Hero Xtreme 160R 4V: 2026ರ ಹೊಸ ಹೀರೋ ಎಕ್ಸ್ಟ್ರೀಮ್ 160ಆರ್ 4ವಿ ಬೈಕ್ ಬಿಡುಗಡೆ.. ಬೆಲೆ ಇಷ್ಟೇನಾ?
Hero Xtreme 160R 4V: ನೂತನ 2026ರ 'ಹೀರೋ ಎಕ್ಸ್ಟ್ರೀಮ್ 160ಆರ್ 4ವಿ' ಬೈಕ್ ಶುಕ್ರವಾರ ಬಿಡುಗಡೆಗೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Hero Xtreme 160R 4V: ನೂತನ 2026ರ 'ಹೀರೋ ಎಕ್ಸ್ಟ್ರೀಮ್ 160ಆರ್ 4ವಿ' ಬೈಕ್ ಶುಕ್ರವಾರ ಬಿಡುಗಡೆಗೊಂಡಿದೆ. ಇಂದಿನಿಂದ (ಅ.17) ಬುಕ್ಕಿಂಗ್ ಶುರುವಾಗಲಿದ್ದು, ನ.1 ರಿಂದ ವಿತರಣೆ ಶುರುವಾಗಲಿದೆ.
ಈ ಮೋಟಾರ್ಸೈಕಲ್, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ರೂ.1.27 ಲಕ್ಷದಿಂದ ರೂ.1.41 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸ್ಟ್ಯಾಂಡರ್ಡ್ (Standard), ಪ್ರೊ (Pro) ಹಾಗೂ ಕಾರ್ಬನ್ (Carbon) ಎಂಬ ರೂಪಾಂತರಗಳೊಂದಿಗೂ ಲಭ್ಯವಿದೆ.
ಇದು ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ತುಂಬಾ ಚೆನ್ನಾಗಿರುವ ಎಲ್ಇಡಿ ಹೆಡ್ಲ್ಯಾಂಪ್, ಪ್ರೊಜೆಕ್ಟರ್ ಹೈ ಬೀಮ್, ಆಂಬಿಯೆಂಟ್ ಲೈಟ್ ಸೆನ್ಸರ್, ಹೆಚ್-ಆಕಾರಕ್ಕೆ ಹೋಲಿಕೆಯಾಗಬಲ್ಲ ಡಿಆರ್ಎಲ್ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್ನ್ನು ಪಡೆದಿದೆ. ಸ್ಪೋರ್ಟಿ ಅಲಾಯ್ ವೀಲ್ಗಳನ್ನು ಒಳಗೊಂಡಿದೆ.

ನೂತನ 'ಹೀರೋ ಎಕ್ಸ್ಟ್ರೀಮ್ 160ಆರ್ 4ವಿ' ಶಕ್ತಿಶಾಲಿಯಾದ ಪವರ್ಟ್ರೇನ್ನ್ನು ತನ್ನದಾಗಿಸಿಕೊಂಡಿದೆ. 163 ಸಿಸಿ ಆಯಿಲ್-ಕೂಲ್ಡ್, 4-ವಾಲ್ವ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 8,750 ಆರ್ಪಿಎಂನಲ್ಲಿ 16.9 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6,500 ಆರ್ಪಿಎಂನಲ್ಲಿ 14.6 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಆಟೋಮೆಟಿಕ್ ಗೇರ್ಬಾಕ್ಸ್ನ್ನು ಪಡೆದಿದೆ.
ಬರೀ 4.4 ಸೆಕೆಂಡುಗಳಲ್ಲಿ 0-60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. ರೈನ್ (Rain), ರೋಡ್ (Road) ಮತ್ತು ಸ್ಪೋರ್ಟ್ (Sport) ಎಂಬ ರೈಡಿಂಗ್ ಮೋಡ್ಗಳನ್ನು ಒಳಗೊಂಡಿದೆ.
ಈ ಬೈಕ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಟಿಎಫ್ಟಿ ಸ್ಕ್ರೀನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕ್ರೂಸ್ ಕಂಟ್ರೋಲ್, ಸಾಫ್ಟ್-ಟಚ್ ಸ್ವಿಚ್ಗೇರ್ ಹಾಗೂ ಟೈಪ್-ಸಿ ಫಾಸ್ಟ್ ಚಾರ್ಜರ್ನ್ನು ಹೊಂದಿದೆ. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಮತ್ತು ಹಿಂಭಾಗ (ರೇರ್) ಡಿಸ್ಕ್ ಬ್ರೇಕ್ ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ.