Lava Virat Curve 5G: ಇಂದು ರಾತ್ರಿ 7 ರಿಂದ ಲಾವಾ ವಿರಾಟ್ ಕರ್ವ್ 5ಜಿ ಸ್ಮಾರ್ಟ್‌ಫೋನ್ ಸೇಲ್ ಶುರು.. ಬೆಲೆ ಇಷ್ಟೇನಾ?
Lava Virat Curve 5G: ಇಂದು ರಾತ್ರಿ 7 ರಿಂದ 'ಫ್ಲಿಪ್‌ಕಾರ್ಟ್'ನಲ್ಲಿ 'ಲಾವಾ ವಿರಾಟ್ ಕರ್ವ್ 5ಜಿ' ಸ್ಮಾರ್ಟ್‌ಫೋನ್ ಸೇಲ್ ಶುರುವಾಗಲಿದೆ.
Lava Virat Curve 5G: ಬಹುನಿರೀಕ್ಷಿತ 'ಲಾವಾ ವಿರಾಟ್ ಕರ್ವ್ 5ಜಿ' ಸ್ಮಾರ್ಟ್‌ಫೋನ್ ಈಚೆಗೆ ಅದ್ದೂರಿಯಾಗಿ ಲಾಂಚ್ ಆಗಿತ್ತು. ಇಂದು (ಸೆ.28) ರಾತ್ರಿ 7 ರಿಂದ 'ಫ್ಲಿಪ್‌ಕಾರ್ಟ್'ನಲ್ಲಿ ಸೇಲ್ ಶುರುವಾಗಲಿದೆ. ಈ ಫೋನ್ ಖರೀದಿಗಾಗಿ ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ.
ಇದು ಬಜೆಟ್ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದ್ದು, ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. 6GB RAM + 128GB ಆನ್‌ಬೋರ್ಡ್ ಸ್ಟೋರೇಜ್‌ನ್ನು ಒಳಗೊಂಡಿದೆ. ರೂ.23,999 ಬೆಲೆಯನ್ನು ಹೊಂದಿದೆ. ಆದಾಗ್ಯೂ ವಿಶೇಷ ಬಿಡುಗಡೆ ಕೊಡುಗೆಯ ಭಾಗವಾಗಿ, ಬ್ಯಾಂಕ್ ಆಫರ್‌ಗಳನ್ನು ಒಳಗೊಂಡಂತೆ ರೂ.19,999 ಸಿಗುತ್ತದೆ.
ಈ ಸ್ಮಾರ್ಟ್‌ಫೋನ್ ಅದ್ಬುತವಾದ 6.67-ಇಂಚಿನ Full-HD+ (1,080x2,400 ಪಿಕ್ಸೆಲ್‌ಗಳು) 3ಡಿ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7100 5G ಚಿಪ್‌ಸೆಟ್ ಪ್ರೊಸೆಸರ್‌ನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ 6GB ವರ್ಚುವಲ್ RAM ಅನ್ನು ಬೆಂಬಲಿಸುತ್ತದೆ.
ತುಂಬಾ ಚೆನ್ನಾಗಿರುವ ಕ್ಯಾಮೆರಾವನ್ನು ಹೊಂದಿದೆ. 50-ಮೆಗಾಪಿಕ್ಸೆಲ್ Sony IMX752 ಪ್ರೈಮರಿ ಕ್ಯಾಮೆರಾವನ್ನು ಪಡೆದಿದೆ. ಸೆಲ್ಫಿ & ವಿಡಿಯೋ ಕಾಲ್‌ಗಾಗಿ 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ತನ್ನದಾಗಿಸಿಕೊಂಡಿದೆ.
6,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. 45W ಚಾರ್ಜಿಂಗ್ ಆಯ್ಕೆಯನ್ನು ಸಪೋರ್ಟ್ ಮಾಡುತ್ತದೆ. 184 ಗ್ರಾಂ ತೂಕವಿದೆ. ಹೆರಿಟೇಜ್ ಇಂಡಿಗೋ, ಮಕ್ರಾನಾ ಐವರಿ ಹಾಗೂ ಎಲ್ಲೋರಾ ಸ್ಲೇಟ್ ಎಂಬ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.