ಕೇರಳ ಕೇಂದ್ರೀಯ ವಿವಿಯಲ್ಲಿ ಅ.29 ರಂದು 'ಸಾಹಿತ್ಯ ಸಂಸ್ಕೃತಿ ಸಿರಿ' ಕಾರ್ಯಕ್ರಮ

Central University of Kerala: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಅ.29 ಗುರುವಾರದಂದು 'ಸಾಹಿತ್ಯ ಸಂಸ್ಕೃತಿ ಸಿರಿ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Oct 27, 2026 - 12:35
ಕೇರಳ ಕೇಂದ್ರೀಯ ವಿವಿಯಲ್ಲಿ ಅ.29 ರಂದು 'ಸಾಹಿತ್ಯ ಸಂಸ್ಕೃತಿ ಸಿರಿ' ಕಾರ್ಯಕ್ರಮ

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗ ವತಿಯಿಂದ ಅ.29 ಗುರುವಾರದಂದು 'ಸಾಹಿತ್ಯ ಸಂಸ್ಕೃತಿ ಸಿರಿ' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿವಿಯ ಪಯಸ್ವಿನಿ ಸಭಾಂಗಣದಲ್ಲಿ ಸಂಜೆ 3.30ಕ್ಕೆ ಶುರುವಾಗಲಿದೆ. ಸಾಹಿತ್ಯ, ಕರಾವಳಿಯ ಕಲಾ ಪರಂಪರೆ ಹಾಗೂ ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸುವ ಉದ್ದೇಶವನ್ನು ಈ ಸಮಾರಂಭವು ಹೊಂದಿದೆ.

ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಪ್ರೊ.ಸಿದ್ದು ಪಿ ಅಲಗೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇರಳ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ 'ಕರಾವಳಿ ಕಲಾ ಸಂಪತ್ತು' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. 

ಇದೇ ವೇಳೆ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಗೌರವಿಸಿ, ಸನ್ಮಾನಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಜಯಪ್ರಕಾಶ್ ಆರ್, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಪ್ರೊ.ರಾಜೇಂದ್ರ ಪಿಲಾಂಕಟ್ಟ, ಅಕಾಡೆಮಿಕ್ ವಿಭಾಗದ ಡೀನ್ ಪ್ರೊ.ಜೋಸೆಫ್ ಕೊಯಿಪಲ್ಲೈ ಮತ್ತು ಭಾಷೆ ಮತ್ತು ತುಲನಾತ್ಮಕ ಅಧ್ಯಯನ ವಿಭಾಗದ ಡೀನ್  ಪ್ರೊ.ತಾರು ಎಸ್.ಪವಾರ್ ಉಪಸ್ಥಿತರಿರಲಿದ್ದಾರೆ.

ಅಂದು ಸಂಜೆ 4.30 ರಿಂದ 5 ಗಂಟೆಯವರೆಗೆ ಕನ್ನಡ ವಿಭಾಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5 ರಿಂದ 5.30 ರವರೆಗೆ ಪ್ರಶಸ್ತಿ ವಿಜೇತ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಾಂಸ್ಕೃತಿಕ ತಂಡವು ಸಾಂಪ್ರದಾಯಿಕ ಕಲಾ ಪ್ರದರ್ಶನವನ್ನು ನೀಡಲಿದೆ. ಈ ತಂಡದ ನಿರ್ದೇಶನವನ್ನು ವಾಣಿಜ್ಯ ಹಾಗೂ ಅಂತರರಾಷ್ಟ್ರೀಯ ವ್ಯವಹಾರ ವಿಭಾಗದ ಪ್ರಾಧ್ಯಾಪಕ ಪ್ರೊ.ಶ್ರವಣ ಕೆ ವಹಿಸಲಿದ್ದಾರೆ.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸಂಜೆ 5.30 ರಿಂದ 6.30 ರವರೆಗೆ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಖ್ಯಾತ ಕಲಾವಿದರ ಸಹಭಾಗಿತ್ವದಲ್ಲಿ 'ಮಹಿಷಮರ್ದಿನಿ' ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.