ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮ
St Philomena College: ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪುತ್ತೂರು: ಸಂತ ಫಿಲೋಮಿನಾ ಕಾಲೇಜು, ಆರೋಗ್ಯ ಕೇಂದ್ರ (ಪುತ್ತೂರು), ಯುವ ರೆಡ್ ಕ್ರಾಸ್ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ವತಿಯಿಂದ, ಕುಂಟಿಕಾನದ ಎಜೆ ಆಸ್ಪತ್ರೆ & ಸಂಶೋಧನಾ ಕೇಂದ್ರ (ಮಂಗಳೂರು) ಸಹಕಾರದೊಂದಿಗೆ ಈಚೆಗೆ ಸ್ನಾತಕೋತ್ತರ ಸೆಮಿನಾರ್ ಸಭಾಂಗಣದಲ್ಲಿ 'ಅಂಗಾಂಗ ದಾನ ಜಾಗೃತಿ' ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ.ಡಾ.ಆ್ಯಂಟನಿ ಪ್ರಕಾಶ್ ಮೊಂತೇರೊ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಂಗಳೂರಿನ ಎಜೆ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಸಾಮಾನ್ಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ & ಸಲಹಾ ವೈದ್ಯೆ ಡಾ.ಸ್ವಾತಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅಂಗಾಂಗ ದಾನದ ಮಹತ್ವ, ಅಂಗಾಂಗ ದಾನದ ಮೂಲಕ ಜೀವಗಳನ್ನು ಉಳಿಸುವ ಸಾಧ್ಯತೆ ಮತ್ತು ಅಂಗಾಂಗ ದಾನಿಗಳ ಅಗತ್ಯದ ಕುರಿತು ಮಾಹಿತಿ ನೀಡಿದರು.

ಮಂಗಳೂರಿನ ಎಜೆ ಆಸ್ಪತ್ರೆಯ ಸಂಬಂಧಗಳು ಹಾಗೂ ಸಂವಹನ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಕಾರ್ತಿಕ್ ಬಿ ಉಪಸ್ಥಿತರಿದ್ದು, ಕಾರ್ಯಕ್ರಮದ ಆಯೋಜನೆಗೆ ಸಹಕಾರ ನೀಡಿದರು.
ಮಾನಸಾ ಹಾಗೂ ಸುಷ್ಮಾ ಪ್ರಾರ್ಥಿಸಿದರು. ದ್ವಿತೀಯ ಬಿಬಿಎ ವಿದ್ಯಾರ್ಥಿ ಆದಿತ್ಯ ಕುದ್ವ ಸ್ವಾಗತಿದರು. ತೃತೀಯ ಬಿಕಾಂ ವಿದ್ಯಾರ್ಥಿನಿ ಅಪೂರ್ವ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ಆರೋಗ್ಯ ಕೇಂದ್ರದ ಉಸ್ತುವಾರಿ ಶಶಿಪ್ರಭಾ ಬಿ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕಿ ಡಿಂಪಲ್ ಜೆನ್ನಿಫರ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ಸಂಯೋಜಿಸಿದರು.
ದ್ವಿತೀಯ ಬಿಬಿಎ ವಿದ್ಯಾರ್ಥಿ ಅಬ್ದುಲ್ ಖಾದರ್ ವಂದಿಸಿದರು.
