ಮಂಗಳೂರು: Yeyyadi ಶ್ರೀರಾಮ ಮಂದಿರದ ಶತಮಾನೋತ್ಸವ ಕಾರ್ಯಾಲಯ ಉದ್ಘಾಟನೆ & ಆಮಂತ್ರಣ ಪತ್ರಿಕೆ ಬಿಡುಗಡೆ

Mangaluru: ಇಲ್ಲಿನ ಕೆಪಿಟಿಐ ಸಮೀಪವಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ 100 ವರ್ಷ ತುಂಬಿದೆ. ಈ ಸಂಭ್ರಮಾಚರಣೆ ಹಿನ್ನೆಲೆ, ನೂತನ ಶತಮಾನೋತ್ಸವ ಕಾರ್ಯಾಲಯದ ಉದ್ಘಾಟನೆ & ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ವೈಭವದಿಂದ ನೆರವೇರಿತು.

Oct 11, 2026 - 20:24
Oct 11, 2026 - 21:03
ಮಂಗಳೂರು: Yeyyadi ಶ್ರೀರಾಮ ಮಂದಿರದ ಶತಮಾನೋತ್ಸವ ಕಾರ್ಯಾಲಯ ಉದ್ಘಾಟನೆ & ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಇಲ್ಲಿನ ಕೆಪಿಟಿಐ ಸಮೀಪವಿರುವ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ 100 ವರ್ಷ ತುಂಬಿದೆ. ಈ ಸಂಭ್ರಮಾಚರಣೆ ಹಿನ್ನೆಲೆ, ನೂತನ ಶತಮಾನೋತ್ಸವ ಕಾರ್ಯಾಲಯದ ಉದ್ಘಾಟನೆ & ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇಂದು ವೈಭವದಿಂದ ನೆರವೇರಿತು. 

ಯೆಯ್ಯಾಡಿ - ಕೆಪಿಟಿ ಶ್ರೀಮೂಕಾಂಬಿಕಾ ಕಾಂಪ್ಲೆಕ್ಸ್‌ನಲ್ಲಿ ಈ ಸಮಾರಂಭವನ್ನು ಏರ್ಪಡಿಸಲಾಗಿತ್ತು. 

ಶ್ರೀರಾಮ ಮಂದಿರದ ಮುಖ್ಯ ಅರ್ಚಕ ಆಲಾಡಿ ನಾಗರಾಜ್ ಭಟ್ ಮಾತನಾಡಿ, 'ಶತಮಾನೋತ್ಸವವು ಸಮಸ್ತರನ್ನು ಒಟ್ಟುಗೂಡಿಸುವಂತಹ ಪವಿತ್ರ ಸಂಭ್ರಮ. ಇಂತಹ 100 ವರ್ಷಗಳ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಲು, ನಾವೆಲ್ಲರೂ ಪುಣ್ಯ ಮಾಡಿದ್ದೇವೆ' ಎಂದು ಹರ್ಷ ವ್ಯಕ್ತಪಡಿಸಿದರು. 

ಶತಮಾನೋತ್ಸವ ಸಮಿತಿ ಅಧ್ಯಕ್ಷ ಕಮಲಾಕ್ಷ ಬಂಗೇರಾ ಮಾತನಾಡಿ, ಆರಂಭದಲ್ಲಿ ಮುಳಿಹುಲ್ಲಿನಲ್ಲಿದ್ದ ಶ್ರೀರಾಮ ಮಂದಿರವು ಬೆಳೆದು ಬಂದ ಐತಿಹಾಸಿಕ ಹಾದಿಯನ್ನು ಸ್ಮರಿಸಿದರು.

'ಡೇಟುಡೇ ನ್ಯೂಸ್’ನ ಸಂಪಾದಕಿ ಮಾನಸ ಪುದುವೆಟ್ಟು ಮಾತನಾಡಿ, 'ನೂರು ವರ್ಷಗಳ ಹಿಂದೆ ನಮ್ಮ ಹಿರಿಯರು ಹಾಕಿಕೊಟ್ಟ ಭಕ್ತಿ ಮತ್ತು ನಂಬಿಕೆಯ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕಳೆದ ಒಂದು ಶತಮಾನದಿಂದ ಈ ದೇವಾಲಯವು ಕೇವಲ ಪೂಜಾ ಸ್ಥಳವಾಗಿರದೆ, ಊರಿನ ಜನರ ಒಗ್ಗಟ್ಟು, ಸಂಸ್ಕೃತಿ ಮತ್ತು ಧಾರ್ಮಿಕ ಜಾಗೃತಿಗೆ ಕೇಂದ್ರ ಬಿಂದುವಾಗಿದೆ. ಈ ಪುಣ್ಯಕ್ಷೇತ್ರದ ಬಗ್ಗೆ ಇನ್ನಷ್ಟು ಪ್ರಚಾರ ಮಾಡುವ ಅಗತ್ಯವಿದೆ' ಎಂದು ಹೇಳಿದರು.

ಈ ವೇಳೆ ಗಾಡಿಯನ್ಸ್ ಕನ್ಸ್ಟ್ರಕ್ಷನ್'ನ ಕೆ.ಕೇಶವ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಟಿ.ಎ.ಶಾನ್‌ವಾಜ್, ಕಿಶೋರ್ ದಂಡೆಕೇರಿ, ವಿವೇಕಾನಂದ ಗುರುಬಾಹು, ಅರಸು ಜಾರಂದಾಯ ದೇವಸ್ಥಾನ ಕಾರ್ಯದರ್ಶಿ ಚರಣ್ ಕುಮಾರ್, ಮೂಕಾಂಬಿಕಾ ಕೃಪಾ ಮಾಲೀಕಿ ಮಲ್ಲಿಕಾ ಹಾಗೂ ಉದ್ಯಮಿ ಸೂರಜ್ ಕಾಮತ್ ಸೇರಿದಂತೆ ಹಲವು ಗಣ್ಯರು ಇದ್ದರು.

ಶತಮಾನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು:

ದೇಗುಲದ 'ಶತಮಾನೋತ್ಸವ' ಅಂಗವಾಗಿ, ನ.13 ರಿಂದ 22 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ನ.13 ರಂದು ಸೀತಾರಾಮ ಕಲ್ಯಾಣೋತ್ಸವ, ನ.15 ರಂದು ಚಂಡಿಕಾ ಹೋಮ ಹಾಗೂ ನ.17 ರಂದು ಶ್ರೀಮಹಾಗಣಪತಿ ದೇವರಿಗೆ ಅಪ್ಪದ ಪೂಜೆ ಜರುಗಲಿದೆ. 

ಶತಮಾನೋತ್ಸವದ ಸವಿನೆನಪಿಗಾಗಿ ಶ್ರೀರಾಮ, ಸೀತೆ, ಲಕ್ಷ್ಮಣ, ಮುಖ್ಯಪ್ರಾಣ ಮತ್ತು ಮಹಾಗಣಪತಿ ದೇವರಿಗೆ ಅತ್ಯಂತ ವಿಶಿಷ್ಟವಾದ ಬೆಳ್ಳಿ ಕವಚವನ್ನು ಸಮರ್ಪಿಸಲಾಗುತ್ತದೆ.

ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ನ.12ರ ಸಂಜೆ 5 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ವೈಭವದ ಹೊರಕಾಣಿಕೆ ಮೆರವಣಿಗೆ ಹೊರಡಲಿದೆ. ಆ ಬಳಿಕ ನ.16 ರಂದು ಸಂಜೆ 6:30ಕ್ಕೆ ವಿಶೇಷ ಸಭಾ ಕಾರ್ಯಕ್ರಮ ನಡೆಯಲಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.