Today Gold Price: ಚಿನ್ನದ ದರ ಅತ್ಯಲ್ಪ ಏರಿಕೆ.. ಎಷ್ಟಾಗಿದೆ?

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನದ ದರ ಅತ್ಯಲ್ಪ ಏರಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯು ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.

Oct 27, 2026 - 11:30
Today Gold Price: ಚಿನ್ನದ ದರ ಅತ್ಯಲ್ಪ ಏರಿಕೆ.. ಎಷ್ಟಾಗಿದೆ?

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನದ ದರ ಅತ್ಯಲ್ಪ ಏರಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯು ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ. 

ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.540 ಹೆಚ್ಚಳವಾಗಿ ರೂ.1,43,290 ಇದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.500 ಏರಿಕೆಯಾಗಿ ರೂ.1,31,350ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.510 ಹೆಚ್ಚಳವಾಗಿ ರೂ.1,07,570 ಆಗಿದೆ.

ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.2,20,000 ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 

ಷೇರುಪೇಟೆ: ಸಕಾರತ್ಮಕ ವಹಿವಾಟು

ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರತ್ಮಕವಾಗಿದೆ.  ಬಿಎಸ್‌ಇ ಸೆನ್ಸೆಕ್ಸ್ 482.92 ಅಂಕಗಳು ಅಥವಾ ಶೇಕಡ 0.66% ಏರಿಕೆಯಾಗಿ 73,606.75 ಅಂಕಗಳಿಗೆ ಬಂದಿದೆ. ಎನ್‌ಎಸ್‌ಇ ನಿಫ್ಟಿ 153.20 ಅಂಕಗಳು ಅಥವಾ ಶೇಕಡ 0.68% ಹೆಚ್ಚಳವಾಗಿ 22,753.20 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. 

ಅದಾನಿ ಪೋರ್ಟ್ಸ್, ಎಟರ್ನಲ್, ಕೋಟಕ್ ಬ್ಯಾಂಕ್, ಟ್ರೆಂಟ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭದಲ್ಲಿವೆ. ಮತ್ತೊಂದೆಡೆ, ಬಜಾಜ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಸುಜುಕಿ, ಹೆಚ್‌ಸಿಎಲ್ ಟೆಕ್ ಹಾಗೂ ಪವರ್ ಗ್ರಿಡ್ ಷೇರುಗಳು ನಷ್ಟದಲ್ಲಿವೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.