Video: ಕೇರಳದಿಂದ ಮಂಗಳೂರಿನ ಒಂದೇ ಮನೆಗೆ ಸೊಸೆಯಾಗಿ ಬಂದು ಸಾಧಕಿಯಾದರು!
Bharatanatyam: ಕೇರಳದಿಂದ ಮಂಗಳೂರಿನ ಒಂದೇ ಮನೆಗೆ ಸೊಸೆಯಾಗಿ ಬಂದು ಶ್ರೀಜಾ ಹರೀಶ್ ಹಾಗೂ ರೆಮ್ಯಾ ಅನೀಶ್ ಭರತನಾಟ್ಯದಲ್ಲಿ ಸಾಧನೆ ಮಾಡಿದ್ದಾರೆ.
Bharatanatyam: ಕೇರಳದಿಂದ ಮಂಗಳೂರಿನ ಒಂದೇ ಮನೆಗೆ ಸೊಸೆಯಾಗಿ ಬಂದವರು ಶ್ರೀಜಾ ಹರೀಶ್ ಹಾಗೂ ರೆಮ್ಯಾ ಅನೀಶ್.. ವಿಶೇಷವೆಂದರೆ, ಮದುವೆಯ ಬಳಿಕ ಕನ್ನಡದ ಜೊತೆಗೆ ಭರತನಾಟ್ಯವನ್ನು ಕಲಿತು ಅತ್ಯುತ್ತಮ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.
ವಿದುಷಿಯಾಗಿರುವ ಶ್ರೀಜಾ ಹಾಗೂ ರೆಮ್ಯಾ ಅವರು, ಮಂಗಳೂರಿನಲ್ಲಿ ಚಿಲಂಕ ಅಕಾಡೆಮಿ ಎನ್ನುವ ನೃತ್ಯ ಕಲಿಕಾ ಕೇಂದ್ರವನ್ನು ಸ್ಥಾಪಿಸಿ ವಯಸ್ಸಿನ ಮಿತಿಯಿಲ್ಲದೆ ಭರತನಾಟ್ಯ ಕಲಿಯಬೇಕು ಎಂದು ಬಯಸುವ ಪ್ರತಿಯೊಬ್ಬರಿಗೂ ತರಗತಿಗಳನ್ನು ಮಾಡಿ ಅವರನ್ನೆಲ್ಲ ನೃತ್ಯಪಟುಗಳಾಗಿ ತರಬೇತುಗೊಳಿಸುತ್ತಿದ್ದಾರೆ.
ಇದೀಗ ಈ ಚಿಲಂಕ ಅಕಾಡೆಮಿ ಮೂಲಕ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಒಂದೇ ಮನೆಯಲ್ಲಿದ್ದುಕೊಂಡು ಈ ಇಬ್ಬರು ಸೊಸೆಯಂದರು ಕನ್ನಡ ಭಾಷೆ ಪ್ರೀತಿಯೊಂದಿಗೆ ಕಲಾ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆ ನಿಜಕ್ಕೂ ಮಾದರಿ ಹಾಗೂ ಸ್ಫೂರ್ತಿಯ ಕಥೆಯಾಗಿದೆ.