Today Gold Price: ಚಿನ್ನದ ದರ ಅತ್ಯಲ್ಪ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನದ ದರ ಅತ್ಯಲ್ಪ ಏರಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯು ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.

Nov 3, 2026 - 11:48
Today Gold Price: ಚಿನ್ನದ ದರ ಅತ್ಯಲ್ಪ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನದ ದರ ಅತ್ಯಲ್ಪ ಏರಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯು ಯಾವುದೇ ರೀತಿಯಲ್ಲಿ ಬದಲಾಗದೆ ಸ್ಥಿರವಾಗಿದೆ.

ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.270 ಹೆಚ್ಚಳವಾಗಿ ರೂ.1,39,640 ಇದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.250 ಏರಿಕೆಯಾಗಿ ರೂ.1,280,000ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.200 ಹೆಚ್ಚಳವಾಗಿ ರೂ.1,04,730 ಆಗಿದೆ.

ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.2,00,000 ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.

ಷೇರುಪೇಟೆ: ಉತ್ತಮ ವಹಿವಾಟು

ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರತ್ಮಕವಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 22.44 ಅಂಕಗಳು ಹೆಚ್ಚಳವಾಗಿ 73,268.47 ಅಂಕಗಳಿಗೆ ತಲುಪಿದೆ. ನಿಫ್ಟಿ 8.20 ಅಂಕಗಳ ಇಳಿಕೆಯಾಗಿ 22,690.65 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

ಟಿಸಿಎಸ್, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಎನ್‌ಟಿಪಿಸಿ ಹಾಗೂ ಪವರ್ ಗ್ರಿಡ್‌ಗಳು ಷೇರುಗಳು ಲಾಭದಲ್ಲಿವೆ. ಮತ್ತೊಂದೆಡೆ, ಟ್ರೆಂಟ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಸುಜುಕಿ, ಬಜಾಜ್ ಫಿನ್‌ಸರ್ವ್ ಹಾಗೂ ಬಜಾಜ್ ಫೈನಾನ್ಸ್ ಷೇರುಗಳು ನಷ್ಟದಲ್ಲಿವೆ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.