Coca-Cola: 26 ವರ್ಷಗಳ ನಂತರ 'ಗೋಲ್ಡ್ ಸ್ಪಾಟ್' ಪಾನೀಯ ಮರುಪರಿಚಯಿಸಲು ಸಿದ್ಧತೆ!

Coca-Cola: ಕೋಕಾ-ಕೋಲಾ ಕಂಪನಿಯು ಸುದೀರ್ಘ 26 ವರ್ಷಗಳ ನಂತರ, ಕಿತ್ತಳೆ ಹಣ್ಣಿನ ರುಚಿಯುಳ್ಳ ಕಾರ್ಬೊನೇಟೆಡ್ ಪಾನೀಯ 'ಗೋಲ್ಡ್ ಸ್ಪಾಟ್'ನ್ನು ಮರುಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.

Nov 24, 2026 - 13:57
Nov 24, 2026 - 13:58
Coca-Cola: 26 ವರ್ಷಗಳ ನಂತರ 'ಗೋಲ್ಡ್ ಸ್ಪಾಟ್' ಪಾನೀಯ ಮರುಪರಿಚಯಿಸಲು ಸಿದ್ಧತೆ!
ಚಿತ್ರಕೃಪೆ: https://openthemagazine.com/

ನವದೆಹಲಿ: ಕೋಕಾ-ಕೋಲಾ (Coca-Cola) ಕಂಪನಿಯು ಸುದೀರ್ಘ 26 ವರ್ಷಗಳ ನಂತರ, ಕಿತ್ತಳೆ ಹಣ್ಣಿನ ರುಚಿಯುಳ್ಳ ಕಾರ್ಬೊನೇಟೆಡ್ ಪಾನೀಯ 'ಗೋಲ್ಡ್ ಸ್ಪಾಟ್'ನ್ನು (Gold Spot) ಮರುಪರಿಚಯಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. 

'ಗೋಲ್ಡ್ ಸ್ಪಾಟ್' ಕಡಿಮೆ ಸಕ್ಕರೆ ಅಥವಾ ಸಕ್ಕರೆ ರಹಿತ ಪಾನೀಯವಾಗಿ ಮಾರಾಟಕ್ಕೆ ಬರಲಿದ್ದು, ಮುಂದಿನ ವಾರದಿಂದ ಗ್ರಾಹಕರ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ.

'ಕೋಕಾ-ಕೋಲಾ' 1993ರಲ್ಲಿ ಪಾರ್ಲೆ ಬಿಸ್ಲೇರಿಯ ಮಾಲೀಕ ರಮೇಶ್ ಚೌಹಾಣ್ ಅವರಿಂದ ಥಮ್ಸ್ಅಪ್ ಮತ್ತು ಲಿಮ್ಕಾ ಜೊತೆಗೆ ಗೋಲ್ಡ್ ಸ್ಪಾಟ್ ಅನ್ನು ಖರೀದಿಸಿತ್ತು. ಆದಾಗ್ಯೂ, ತನ್ನ ಜಾಗತಿಕ ಬ್ರ್ಯಾಂಡ್ 'ಫ್ಯಾಂಟಾ'ಗೆ ಮಾರುಕಟ್ಟೆ ಒದಗಿಸಲು 2000ರಲ್ಲಿ 'ಗೋಲ್ಡ್ ಸ್ಪಾಟ್' ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. 

1971ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡ 'ಗೋಲ್ಡ್ ಸ್ಪಾಟ್', 1980 ಮತ್ತು 1990ರ ದಶಕಗಳಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು.

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಧೋನಿ ಕೆಲ ದಿನಗಳ ಹಿಂದೆ, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದರು.

ಧೋನಿ 'ಗೋಲ್ಡ್ ಸ್ಪಾಟ್' ಕ್ಯಾನ್‌ನ್ನು ಟೇಬಲ್ ಮೇಲೆ ಇಟ್ಟುಕೊಂಡು ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದು 'ಗೋಲ್ಡ್ ಸ್ಪಾಟ್' ಮಾರಾಟಕ್ಕೆ ಬರಲಿದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಕ್ಯಾಂಪಾ ಕೋಲಾ ಹಾಗೂ ಇತರೆ ಪ್ರಾದೇಶಿಕ ಪಾನೀಯ ಬ್ರ್ಯಾಂಡ್‌ಗಳಿಂದ ಹೆಚ್ಚುತ್ತಿರುವ ತೀವ್ರ ಸ್ಪರ್ಧೆಯನ್ನು ಎದುರಿಸಲು ಕೋಕಾ-ಕೋಲಾ, ಗೋಲ್ಡ್ ಸ್ಪಾಟ್'ನ್ನು ಮರುಪರಿಚಯಿಸಲು ಸಜ್ಜಾಗಿದೆ ಎಂದು ಹೇಳಲಾಗಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.