ವಿವೇಕಾನಂದ ಪದವಿ-ಪೂರ್ವ ಕಾಲೇಜು: 'ಪರಂಪರಾ ದರ್ಶನಂ' ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜನೆ

Vivekananda PU College: ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ಏಕತಾ ವೇದಿಕೆಯಲ್ಲಿ 'ಪರಂಪರಾ ದರ್ಶನಂ' ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

Nov 3, 2026 - 13:05
Nov 3, 2026 - 13:07
ವಿವೇಕಾನಂದ ಪದವಿ-ಪೂರ್ವ ಕಾಲೇಜು: 'ಪರಂಪರಾ ದರ್ಶನಂ' ವಾರ್ಷಿಕೋತ್ಸವ ಕಾರ್ಯಕ್ರಮ ಆಯೋಜನೆ

ಪುತ್ತೂರು: ವಿದ್ಯಾರ್ಥಿ ಜೀವನವೆಂಬುದು ಸುವರ್ಣ ಯುಗವಿದ್ದಂತೆ, ವಿದ್ಯಾರ್ಥಿ ದೆಸೆಯ ಅನುಭವಗಳನ್ನು ಮತ್ತೆ ಗಳಿಸುವುದು ಕಷ್ಟಕರ. ಅನುಭವಗಳು ಭವಿಷ್ಯದ ನಮ್ಮ ದಾರಿಯನ್ನು ಸ್ಪಷ್ಟಪಡಿಸುತ್ತವೆ. ಇಂದಿನ ಶಿಕ್ಷಣ ವ್ಯವಸ್ಥೆ ಸಂಸ್ಕಾರಭರಿತ ವಿದ್ಯೆ ಹಾಗೂ ಶಿಸ್ತನ್ನು ಕಲಿಸಿಕೊಡುವಲ್ಲಿ ಸೋಲು ಕಂಡಿವೆ. ಪ್ರಾಚೀನ ಶಿಕ್ಷಣ ಪರಂಪರೆ, ಒಬ್ಬ ವಿದ್ಯಾರ್ಥಿಗೆ ವಿದ್ಯೆಯ ಜೊತೆಗೆ ಜೀವನ ಮೌಲ್ಯವನ್ನು ಕಟ್ಟಿಕೊಡುವಲ್ಲಿ ಸಾಫಲ್ಯವಾಗಿವೆ ಎಂದು ವಾಗ್ಮಿ & ಕರ್ನಾಟಕ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್  ಹೇಳಿದರು.

ಇಲ್ಲಿನ ವಿವೇಕಾನಂದ ಪದವಿ-ಪೂರ್ವ ಕಾಲೇಜಿನ ಏಕತಾ ವೇದಿಕೆಯಲ್ಲಿ ನಡೆದ 'ಪರಂಪರಾ ದರ್ಶನಂ' ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಲೆಕ್ಕ ಪರಿಶೋಧಕರು ಮತ್ತು ಹಿರಿಯ ವಿದ್ಯಾರ್ಥಿ ಸಿ.ಎ.ದೀಪಕ್ ಮಾತನಾಡಿ, ವಿದ್ಯಾರ್ಥಿಗಳ ಓದು, ಜೀವನವನ್ನು ರೂಪಿಸುವಲ್ಲಿ ಮಾರ್ಗದರ್ಶನವಾಗಬೇಕೇ ಹೊರತು, ಕೇವಲ ಪರೀಕ್ಷೆಗಾಗಿ ಓದು ಸೀಮಿತವಾಗುವುದು ಸಮಂಜಸವಲ್ಲ ಎಂದು ತಿಳಿಸಿದರು.

ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕ ಡಾ.ಕೆ.ಎನ್.ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲುಕಠಿಣ ಪರಿಶ್ರಮವೇ ಮೂಲಾಧಾರ. ಅದು ನಿರ್ದಿಷ್ಟ ಗುರಿ ಮತ್ತು ಸಕಾರಾತ್ಮಕ ಚಿಂತನೆಯಿಂದ ಕೂಡಿರಬೇಕು ಎಂದರು. 

ಸಭಾವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಭರತ್ ಪೈ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಶಶಿಕಲಾ ಎಂ.ಕೆ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಪ್ರಾಸ್ತಾವಿಕ ಮಾತುಗಳೊಂದಿಗೆ, ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ಶೀತಲಾ ವಂದಿಸಿದರು. ಪವಿತ್ರ ಕಾರ್ಯಕ್ರಮವನ್ನು ನಿರೂಪಿಸಿದರು. ಆ ಬಳಿಕ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.