Vidyamata Academy: ವಿದ್ಯಾಮಾತಾ ಅಕಾಡೆಮಿಯಲ್ಲಿ 3 ದಿನಗಳ 'ವಾಯ್ಸ್ & ವಿಷನ್' ತರಬೇತಿ ಕಾರ್ಯಾಗಾರ

Vidyamata Academy: 'ವಿದ್ಯಾಮಾತಾ ಅಕಾಡೆಮಿ'ಯಲ್ಲಿ 3 ದಿನಗಳ ವಾಯ್ಸ್ & ವಿಷನ್ ಎಂಬ ಭಾಷಣ ಕಲೆ ಮತ್ತು ನಾಯಕತ್ವ ವೃದ್ಧಿ ಕಾರ್ಯಾಗಾರವನ್ನು ಈಚೆಗೆ ಆಯೋಜಿಸಲಾಗಿತ್ತು.

Oct 19, 2026 - 12:22
Vidyamata Academy: ವಿದ್ಯಾಮಾತಾ ಅಕಾಡೆಮಿಯಲ್ಲಿ 3 ದಿನಗಳ 'ವಾಯ್ಸ್ & ವಿಷನ್' ತರಬೇತಿ ಕಾರ್ಯಾಗಾರ

ಪುತ್ತೂರು: ಕರಾವಳಿಯ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಸಂಸ್ಥೆ 'ವಿದ್ಯಾಮಾತಾ ಅಕಾಡೆಮಿ'ಯಲ್ಲಿ 3 ದಿನಗಳ ವಾಯ್ಸ್ & ವಿಷನ್ ಎಂಬ ಭಾಷಣ ಕಲೆ ಮತ್ತು ನಾಯಕತ್ವ ವೃದ್ಧಿ ಕಾರ್ಯಾಗಾರವನ್ನು ಈಚೆಗೆ ಆಯೋಜಿಸಲಾಗಿತ್ತು. ಈ ಮೂಲಕ ವಿದ್ಯಾರ್ಥಿಗಳು, ತರಬೇತುದಾರರು ಹಾಗೂ ಪೋಷಕರನ್ನು ಒಂದೇ ವೇದಿಕೆಯಲ್ಲಿ ತರಬೇತಿಗೆ ಒಳಪಡಿಸಲಾಗಿತ್ತು.

ಪುತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ನಿಹಾಲ್ ಪಿ ಶೆಟ್ಟಿ ಅವರು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 'ಪ್ರಸ್ತುತ ಯಾವ ಪದವಿ, ಸ್ನಾತಕೋತ್ತರ ಪದವಿ ಓದುತ್ತೇವೆ ಎನ್ನುವುದು ಮುಖ್ಯವಲ್ಲ. ಆಧುನಿಕ ಜಗತ್ತಿನಲ್ಲಿ ಉದ್ಯೋಗ ಕೌಶಲ್ಯತೆ ಪ್ರಮುಖ ಮಾನದಂಡವಾಗಿರುತ್ತದೆ. ವಿದ್ಯಾಮಾತಾ ಅಕಾಡೆಮಿ ಕೇವಲ ಪುಸ್ತಕದ ಓದಿಗೆ ಮಾತ್ರ ಸೀಮಿತವಾಗಿರದೆ, ಬದುಕಿಗೆ ಅಡಿಪಾಯವನ್ನು ಹಾಕಿಕೊಡುತ್ತಿದೆ. ಇಂತಹ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವುದು ನಿಮ್ಮೆಲ್ಲರ ಭಾಗ್ಯ' ಎಂದು ಹೇಳಿದರು.

ಮೂರು ದಿನದ ತರಬೇತಿಯನ್ನು ಶ್ರೀರಾಮಕುಂಜೇಶ್ವರ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕ ಸತೀಶ್ ಭಟ್ ಬಿಳಿನೆಲೆ ಮತ್ತು ಜೆಸಿಐ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ಅವರುಗಳು ನಡೆಸಿಕೊಟ್ಟರು. 
 
ಸಮಾರೋಪ ಮತ್ತು ಶಾರದಾ ಪೂಜೆ: 

ಅ.12 ಸೋಮವಾರದಂದು ಗಣಪತಿ ಹೋಮ ಹಾಗೂ ದುರ್ಗಾ ನಮಸ್ಕಾರ ಪೂಜೆ ಜರುಗಿತು. ಅ.14 ಬುಧವಾರದಂದು ಮಧ್ಯಾಹ್ನ ವಿದ್ಯಾರ್ಥಿಗಳಿಂದ ಭಜನೆ ನಡೆಯಿತು. ಶಾರದಾ ಪೂಜೆಯನ್ನು ಸತೀಶ್ ಭಟ್ ಮತ್ತು ಸುಮನ್ ಸತೀಶ್ ಭಟ್ ದಂಪತಿಗಳು ನೆರವೇರಿಸಿದರು. 

ತಾಲೂಕು ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು, ತರಬೇತಿ ಕಾರ್ಯಗಾರದಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಆ ಬಳಿಕ ಮಾತನಾಡಿ, 'ತಾನು ಕೂಡ ಸರ್ಕಾರಿ ಹುದ್ದೆಯ ಆಕಾಂಕ್ಷಿಯಾಗಿ ಪ್ರಯತ್ನ ಮಾಡುವಾಗ ಇದು ನಿಮ್ಮಿಂದ ಸಾಧ್ಯವಾ? ಅಂತ ಪ್ರಶ್ನೆ ಮಾಡಿದವರು ಹೆಚ್ಚು. ನಮ್ಮ ಭಾಗದಲ್ಲಿ ಸರ್ಕಾರಿ ಹುದ್ದೆಗಳಿಗೆ ಪ್ರಯತ್ನ ಮಾಡುವವರು ತುಂಬಾ ಕಡಿಮೆ. ಪ್ರಯತ್ನ ಮಾಡುವವರಿಗೆ ಪ್ರೋತ್ಸಾಹ ಕೊಡುವವರು ಇನ್ನೂ ಕಡಿಮೆ. ಆದರೆ ನಿರಂತರ ಪ್ರಯತ್ನದಿಂದ ನಮ್ಮ ಭಾಗದಲ್ಲೂ ಸರ್ಕಾರಿ ಹುದ್ದೆಗೆ ಹೋಗಲು ಸಾಧ್ಯವಿದೆ ಎಂದು ವಿದ್ಯಾಮಾತಾ ಅಕಾಡೆಮಿಯು ಸಾಭೀತು ಮಾಡಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ನಡೆಸುತ್ತಿರುವ ಎಲ್ಲಾ ತರಬೇತಿಗಳು ಯಶಸ್ವಿಯಾಗಲಿ' ಎಂದು ತಿಳಿಸಿದರು.

ಇದೇ ಕಾರ್ಯಾಗಾರದಲ್ಲಿ ಪೋಷಕರೊಂದಿಗೆ ಸಂಪನ್ಮೂಲ ವ್ಯಕ್ತಿಗಳು ಸಂವಾದ ನಡೆಸಿದರು. ಈ ವೇಳೆ ಸಂಸ್ಥೆಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥೆಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ, ತರಬೇತುದಾರರು, ಪೋಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.