Today Gold Price: ಆಭರಣದ ಬೆಲೆ ಏರಿಕೆ.. ಎಷ್ಟಾಗಿದೆ?
Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಏರಿಕೆಯಾಗಿದೆ.
Today Gold Price: ಆಭರಣ ಖರೀದಿದಾರರ ಜೇಬಿಗೆ ಕತ್ತರಿ ಬಿದ್ದಿದೆ. ಚಿನಿವಾರ ಪೇಟೆಯಲ್ಲಿ ಇಂದು (ಗುರುವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಏರಿಕೆಯಾಗಿದೆ.
ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.3,220 ಹೆಚ್ಚಳವಾಗಿ ರೂ.1,46,020 ಇದೆ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ರೂ.2,950 ಏರಿಕೆಯಾಗಿ ರೂ.1,33,850ಕ್ಕೆ ಬಂದಿದೆ. 18 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ.2,420 ಹೆಚ್ಚಳವಾಗಿ ರೂ.1,09,520 ಆಗಿದೆ.
ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.10,000 ಏರಿಕೆಯಾಗಿ ರೂ.2,10,000 ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.
ಷೇರುಪೇಟೆ: ಸಕಾರತ್ಮಕ ವಹಿವಾಟು
ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರತ್ಮಕವಾಗಿದೆ. ಬಿಎಸ್ಇ ಸೆನ್ಸೆಕ್ಸ್ 1,609.54 ಅಂಕಗಳು ಏರಿಕೆಯಾಗಿ 78,910.94 ಅಂಕಗಳಿಗೆ ತಲುಪಿದೆ. ನಿಫ್ಟಿ 417.45 ಅಂಕಗಳು ಹೆಚ್ಚಳವಾಗಿ 24,378.05 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಇಂಡಿಗೋ, ಏಷ್ಯನ್ ಪೇಂಟ್ಸ್, ಹೆಚ್ಡಿಎಫ್ಸಿ ಬ್ಯಾಂಕ್, ಬಜಾಜ್ ಫೈನಾನ್ಸ್ ಹಾಗೂ ಐಸಿಐಸಿಐ ಬ್ಯಾಂಕ್ ಷೇರುಗಳು ಹೆಚ್ಚು ಲಾಭದಲ್ಲಿವೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್ನಿಂದ ಹಿಡಿದು ಇನ್ಸ್ಟಾ, ಎಕ್ಸ್, ಫೇಸ್ಬುಕ್, ಯೂಟ್ಯೂಬ್, ನ್ಯೂಸ್ ಆಪ್ವರೆಗೆ ಎಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.