ನಾಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ: ಸಂಸತ್ ಭವನದಲ್ಲಿ ಆಚರಣೆ
Tomorrow Kittur Rani Chennamma Jayanti: ನಾಳೆ (ಅ.23) ಕನ್ನಡ ನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಗುತ್ತದೆ.
ಬೆಂಗಳೂರು: ನಾಳೆ (ಅ.23) ಕನ್ನಡ ನಾಡಿನ ವೀರವನಿತೆ ಶೌರ್ಯ ಹಾಗೂ ಸ್ವಾಭಿಮಾನದ ಪ್ರತೀಕ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಗುತ್ತದೆ.
ಈ ಹಿನ್ನೆಲೆ ನವದೆಹಲಿಯ ಸಂಸತ್ ಭವನದ ಪ್ರೇರಣಾ ಸ್ಥಳದಲ್ಲಿ ಏರ್ಪಡಿಸಲಾಗಿರುವ ರಾಣಿ ಚೆನ್ನಮ್ಮ ಜಯಂತಿ ಮತ್ತು 202ನೇ ವಿಜಯೋತ್ಸವ ಆಚರಣೆ ಸಮಾರಂಭದಲ್ಲಿ, ಪಾಲ್ಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ವಿ.ಸೋಮಣ್ಣ ಆಹ್ವಾನಿಸಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದ ವೀರ ಮಹಿಳೆ ರಾಣಿ ಚೆನ್ನಮ್ಮ ಅ.23, 1778 ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ ಜನಿಸಿದರು. ಕಿತ್ತೂರಿನ ರಾಜ ಮಲ್ಲಸರ್ಜನರನ್ನು ವಿವಾಹವಾದರು. 'ದತ್ತು ಮಕ್ಕಳಿಗೆ ಹಕ್ಕಿಲ್ಲ' ಎಂಬ ನೀತಿಯನ್ನು ವಿರೋಧಿಸಿ, ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದರು.
ಆರಂಭಿಕ ಯುದ್ಧದಲ್ಲಿ ಬ್ರಿಟಿಷರನ್ನು ಸೋಲಿಸಿದರೂ, ನಂತರದ ಹೋರಾಟದಲ್ಲಿ ಸೆರೆಸಿಕ್ಕಿ ಬೈಲಹೊಂಗಲದಲ್ಲಿ ಕಾರಾಗೃಹವಾಸ ಅನುಭವಿಸಿದರು. ಫೆ.21, 1829 ರಂದು ಅಲ್ಲಿಯೇ ಮರಣ ಹೊಂದಿದರು.