ಸಂತ ಫಿಲೋಮಿನಾ ಕಾಲೇಜು: 'ಚಿಗುರು' ಹಸ್ತಪತ್ರಿಕೆ ಬಿಡುಗಡೆ

St Philomena College: ಈಚೆಗೆ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಗಳು ಸಿದ್ಧಪಡಿಸಿದ 'ಚಿಗುರು' ಹಸ್ತಪತ್ರಿಕೆ ಬಿಡುಗಡೆ ಸಮಾರಂಭವು ಜರುಗಿತು.

Oct 28, 2026 - 14:44
ಸಂತ ಫಿಲೋಮಿನಾ ಕಾಲೇಜು: 'ಚಿಗುರು' ಹಸ್ತಪತ್ರಿಕೆ ಬಿಡುಗಡೆ

ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನ 'ಸ್ಪಂದನ' ಸಭಾಂಗಣದಲ್ಲಿ ಈಚೆಗೆ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಗಳು ಸಿದ್ಧಪಡಿಸಿದ 'ಚಿಗುರು' ಹಸ್ತಪತ್ರಿಕೆ ಬಿಡುಗಡೆ ಸಮಾರಂಭವು ಜರುಗಿತು. 

ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹಸ್ತಪತ್ರಿಕೆಯನ್ನು ಹೊರತಂದರು.

ಆ ಬಳಿಕ ಮಾತನಾಡಿ, ಅರಳುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ದೊರಕಿದ ಒಂದು ಸುಂದರ ವೇದಿಕೆಯೇ 'ಚಿಗುರು' ಹಸ್ತಪತ್ರಿಕೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಹೇಳಿದರು. 

ಉಪ ಪ್ರಾಂಶುಪಾಲ & ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ.ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯದ ಜೊತೆಗೆ, ಇಂತಹ ಪಠ್ಯಪೂರಕ ಚಟುವಟಿಕೆಗಳು ಸಹಕಾರಿ ಎಂದರು.

'ಚಿಗುರು' ಹಸ್ತಪತ್ರಿಕೆಯ ಸಂಪಾದಕಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಶ್ರೀವಿದ್ಯಾ ಎನ್ ಸ್ವಾಗತಿಸಿದರು. ಉಪಸಂಪಾದಕಿ ಅಪರ್ಣಾ ಎಸ್ ವಂದಿಸಿದರು. ಕದೀಜತ್ ಝಕಿಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.