Drishyam-3: ದೃಶ್ಯಂ-3 ರೂ.300 ಕೋಟಿ ಕ್ಲಬ್ ಸೇರುವತ್ತಾ?
Drishyam-3: ಬಾಲಿವುಡ್ ಸಿನಿಮಾ 'ದೃಶ್ಯಂ-3' ಬಾಕ್ಸ್ ಆಫೀಸ್‌ನಲ್ಲಿಯೂ ಭರ್ಜರಿ ಯಶಸ್ಸು ಕಾಣುತ್ತಿದೆ.
Drishyam-3: ಅಜಯ್ ದೇವಗನ್ ನಟನೆಯ ಬಾಲಿವುಡ್ ಸಿನಿಮಾ 'ದೃಶ್ಯಂ-3' ಇದೇ ಶುಕ್ರವಾರ ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿಯೂ ಭರ್ಜರಿ ಯಶಸ್ಸು ಕಾಣುತ್ತಿದೆ.
ಸ್ಯಾಕ್ನಿಲ್ಕ್ ಪ್ರಕಾರ, ಭಾರತದಲ್ಲಿ 3ನೇ ದಿನವಾದ ಭಾನುವಾರ ರೂ.61 ಕೋಟಿ ನೆಟ್ ಗಳಿಕೆ ಕಂಡಿದೆ. 17,323 ಶೋಗಳು ಪ್ರದರ್ಶನಗೊಂಡಿವೆ. ಇದರೊಂದಿಗೆ ವಿಶ್ವಾದ್ಯಂತ ರೂ.272.80 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಈ ಸಿನಿಮಾ ಕಥೆಯು ವಿಜಯ್ ಸಾಳಗಾಂವ್ಕರ್ ಹಾಗೂ ಆತನ ಕುಟುಂಬದ ಸುತ್ತ ಸುತ್ತುತ್ತದೆ. ಅಭಿಷೇಕ್ ಪಾಠಕ್ ಆಕ್ಷನ್ ಕಟ್ ಹೇಳಿದ್ದಾರೆ.
ಪನೋರಮಾ ಸ್ಟುಡಿಯೋಸ್ ಮತ್ತು ಸ್ಟಾರ್ ಸ್ಟುಡಿಯೋಸ್ 18 ಬ್ಯಾನರ್‌ನಡಿ ನಿರ್ಮಿಸಲಾಗಿದೆ. ಸುಧೀರ್ ಕೆ ಚೌಧರಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ರವಿ ಬಸ್ರೂರ್ ಹಾಗೂ ರೋಚಕ್ ಕೊಹ್ಲಿ ಮ್ಯೂಸಿಕ್ ನೀಡಿದ್ದಾರೆ.
ಟಬು, ಜೈದೀಪ್ ಅಹ್ಲಾವತ್, ಪ್ರಕಾಶ್ ರಾಜ್, ಶ್ರಿಯಾ ಸರನ್, ರಜತ್ ಕಪೂರ್, ಇಶಿತಾ ದತ್ತಾ ಹಾಗೂ ಕಮಲೇಶ್ ಸಾವಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.