ಇನ್ನೊಂದು ಟಾಟಾ ಟೆಕ್ ಆಗಲಿದೆಯೇ ಜಿಯೋ ಪ್ಲಾಟ್‌ಫಾರ್ಮ್ಸ್ ಷೇರು?

Jio Platforms Shares Will Become Next Tata Tech?: ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒನಲ್ಲಿ ಲಿಸ್ಟಿಂಗ್ ಆಗಿದ್ದು, ಇಲ್ಲಿದೆ ವಿಶೇಷ ಲೇಖನ.

Oct 29, 2026 - 14:27
Oct 29, 2026 - 14:50
ಇನ್ನೊಂದು ಟಾಟಾ ಟೆಕ್ ಆಗಲಿದೆಯೇ ಜಿಯೋ ಪ್ಲಾಟ್‌ಫಾರ್ಮ್ಸ್ ಷೇರು?

Jio Platforms Shares Will Become Next Tata Tech?: ಅದು ನ.30, 2023. ಟಾಟಾ ಟೆಕ್ ಐಪಿಒ ಲಿಸ್ಟಿಂಗ್ ದಿನ. 500 ರೂಪಾಯಿಗೆ ನೀಡಲ್ಪಟ್ಟ ಟಾಟಾ ಟೆಕ್ ಷೇರು ಶೇಕಡ 140% ಪ್ರೀಮಿಯಂನೊಂದಿಗೆ, ಅಂದರೆ 1,200 ರೂಪಾಯಿಗೆ ಲಿಸ್ಟ್ ಆಯಿತು. ಅಷ್ಟಕ್ಕೇ ನಿಲ್ಲಲಿಲ್ಲ ಷೇರಿನ ಓಟ. ಬೆಲೆ ರೂ.1,400 ಸಮೀಪಕ್ಕೆ ತಲುಪಿತು. ಎಲ್ಲೆಡೆ ಈ ಷೇರಿನದ್ದೇ ಸುದ್ದಿ. ಹೂಡಿಕೆದಾರರು ಭವಿಷ್ಯದ ಲಾಭದ ನಿರೀಕ್ಷೆಯಲ್ಲಿ ಮುಗಿಬಿದ್ದು, ಖರೀದಿಸಲಾರಂಭಿಸಿದರು. ಆದರೆ ಇಂದು ಅದೇ ಷೇರಿನ ಬೆಲೆ ರೂ.660.50 ಆಸುಪಾಸಿನಲ್ಲಿದೆ.
 
ಇದು ಟಾಟಾ ಟೆಕ್ ಕಥೆಯಾದರೆ, ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಕಥೆ ಮತ್ತೊಂದು. ರೂ.261.85 ಲಿಸ್ಟ್ ಆದ ಈ ಷೇರು ಒಂದು ಹಂತದಲ್ಲಿ ರೂ.400 ಆಸುಪಾಸಿನಲ್ಲಿತ್ತು. ಆದರೆ, ನಂತರದ ದಿನಗಳಲ್ಲಿ ಕುಸಿತ ಕಂಡು ಈಗ ರೂ.200 ರೂಪಾಯಿಯ ಮಟ್ಟಕ್ಕೆ ಇಳಿದಿದೆ.
 
ಈಗ ಹೂಡಿಕೆದಾರರ ಗಮನ ಸೆಳೆದಿರುವುದು ಜಿಯೋ ಪ್ಲಾಟ್‌ಫಾರ್ಮ್ಸ್ ಷೇರು. ಇದು ಮತ್ತೊಂದು ಟಾಟಾ ಟೆಕ್ ಆಗಲಿದೆಯೇ ಎಂಬ ಪ್ರಶ್ನೆ ಮಾರುಕಟ್ಟೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಲಿಸ್ಟಿಂಗ್ ಸಂದರ್ಭದಲ್ಲಿ ಭರ್ಜರಿ ಏರಿಕೆ ಕಂಡ ಈ ಷೇರು, ಎರಡನೇ ದಿವು  ಏರಿಕೆಯ ನಿರೀಕ್ಷೆ ಮೂಡಿಸಿತ್ತು. ಆದರೆ, ನಂತರದ ಬೆಲೆ ಚಲನೆ ಹೂಡಿಕೆದಾರರಲ್ಲಿ ಆತಂಕ ಹುಟ್ಟಿಸಿದೆ.
 
ಐಪಿಒ ಸಂದರ್ಭದಲ್ಲಿ ಕಂಪನಿಯ ಜನಪ್ರಿಯತೆ, ಬ್ರ್ಯಾಂಡ್ ಮೌಲ್ಯ ಮತ್ತು ಭವಿಷ್ಯದ ಬೆಳವಣಿಗೆಯ ನಿರೀಕ್ಷೆಗಳು ಷೇರಿಗೆ ಭಾರೀ ಬೇಡಿಕೆ ಸೃಷ್ಟಿಸಬಹುದು. ಆದರೆ ಲಿಸ್ಟಿಂಗ್ ದಿನದ ಏರಿಕೆಯೇ ಕಂಪನಿಯ ದೀರ್ಘಕಾಲೀನ ಯಶಸ್ಸಿಗೆ ಸಾಕ್ಷಿಯಲ್ಲ. ಕಂಪನಿಯ ಆದಾಯ, ಲಾಭದ ಬೆಳವಣಿಗೆ, ಸಾಲದ ಪ್ರಮಾಣ ಮತ್ತು ಮೌಲ್ಯಮಾಪನವೇ ದೀರ್ಘಾವಧಿಯಲ್ಲಿ ಷೇರಿನ ದಿಕ್ಕನ್ನು ನಿರ್ಧರಿಸುತ್ತವೆ.
 
ಜಿಯೋ ಪ್ಲಾಟ್‌ಫಾರ್ಮ್ಸ್‌ನ ಡಿಜಿಟಲ್ ಸೇವೆಗಳು, ದೂರಸಂಪರ್ಕ ಕ್ಷೇತ್ರದಲ್ಲಿನ ಸ್ಥಾನ ಮತ್ತು ಭವಿಷ್ಯದ ವಿಸ್ತರಣೆಯ ಯೋಜನೆಗಳು ಹೂಡಿಕೆದಾರರಿಗೆ ಆಕರ್ಷಕವಾಗಿರಬಹುದು. ಆದರೆ, ಈಗಾಗಲೇ ಷೇರಿನ ಬೆಲೆಯಲ್ಲಿ ಭವಿಷ್ಯದ ಬೆಳವಣಿಗೆಯ ನಿರೀಕ್ಷೆಗಳು ಎಷ್ಟರ ಮಟ್ಟಿಗೆ ಸೇರಿಕೊಂಡಿವೆ ಎಂಬುದನ್ನು ಗಮನಿಸಬೇಕು.
 
ಹೀಗಾಗಿ, ಲಿಸ್ಟಿಂಗ್‌ನ ಆರಂಭಿಕ ಉತ್ಸಾಹಕ್ಕೆ ಮರುಳಾಗಿ ಸಾಲ ಮಾಡಿ ಷೇರು ಖರೀದಿಸುವುದು ಅಪಾಯಕಾರಿ. ಬೆಲೆ ಏರಿಕೆಯ ಹಿಂದೆ ಓಡುವುದಕ್ಕಿಂತ ಕಂಪನಿಯ ಮೂಲಭೂತ ಅಂಶಗಳನ್ನು ಪರಿಶೀಲಿಸಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಸೂಕ್ತ. ಜಿಯೋ ಪ್ಲಾಟ್‌ಫಾರ್ಮ್ಸ್ ದೀರ್ಘಾವಧಿಯಲ್ಲಿ ಉತ್ತಮ ಹೂಡಿಕೆಯಾಗಲಿದೆಯೇ ಅಥವಾ ಆರಂಭಿಕ ನಿರೀಕ್ಷೆಗಳ ಭಾರಕ್ಕೆ ಬೆಲೆ ಕುಸಿಯಲಿದೆಯೇ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.
 
ಲೇಖಕರು: ಸುರಭಿ ಭಟ್
ಇಮೇಲ್: bhatsurabhi311@gmail.com  

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.