ಗಿರಿಜಾ ಕಲ್ಯಾಣದ ಮೂಲಕ ಹಿಂದೂ ಸಮಾಜದ ಕಲ್ಯಾಣವಾಗಲಿದೆ: ಡಾ। ಅಖಿಲೇಶ್ ಪಾಣಾಜೆ

ಡಾ.ಅಖಿಲೇಶ್ ಪಾಣಾಜೆ ಮಾತನಾಡಿ, ಹಿಂದೂ ಧರ್ಮದಲ್ಲಿರುವ ನಾವೆಲ್ಲರು ನಂಬಿಕೆಯ ಆಧಾರದಲ್ಲಿ ಬದುಕುವವರು. ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿಗೆ ನಂಬಿಕೆಯೇ ಆಧಾರ. ಸನಾತನ ಧರ್ಮ ನಮಗೆ ತಿಳಿಸಿಕೊಟ್ಟಿರುವುದೂ ಇದನ್ನೆ. ಧರ್ಮದ ಮೇಲಿನ ನಂಬಿಕೆಯನ್ನು ಉಳಿಸಿದರೆ ಧರ್ಮ ನಮ್ಮನ್ನು ಉಳಿಸುತ್ತದೆ. ಈ ಎಲ್ಲಾ ಯೋಚನೆಗಳು ಮತ್ತು ಬದ್ಧತೆಗಳಿಂದಾಗಿಯೇ ನಾವೆಲ್ಲ ಸಂಸ್ಕಾರಯುತ ಬದುಕನ್ನು ಕಂಡಿರುವುದು. ನಮ್ಮ ಅಸ್ಮಿತೆಗಳಿಗೆ ಧಕ್ಕೆಯಾದಗ ಈ ತ್ಯಾಗ ಬಲಿದಾನ ಈ ಕಾರ್ಯಕ್ಕಾಗಿಯೇ ಆಗಿರುವಂತದ್ದು. ಹಿಂದೂ ಸಮಾಜ ಒಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

Oct 30, 2026 - 22:42
ಗಿರಿಜಾ ಕಲ್ಯಾಣದ ಮೂಲಕ ಹಿಂದೂ ಸಮಾಜದ ಕಲ್ಯಾಣವಾಗಲಿದೆ: ಡಾ। ಅಖಿಲೇಶ್ ಪಾಣಾಜೆ

ಪುತ್ತೂರು:ಡಿಸೆಂಬರ್ ತಿಂಗಳಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರುಮಾರು ಗದ್ದೆಯಲ್ಲಿ ನಡೆಯುವ ಗಿರಿಜಾ ಕಲ್ಯಾಣೋತ್ಸವ, ಕೇಸರಿ ಸಂಗಮ, ಲಕ್ಷ ಬಿಲ್ವಾರ್ಚನೆ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದ ಕುರಿತು, ಇಡ್ಕಿದು ಗ್ರಾಮದ ಕೊಲ್ಪೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಭಾವಿಯಾಗಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಡಾ.ಅಖಿಲೇಶ್ ಪಾಣಾಜೆ ಅವರು, ಹಿಂದೂ ಧರ್ಮದಲ್ಲಿರುವ ನಾವೆಲ್ಲರು ನಂಬಿಕೆಯ ಆಧಾರದಲ್ಲಿ ಬದುಕುವವರು. ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿಗೆ ನಂಬಿಕೆಯೇ ಆಧಾರ. ಸನಾತನ ಧರ್ಮ ನಮಗೆ ತಿಳಿಸಿಕೊಟ್ಟಿರುವುದೂ ಇದನ್ನೆ. ಧರ್ಮದ ಮೇಲಿನ ನಂಬಿಕೆಯನ್ನು ಉಳಿಸಿದರೆ ಧರ್ಮ ನಮ್ಮನ್ನು ಉಳಿಸುತ್ತದೆ. ಈ ಎಲ್ಲಾ ಯೋಚನೆಗಳು ಮತ್ತು ಬದ್ಧತೆಗಳಿಂದಾಗಿಯೇ ನಾವೆಲ್ಲ ಸಂಸ್ಕಾರಯುತ ಬದುಕನ್ನು ಕಂಡಿರುವುದು. ನಮ್ಮ ಅಸ್ಮಿತೆಗಳಿಗೆ ಧಕ್ಕೆಯಾದಗ ಈ ತ್ಯಾಗ ಬಲಿದಾನ ಈ ಕಾರ್ಯಕ್ಕಾಗಿಯೇ ಆಗಿರುವಂತದ್ದು. ಹಿಂದೂ ಸಮಾಜ ಒಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ನಿರಂತರವಾಗಿ ಧಾರ್ಮಿಕ ಚಿಂತನೆಗೆ ಧರ್ಮ ಜಾಗೃತಿಯ ಕೆಲಸಗಳಿಗೆ ಶಕ್ತಿಯನ್ನು ತುಂಬಬೇಕಾಗಿದೆ. ಹಿಂದುತ್ವಕ್ಕೆ ಮತ್ತು ಧಾರ್ಮಿಕ ಚಿಂತನೆಗಳಿಗೆ  ಶಕ್ತಿ ತುಂಬವ ಹಿನ್ನಲೆಯಿಂದ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಸಂತರ ಉಪಸ್ಥಿತಿಯಲ್ಲಿ ನಡೆಯುವ ಕೇಸರಿ ಸಂಗಮವು ಹಿಂದೂಗಳ ಏಕತೆ ಮತ್ತು ಐಕ್ಯತೆಯನ್ನು  ಸಮಾಜಕ್ಕೆ ನೀಡುವ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮದ ಮೂಲಕ ಲೋಕಾಕಲ್ಯಾಣವಾಗಲಿದೆ. ಹಿಂದೂ ಸಮಾಜದ ಮುಂದೆ ಇರುವ ಎಲ್ಲಾ ಸವಾಲುಗಳಿಗೆ ಜಾತಿ, ರಾಜಕೀಯ ಮರೆತು ಜೊತೆಯಾಗೋಣ ಎಂದರು.


ವೇದಿಕೆಯಲ್ಲಿ ಸಮಿತಿಯ ಪ್ರಮುಖರಾದ ನಾರಾಯಣ ಪ್ರಕಾಶ್, ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷರಾದ ಪ್ರಕಾಶ್ ಭಟ್, ಮಾಜಿ ಅಧ್ಯಕ್ಷರಾದ ಸುರೇಶ್ ಕೆ.ಎಸ್, ರಾಜಾರಾಮ್ ಶೆಟ್ಟಿ ಕೋಲ್ಪೆ, ಸುರೇಶ್ ಪೂಜಾರಿ, ಗಣೇಶ್ ಭಟ್, ಗಿರಿಜಾ ಕಲ್ಯಾಣೋತ್ಸವದ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಇಡ್ಕಿದು ಗ್ರಾಮದ ಪುತ್ತಿಲ ಪರಿವಾರದ ಉಸ್ತುವಾರಿಗಳಾದ ಗಣೇಶ್ಚಂದ್ರ ಮಕರಂದ,ಅಧ್ಯಕ್ಷರಾದ ಪ್ರದೀಪ್ ಕುಲಾಲ್ ಉಪಸ್ತಿತರಿದ್ದರು.
ಕಾರ್ಯಕ್ರಮವನ್ನು ಸುಧೀರ್ ನಾಯ್ಕ ನಿರೂಪಿಸಿ, ಜಯಂತ ಸೂರ್ಯ ವಂದಿಸಿದರು.