ದಿನ ಭವಿಷ್ಯ : ಇವತ್ತು ಯಾರಿಗೆ ಶುಭ?
Daily Horoscope: ಇಂದು (ಸೋಮವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ದೇವಿಯ ವಿಶೇಷ ಅನುಗ್ರಹದ ದಿನ.. ಏಳೂವರೆ ಶನಿಯ ಪ್ರಭಾವ ಇದ್ದರೂ ಪ್ರಗತಿ ಅಬಾಧಿತ. ಉದ್ಯಮಗಳು ಸಮಾಧಾನದ ಸ್ಥಿತಿಯಲ್ಲಿ. ಕೆಲವರಿಗೆ ಹಠಾತ್ ಧನಲಾಭ. ಮಹಿಳೆಯರ ಗೃಹೋದ್ಯಮ ಉತ್ತುಂಗ ಸ್ಥಿತಿಯತ್ತ. ಗಣೇಶ ಕವಚ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
ವೃಷಭ:
ಸಣ್ಣ ಹೂಡಿಕೆಗಳಿಗೆ ಒಳ್ಳೆಯ ದಿನ.. ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಯುವಜನರ ಪ್ರವೇಶ. ಹತ್ತಿರದ ದೇವೀಕ್ಷೇತ್ರಕ್ಕೆ ಸಂದರ್ಶನ. ಗೃಹಿಣಿಯರಿಗೆ ವಿಶೇಷ ಸಮಾಧಾನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
ಮಿಥುನ:
ಭಗವತಿಯ ಸ್ಮರಣೆಯಿಂದ ಧೈರ್ಯಪ್ರಾಪ್ತಿ.. ಉದ್ಯೋಗ ಸ್ಥಾನದಲ್ಲಿ ದಿಟ್ಟ ಹೆಜ್ಜೆಗಳು. ಉದ್ಯಮ ಅಭಿವೃದ್ಧಿಗೆ ಪೂರಕ ಬೆಳವಣಿಗೆ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಮನೆಯಲ್ಲಿ ಸ್ತೋತ್ರ ಪಾರಾಯಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಪಂಜರ ಸ್ತೋತ್ರ, ಆದಿತ್ಯ ಹೃದಯ ಓದಿ.
ಕರ್ಕಾಟಕ:
ಜಗನ್ಮಾತೆಯ ವಿಶೇಷ ಅನುಗ್ರಹದ ಅನುಭವ.. ಅಕಸ್ಮಾತ್ ಧನಾಗಮ ಯೋಗ. ಬಂಧುವರ್ಗದಿಂದ ಶುಭವಾರ್ತೆ. ಕೃಷ್ಯುತ್ಪನ್ನ ಮಾರಾಟದಿಂದ ಉತ್ತಮ ಲಾಭ. ಕುಟುಂಬದಲ್ಲಿ ಪರಸ್ಪರ ಸ್ನೇಹ, ಸದ್ಭಾವನೆ ವೃದ್ಧಿ. ಗಣೇಶ ಅಷ್ಟಕ, ರಾಮ ಭುಜಂಗಪ್ರಯಾತ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
ಸಿಂಹ:
ಹೊಸ ಉತ್ಪಾದನಾ ಕ್ಷೇತ್ರಗಳಿಗೆ ಪ್ರವೇಶ.. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಸ್ಥಾನ. ವಿಸ್ತೃತ ಕಾರ್ಯಕ್ಷೇತ್ರದಲ್ಲಿ ಕ್ಷಿಪ್ರ ಪ್ರಗತಿಯ ಅನುಭವ. ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ. ವಿವಾಹಾಪೇಕ್ಷಿಗಳಿಗೆ ಇಷ್ಟಾರ್ಥ ಸಿದ್ಧಿ. ಗಣಪತಿ ಅಥರ್ವಶೀರ್ಷ, ಹನುಮತ್ಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಕನ್ಯಾ:
ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ.. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿಗೆ ಅನುಕೂಲ ವಾತಾವರಣ. ದ್ವಿಚಕ್ರ ವಾಹನ ಚಾಲನೆಯಲ್ಲಿ ಎಚ್ಚರ. ಆದಾಯ ಗಳಿಕೆಯ ಅನ್ಯ ಮಾರ್ಗಗಳ ಶೋಧನೆ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
ತುಲಾ:
ನೈತಿಕ ಧೈರ್ಯ ತುಂಬಿದ ಬಾಳ ಸಂಗಾತಿ.. ದೇವಿಯ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸಮಾಧಾನ. ಕಾರ್ಯನಿಷ್ಠ ವ್ಯಕ್ತಿಗಳಿಗೆ ಗೌರವ. ಮಕ್ಕಳಿಂದಾಗಿ ಪೋಷಕರಿಗೆ ಗೌರವ. ಸಣ್ಣ ಬಗೆಯ ಉದ್ಯಮಿಗಳಿಗೆ ಶುಭದಿನ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ವೃಶ್ಚಿಕ:
ಉದ್ಯೋಗ ಸ್ಥಾನದಲ್ಲಿ ಹಿತಾನುಭವ.. ಸರ್ಕಾರಿ ನೌಕರರಿಗೆ ಪುಢಾರಿಗಳ ಕಿರಿಕಿರಿ. ಸಹಕಾರಿ ಸಂಸ್ಥೆಗಳ ಸಮಸ್ಯೆ ನಿವಾರಣೆ. ಸಂಸಾರದಲ್ಲಿ ಹಿರಿಯರು, ಗೃಹಿಣಿಯರಿಗೆ ಆನಂದದ ಸನ್ನಿವೇಶ. ಆಧ್ಯಾತ್ಮಿಕ ಸಾಧನೆಗೆ ಅನುಕೂಲದ ಸನ್ನಿವೇಶ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಅಷ್ಟಲಕ್ಷ್ಮೀ ಸ್ತೋತ್ರ ಓದಿ.
ಧನು:
ನವರಾತ್ರಿಯ ಪರ್ವಕಾಲದಲ್ಲಿ ಎಲ್ಲವು ಶುಭ.. ಸಣ್ಣ ಉದ್ಯಮ ಘಟಕದ ಉತ್ಪಾದನೆ ವೃದ್ಧಿ. ಖಾದಿ ಉಡುಪು ಮಾರಾಟಗಾರರಿಗೆ ಲಾಭ. ಹಿರಿಯರ ಆಸ್ತಿಯಲ್ಲಿ ಕೃಷಿ ಪ್ರಗತಿ. ಜೇನು, ಹೈನುಗಾರಿಕೆ ಕ್ಷೇತ್ರಕ್ಕೆ ಪ್ರವೇಶ ಫಲಪ್ರದ. ಗಣೇಶ ಸ್ತೋತ್ರ, ಹನುಮಾನ್ ಚಾಲೀಸಾ, ಗೌರೀದಶಕ ಓದಿ.
ಮಕರ:
ವಾರದ ಆರಂಭದಲ್ಲಿ ಕಾರ್ಯಗಳ ವೇಗವೃದ್ಧಿ.. ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ವರಮಾನ ವೃದ್ಧಿ. ದಂಪತಿಗಳ ನಡುವಿನ ವೈಮನಸ್ಯ ದೂರ. ಸಾಮೂಹಿಕ ಸ್ತೋತ್ರಪಾಠದಲ್ಲಿ ಭಾಗಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ಕುಂಭ:
ಸರಿಸಾಟಿಯಿಲ್ಲದ ಚುರುಕುಬುದ್ಧಿ ಪ್ರದರ್ಶನ.. ಉದ್ಯೋಗ ಸ್ಥಾನದಲ್ಲಿ ಹಲವರಿಗೆ ಮಾರ್ಗದರ್ಶನ. ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ. ಆಪ್ತರಿಂದ ಸಕಾಲಿಕ ಸಹಾಯದ ಕೊಡುಗೆ. ಸಾಮೂಹಿಕ ಉಪಾಸನೆಯಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿ ಮಹಾತ್ಮೆ ಓದಿ.
ಮೀನ:
ಮಾಮೂಲಿನಂತೆ ಹಲವು ಕಾರ್ಯಗಳ ಒತ್ತಡ.. ಒಂದಕ್ಕಿಂತ ಹೆಚ್ಚು ಕೆಲಸಗಳಿಗೆ ಗಮನ ಹರಿಸುವ ಅನಿವಾರ್ಯತೆ. ಸರ್ಕಾರಿ ನೌಕರರಿಗೆ ಸಮಾಧಾನ ತಂದ ಕೊಡುಗೆ. ಕೃಷಿಕರಿಗೆ ಸಾಮಾನ್ಯ ಸಂತೃಪ್ತಿ.ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.