Mangalore Police Alert..! ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸುವ ಮುನ್ನ ಇರಲಿ ಎಚ್ಚರ..
ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸುವಂತೆ ನಕಲಿ SMS, WhatsApp ಲಿಂಕ್ ಹಾಗೂ APK ಫೈಲ್‌ಗಳನ್ನು ಕಳುಹಿಸಿ ಸೈಬರ್ ವಂಚನೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. 2026ರಲ್ಲಿ ಮಂಗಳೂರು ನಗರದಲ್ಲಿ ಈ ಸಂಬಂಧ 8 ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಸುಮಾರು ₹44 ಲಕ್ಷ ಕಳೆದುಕೊಂಡಿದ್ದಾರೆ. ಅಧಿಕೃತ ಇ-ಚಲನ್ ವೆಬ್‌ಸೈಟ್ ಮೂಲಕವೇ ದಂಡ ಪಾವತಿಸುವಂತೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದ್ದಾರೆ. ಅಪರಿಚಿತ ಲಿಂಕ್ ಕ್ಲಿಕ್ ಮಾಡಬಾರದು, APK ಡೌನ್‌ಲೋಡ್ ಮಾಡಬಾರದು ಹಾಗೂ OTP, ಬ್ಯಾಂಕ್ ವಿವರ ಹಂಚಿಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ.
ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ದಂಡ ಪಾವತಿಸುವಂತೆ ಸೈಬರ್ ವಂಚಕರು ಸಾರ್ವಜನಿಕರ ಮೊಬೈಲ್ ಫೋನ್‌ಗಳಿಗೆ SMS/Whatsapp ಮೂಲಕ ನಕಲಿ ಲಿಂಕ್‌ಗಳು ಹಾಗೂ APK ಫೈಲ್‌ಗಳನ್ನು ಕಳುಹಿಸಿ, ಸೈಬರ್ ವಂಚನೆ ನಡೆಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ, ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕೆಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮಾಡಬೇಕಾದ ಕ್ರಮಗಳು
1. ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬAಧಿಸಿದ ಇ-ಚಲನ್ ಬಾಕಿ ಇದೆಯೇ ಎಂಬುದನ್ನು ಸರ್ಕಾರದ ಅಧಿಕೃತ ವೆಬ್‌ಸೈಟ್ https://echallan.parivahan.nic.in ನಲ್ಲಿ ಮಾತ್ರ ಪರಿಶೀಲಿಸಿ, ಅಲ್ಲಿಯೇ ದಂಡದ ಮೊತ್ತವನ್ನು ಪಾವತಿಸುವುದು.
2.ಇ-ಚಲನ್ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ, ಮಂಗಳೂರು ನಗರದ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ /ಸಂಚಾರ ಪೊಲೀಸ್ ಅಧಿಕಾರಿಗಳನ್ನು ಭೇಟಿ ನೀಡಿ ಖಚಿತಪಡಿಸಿಕೊಳ್ಳುವುದು.
3. ಈ-ಚಾಲನ್ ನೋಟಿಸು ಪೋಸ್ಟ್ ಮೂಲಕ ಸ್ವೀಕೃತವಾಗಿದ್ದರೆ, ಅದರ ದಂಡವನ್ನು Mangaloreone / Karnatakaone ನ ಅಧಿಕೃತ ವೆಬ್ ಸೈಟ್ /ಅಪ್ ಮೂಲಕ ಪಾವತಿಸುವುದು.
1.ಮೊಬೈಲ್ ಫೋನ್‌ಗೆ ಬರುವ ಯಾವುದೇ APK ಫೈಲ್ ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬಾರದು ಅಥವಾ ಇನ್‌ಸ್ಟಾಲ್ ಮಾಡಬಾರದು.
2. ಅಪರಿಚಿತ ವ್ಯಕ್ತಿಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು.
3.ಇ-ಚಲನ್ ದಂಡ ಪಾವತಿಸುವಂತೆ ಬರುವ ಅಪರಿಚಿತ ಲಿಂಕ್‌ಗಳ ಮೂಲಕ ಬ್ಯಾಂಕ್ ಖಾತೆಯ ವಿವರಗಳು, ATM ಕಾರ್ಡ್ ವಿವರಗಳು, OTP ಅಥವಾ ಇತರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು.
4. ಅಧಿಕೃತ ವೆಬ್‌ಸೈಟ್‌ಗಳಂತೆ ಕಾಣುವ ನಕಲಿ ವೆಬ್‌ಸೈಟ್ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೇವಲ https:// ಇರುವುದರಿಂದಲೇ ವೆಬ್‌ಸೈಟ್ ಅಧಿಕೃತವೆಂದು ಪರಿಗಣಿಸಬಾರದು.
ಸಾರ್ವಜನಿಕರು ಮೇಲ್ಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವುದು. ತಮ್ಮ ಮೊಬೈಲ್ ಫೋನ್‌ಗೆ ಬರುವ ಇ-ಚಲನ್ ದಂಡ ಪಾವತಿ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ 0824-2220823 ಸಂಖ್ಯೆಗೆ ಕರೆ ಮಾಡಿ ಚಿತಪಡಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ 9546132234