Bethlehem Kudumba Unit: 'ಬೆತ್ಲಹೆಮ್ ಕುಟುಂಬ ಯುನಿಟ್' ಒಟಿಟಿ ರಿಲೀಸ್ ಡೇಟ್ ಫಿಕ್ಸ್!
Bethlehem Kudumba Unit: ಮಲಯಾಳಂ ಸೂಪರ್ ಹಿಟ್ ಸಿನಿಮಾ 'ಬೆತ್ಲಹೆಮ್ ಕುಟುಂಬ ಯುನಿಟ್' ಒಟಿಟಿಯಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿದೆ.
Bethlehem Kudumba Unit: ನಟ ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಲಯಾಳಂ ಸೂಪರ್ ಹಿಟ್ ಸಿನಿಮಾ 'ಬೆತ್ಲಹೆಮ್ ಕುಟುಂಬ ಯುನಿಟ್' ಒಟಿಟಿಯಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿದೆ.
ಅಕ್ಟೋಬರ್ 2 ರಿಂದ 'ಜಿಯೋಹಾಟ್‌ಸ್ಟಾರ್' ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮಲಯಾಳಂ ಜೊತೆಗೆ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿಯೂ ವೀಕ್ಷಣೆಗೆ ಲಭ್ಯವಿದೆ.
ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಗಿರೀಶ್ ಎ.ಡಿ ಆಕ್ಷನ್ ಕಟ್ ಹೇಳಿದ್ದಾರೆ. ಆಗಸ್ಟ್ 21 ರಿಲೀಸ್ ಆಗಿದ್ದ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿಯೂ ಅಬ್ಬರಿಸಿದ್ದು, ವಿಶ್ವಾದ್ಯಂತ ರೂ.330 ಕೋಟಿಯಷ್ಟು ಗ್ರಾಸ್ ಕಲೆಕ್ಷನ್ ಮಾಡಿದೆ.
ಭಾವನಾ ಸ್ಟುಡಿಯೋಸ್, ವರ್ಕಿಂಗ್ ಕ್ಲಾಸ್ ಹೀರೋ ಹಾಗೂ ಫಹಾದ್ ಫಾಸಿಲ್ ಆಂಡ್ ಫ್ರೆಂಡ್ಸ್ ಬ್ಯಾನರ್‌ನಡಿ ನಿರ್ಮಿಸಲಾಗಿದೆ. ವಿಷ್ಣು ವಿಜಯ್ ಮ್ಯಾಸಿಕ್ ನೀಡಿದ್ದು, ಅಜ್ಮಲ್ ಸಾಬು ಕ್ಯಾಮೆರಾ ವರ್ಕ್ ಮಾಡಿದ್ದಾರೆ.
ಸಂಗೀತ್ ಪ್ರತಾಪ್, ಸುರೇಶ್ ಕೃಷ್ಣ, ವಿನಯ್ ಫೋರ್ಟ್, ಶ್ಯಾಮ್ ಮೋಹನ್, ಬಿಂದು ಪಣಿಕ್ಕರ್, ಸ್ರಿಂಡಾ, ಮೀನಾಕ್ಷಿ ರವೀಂದ್ರನ್, ರೋಶನ್ ಶಾನವಾಸ್ ಹಾಗೂ ಶಮೀರ್ ಖಾನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.