Irumudi: ನೆಟ್‌ಫ್ಲಿಕ್ಸ್‌ನಲ್ಲಿ ಭರ್ಜರಿ ಪ್ರದರ್ಶನ
Irumudi: ತೆಲುಗಿನ ಸೂಪರ್-ಹಿಟ್ ಸಿನಿಮಾ 'ಇರುಮುಡಿ' ನೆಟ್‌ಫ್ಲಿಕ್ಸ್‌ನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ.
Irumudi: 'ಮಾಸ್ ಮಹಾರಾಜ' ರವಿತೇಜ ನಟನೆಯ ತೆಲುಗಿನ ಸೂಪರ್-ಹಿಟ್ ಸಿನಿಮಾ 'ಇರುಮುಡಿ' ನೆಟ್‌ಫ್ಲಿಕ್ಸ್‌ನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ನಂಬರ್ 1 ಸ್ಥಾನದಲ್ಲಿದ್ದು, ಈವರೆಗೆ 68 ಲಕ್ಷದಷ್ಟು ವೀಕ್ಷಣೆಯಾಗಿದೆ.
ಸೆ.18 ರಿಂದ ಸ್ಟ್ರೀಮಿಂಗ್ ಶುರವಾಗಿತ್ತು. ಮೊದಲ 3 ದಿನಗಳಲ್ಲಿ 34 ಲಕ್ಷ ವೀಕ್ಷಣೆ ಪಡೆದುಕೊಂಡಿತ್ತು. ಈ ಚಿತ್ರವನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ.
ಆ.21 ರಂದು ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿಯೂ ಅಬ್ಬರಿಸಿತ್ತು. ವಿಶ್ವಾದ್ಯಂತ ರೂ.240 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ.
ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದು, ಶಿವ ನಿರ್ವಾಣ ಆಕ್ಷನ್ ಕಟ್ ಹೇಳಿದ್ದಾರೆ. ಇದರ ಕಥೆಯು ಅಪ್ಪ ಮತ್ತು ಮಗಳ ನಡುವಿನ ಭಾವನಾತ್ಮಕ ಸಂಬಂಧದ ಸುತ್ತ ಸುತ್ತುತ್ತದೆ.
ಪ್ರಿಯಾ ಭವಾನಿ ಶಂಕರ್ (ನಾಯಕಿ), ಸಾಯಿ ಕುಮಾರ್, ಅಜಯ್ ಘೋಷ್ ಮತ್ತು ರಮೇಶ್ ಇಂದಿರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದು, ವಿಷ್ಣು ಶರ್ಮಾ ಕ್ಯಾಮೆರಾ ವರ್ಕ್ ಮಾಡಿದ್ದಾರೆ.