗುತ್ತಿದ್ದು, ವ್ಯಾಪಾರಿಗಳು, ಉದ್ಯಮಿಗಳು ಹಾಗೂ ವಿವಿಧ ಸಂಸ್ಥೆಗಳಿಂದ ಜಾಹೀರಾತುಗಳನ್ನು ಆಹ್ವಾನಿಸಲಾಗಿದೆ.
ಮಂಗಳೂರು: ಮೊಬೈಲ್ ಪರದೆಯ ಮೇಲೆ ನಿಮ್ಮ ಬ್ರ್ಯಾಂಡ್‌ಗೆ ಹೊಸ ಮೆರುಗು ನೀಡಲು ಇದೊಂದು ಉತ್ತಮ ಅವಕಾಶ. ಕರ್ನಾಟಕದ ಮೊಟ್ಟ ಮೊದಲ ಶಾರ್ಟ್ ನ್ಯೂಸ್ ಆ್ಯಪ್ ಎಂಬ ಹೆಗ್ಗಳಿಕೆಯ ಡೇ2ಡೇ ನ್ಯೂಸ್ (Day2Day News) ವತಿಯಿಂದ 'ದೀಪಾವಳಿ ವಿಶೇಷ–2026' ಪ್ರಕಟವಾಗುತ್ತಿದ್ದು, ವ್ಯಾಪಾರಿಗಳು, ಉದ್ಯಮಿಗಳು ಹಾಗೂ ವಿವಿಧ ಸಂಸ್ಥೆಗಳಿಂದ ಜಾಹೀರಾತುಗಳನ್ನು ಆಹ್ವಾನಿಸಲಾಗಿದೆ.
ಡಿಜಿಟಲ್ ಮಾಧ್ಯಮದ ಮೂಲಕ ಹೆಚ್ಚಿನ ಓದುಗರನ್ನು ತಲುಪುವ ಉದ್ದೇಶದಿಂದ ರೂಪಿಸಲಾಗುತ್ತಿರುವ ಈ ವಿಶೇಷ ಪ್ರಕಟಣೆಯಲ್ಲಿ, ಸಂಸ್ಥೆಗಳು ತಮ್ಮ ಉತ್ಪನ್ನಗಳು, ಸೇವೆಗಳು ಹಾಗೂ ಸಾಧನೆಗಳನ್ನು ಪರಿಚಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆಕರ್ಷಕ ವಿನ್ಯಾಸದ ಜಾಹೀರಾತುಗಳ ಮೂಲಕ ಮೊಬೈಲ್ ಪರದೆಯಲ್ಲೇ ತಮ್ಮ ಬ್ರ್ಯಾಂಡ್‌ಗೆ ಹೊಸ ಗುರುತು ಮೂಡಿಸಬಹುದು.
ದೊಡ್ಡ ಉದ್ಯಮಗಳಿಂದ ಹಿಡಿದು ಸಣ್ಣ ವ್ಯಾಪಾರ ಸಂಸ್ಥೆಗಳವರೆಗೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಜಾಹೀರಾತು ನೀಡಲು ಅವಕಾಶವಿದೆ. ಕಡಿಮೆ ವೆಚ್ಚದಲ್ಲಿ ಆಕರ್ಷಕ ವಿನ್ಯಾಸದೊಂದಿಗೆ ಡಿಜಿಟಲ್ ಪ್ರಚಾರ ಕೈಗೊಳ್ಳಲು ಬಯಸುವವರಿಗೆ ಈ ವಿಶೇಷಾಂಕ ಉತ್ತಮ ವೇದಿಕೆಯಾಗಲಿದೆ.
ವ್ಯಾಪಾರ, ಉದ್ಯಮ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಸಂಸ್ಥೆಯ ಪರಿಚಯವನ್ನು ಡಿಜಿಟಲ್ ಓದುಗರಿಗೆ ತಲುಪಿಸಬಹುದು.
ಕಡಿಮೆ ವೆಚ್ಚ, ಆಕರ್ಷಕ ವಿನ್ಯಾಸ ಹಾಗೂ ಡಿಜಿಟಲ್ ಪ್ರಚಾರದ ಅವಕಾಶವನ್ನು ಒಳಗೊಂಡ ಡೇ2ಡೇ ನ್ಯೂಸ್ ದೀಪಾವಳಿ ವಿಶೇಷ–2026ರಲ್ಲಿ ಜಾಹೀರಾತು ನೀಡಲು ಆಸಕ್ತ ಸಂಸ್ಥೆಗಳು ಮುಂಗಡವಾಗಿ ತಮ್ಮ ಜಾಹೀರಾತುಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ.