Karnataka: ಇನ್ಮುಂದೆ ಬಸ್ ಪ್ರಯಾಣ ಬಲು ದುಬಾರಿ.. ಟಿಕೆಟ್ ದರ ಏರಿಕೆ.. ಎಷ್ಟಾಗಿದೆ?

Karnataka: ಕರ್ನಾಟಕ ಸರ್ಕಾರವು 4 ಸಾರಿಗೆ ನಿಗಮಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಬಸ್ ಪ್ರಯಾಣ ದರಗಳನ್ನು ಏರಿಕೆ ಮಾಡಿದೆ.

Nov 4, 2026 - 16:42
Nov 4, 2026 - 16:46
Karnataka: ಇನ್ಮುಂದೆ ಬಸ್ ಪ್ರಯಾಣ ಬಲು ದುಬಾರಿ.. ಟಿಕೆಟ್ ದರ ಏರಿಕೆ.. ಎಷ್ಟಾಗಿದೆ?

ಬೆಂಗಳೂರು: ಕರ್ನಾಟಕ ಸರ್ಕಾರವು 4 ಸಾರಿಗೆ ನಿಗಮಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಬಸ್ ಪ್ರಯಾಣ ದರಗಳನ್ನು ಏರಿಕೆ ಮಾಡಿದೆ. ಕೆಎಸ್‌ಆರ್‌ಟಿಸಿಯಲ್ಲಿ ಶೇಕಡ 23 ಮತ್ತು ಬಿಎಂಟಿಸಿಯಲ್ಲಿ ಶೇಕಡ 33 ರಿಂದ 35 ರಷ್ಟು ಅಧಿಕಗೊಂಡಿದೆ. ಪರಿಷ್ಕೃತ ದರಗಳು ಇಂದು (ನ.4) ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ.

ನಿವೃತ್ತ ಐಎಎಸ್ ಅಧಿಕಾರಿ ಅತುಲ್ ಕುಮಾರ್ ತಿವಾರಿ ನೇತೃತ್ವದ ಸಾರ್ವಜನಿಕ ಪ್ರಯಾಣ ದರ ನಿಯಂತ್ರಣ ಸಮಿತಿಯು ಶಿಫಾರಸು ಮಾಡಿದ ಶೇಕಡ 45 ರಷ್ಟು ಹೆಚ್ಚಳಕ್ಕಿಂತ, ಈ ದರ ಪರಿಷ್ಕರಣೆಯು ಕಡಿಮೆಯಾಗಿದೆ. ಈ ಹಿಂದೆ, 4 ಸಾರಿಗೆ ನಿಗಮಗಳು ಟೆಕೆಟ್ ದರವನ್ನು ಶೇಕಡ 90 ರಷ್ಟು ಹೆಚ್ಚಿಸಲು ಮನವಿ ಮಾಡಿದ್ದವು.

ರಾಜ್ಯದಲ್ಲಿ ಹಾಲಿನ ದರ ಏರಿಕೆ ಬೆನ್ನಲ್ಲೇ, ಬಸ್ ಪ್ರಯಾಣ ದರವು ಏರಿಕೆಯಾಗಿದೆ. ಕಳೆದ ವಾರ, ಹಾಲು ಹಾಗೂ ಮೊಸರಿನ ದರವನ್ನು ರೂ.8 ಹೆಚ್ಚಿಸಲಾಗುವುದು ಎಂದು ಘೋಷಿಸಲಾಗಿತ್ತು.

ಈ ದರ ಹೆಚ್ಚಳವು ಸಾಮಾನ್ಯ, ಎಕ್ಸ್‌ಪ್ರೆಸ್, ದೂರದ ಪ್ರಯಾಣ ಹಾಗೂ ವಿಮಾನ ನಿಲ್ದಾಣಗಳಿಗೆ ಸೇವೆ ಒದಗಿಸುವ ಬಸ್‌ಗಳಿಗೆ ಅನ್ವಯಿಸುತ್ತದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಪ್ರಯಾಣಿಸುವ ದೂರವನ್ನು ಅವಲಂಬಿಸಿ, ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳ ದರವನ್ನು ರೂ.9 ರವರೆಗೆ ಹೆಚ್ಚಿಸಲಾಗಿದೆ.

ನೆಲಮಂಗಲದಿಂದ ಮೆಜೆಸ್ಟಿಕ್‌ಗೆ ಪ್ರಯಾಣ ದರವು ರೂ.35 ರಿಂದ ರೂ.44ಕ್ಕೆ ಏರಿಕೆಯಾಗಲಿದೆ. ದೊಡ್ಡಬಳ್ಳಾಪುರ–ಮೆಜೆಸ್ಟಿಕ್ ಮಾರ್ಗದ ದರವು ರೂ.38 ರಿಂದ ರೂ.47 ಕ್ಕೆ ಹೆಚ್ಚಾಗಲಿದೆ. 

ಬಿಎಂಟಿಸಿ ಬಸ್‌ ಕನಿಷ್ಠ ಪ್ರಯಾಣ ದರವು ರೂ.6 ರಿಂದ ರೂ.10 ಕ್ಕೆ ಏರಿಕೆಯಾಗಲಿದೆ. ಹೆಬ್ಬಾಳದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಪ್ರಯಾಣ ದರವು ರೂ.175 ರಿಂದ ರೂ.200ಕ್ಕೆ ಅಧಿಕಗೊಳ್ಳಲಿದೆ.

ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ದರವು ರೂ.81 ರಿಂದ ರೂ.100ಕ್ಕೆ ಏರಿಕೆಯಾಗಲಿದ್ದು, ದೂರದ ಪ್ರಯಾಣದ ಬಸ್ ದರಗಳು ರೂ.75 ರಿಂದ ರೂ.90ಕ್ಕೆ ಹೆಚ್ಚಾಗಲಿವೆ.

ದರ ಏರಿಕೆಗೆ ಕಾರಣವೇನು:

ಡೀಸೆಲ್ ಬೆಲೆ ಏರಿಕೆ, ಬಸ್ ನಿರ್ವಹಣೆ ವೆಚ್ಚ ಹೆಚ್ಚಳ ಹಾಗೂ ಸಾರಿಗೆ ನಿಗಮದ ನೌಕರರ ವೇತನ ಪರಿಷ್ಕರಣೆ ಕಾರಣದಿಂದಾಗಿ, ಈ ದರವನ್ನು ಏರಿಕೆ ಮಾಡಲಾಗಿದೆ. ಜೊತೆಗೆ 4 ಸಾರಿಗೆ ನಿಗಮಗಳು 2,000 ಕೋಟಿ ನಷ್ಟವನ್ನು ಅನುಭವಿಸುತ್ತಿವೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.