ದಿನ ಭವಿಷ್ಯ: ಇವತ್ತು ಯಾರಿಗೆ ಶುಭ?
Daily Horoscope: ಇಂದು (ಬುಧವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.
ಮೇಷ:
ಉದ್ಯೋಗದಲ್ಲಿ ಹೆಚ್ಚು ಜವಾಬ್ದಾರಿ ಸಂಭವ.. ಶೀಘ್ರ ಸ್ಪಂದನದಿಂದ ಯಶಸ್ಸು. ಸಣ್ಣ ಉದ್ಯಮಿಗಳಿಗೆ ಸಮಾಧಾನ. ಮಕ್ಕಳಿಗೆ ಕಲಿಕೆಯಲ್ಲಿ ಉತ್ಸಾಹ ವೃದ್ಧಿ. ಆತ್ಮೀಯರ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
ವೃಷಭ:
ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ.. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಯಂತ್ರೋಪಕರಣ ದುರಸ್ತಿಗೆ ಧನವ್ಯಯ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಪ್ರಾಚೀನ ಪದ್ಧತಿಯಿಂದ ಆರೋಗ್ಯ ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಪಂಚರತ್ನ ಓದಿ.
ಮಿಥುನ:
ಕಾರ್ಯರೂಪಕ್ಕೆ ಬರುವ ಯೋಜನೆಗಳು.. ಕೆಲಸವನ್ನು ಪ್ರೀತಿಸುವ ಪ್ರಯತ್ನದಲ್ಲಿ ಸಫಲ. ಹಳೆಯ ಗೆಳೆಯ ಮತ್ತೆ ಸಂಪರ್ಕಕ್ಕೆ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ಆರೋಗ್ಯ ವೃದ್ಧಿಯಿಂದ ನೆಮ್ಮದಿ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಕರ್ಕಾಟಕ:
ಉದ್ಯೋಗಸ್ಥರಲ್ಲಿ ಕೆಲವರಿಗೆ ಸ್ಥಾನ ಬದಲಾವಣೆ.. ಕಾರ್ಯಗಳು ಹೆಚ್ಚು ಸುಲಭ. ಮಹಿಳೆಯರ ಸ್ವೋದ್ಯೋಗ ಯೋಜನೆಗಳಿಗೆ ಕೀರ್ತಿ. ಅನವಶ್ಯ ಪ್ರಯಾಣದ ಸಾಧ್ಯತೆ. ಪೂರ್ವಜರಿಗೆ ಶ್ರದ್ಧಾಂಜಲಿ ಸಲ್ಲಿಕೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.
ಸಿಂಹ:
ಹೆಚ್ಚು ಕೆಲಸ ಮಾಡಲು ಉತ್ತೇಜನ.. ಉದ್ಯಮಕ್ಕೆ ಹೊಸ ರೂಪ ನೀಡುವ ಪ್ರಕ್ರಿಯೆಗೆ ಚಾಲನೆ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಅಪರೂಪದ ನೆಂಟರ ಭೇಟಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.
ಕನ್ಯಾ:
ಪ್ರತಿಭಾವಂತರಿಗೆ ಸ್ಥಾನಗೌರವ.. ಸಣ್ಣ ಉದ್ಯಮ ಘಟಕಗಳಿಗೆ ಶುಭದಿನ. ಉದ್ಯೋಗಾನ್ವೇಷಿಗಳಿಗೆ ಅವಕಾಶ ಗೋಚರ. ದೂರದೇಶದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಲೇವಾದೇವಿ ವ್ಯವಹಾರ ಬಿಡುವುದರಿಂದ ಕ್ಷೇಮ. ಸಂಕಷ್ಟನಾಶನ ಗಣೇಶ. ಸ್ತೋತ್ರ, ಶಿವಾಪರಾಧ ಕ್ಷಮಾಪಣ ಸ್ತೋತ್ರ, ಆದಿತ್ಯ ಹೃದಯ ಓದಿ.
ತುಲಾ:
ಮಿತ್ರರಾಗಿ ಬದಲಾದ ಹಳೆಯ ಶತ್ರುಗಳು.. ಉತ್ಪಾದನಾ ಕ್ಷೇತ್ರದಲ್ಲಿ ಪೈಪೋಟಿ ಶಮನ. ಉದ್ಯೋಗಾಪೇಕ್ಷಿಗಳಿಗೆ ಅನುಕೂಲ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಆರೋಗ್ಯ ರಕ್ಷಣೆಯ ಕಡೆಗೆ ಗಮನ ಇರಲಿ. ಗಣೇಶ ತ್ರಿಶತಿ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.
ವೃಶ್ಚಿಕ:
ಯಾವುದೇ ತೊಂದರೆಯ ಸೂಚನೆಯಿಲ್ಲ.. ಉದ್ಯೋಗಸ್ಥರಿಗೆ ಒಂದು ಬಗೆಯ ನಿಶ್ಚಿಂತೆ. ಸರ್ಕಾರಿ ಅಧಿಕಾರಿಗಳಿಗೆ ಕೊಂಚ ಕಿರಿಕಿರಿ. ರಾಜಕಾರಣಿಗಳಿಗೆ ಅನಿಶ್ಚಿತ ಪರಿಸ್ಥಿತಿ. ಹಿರಿಯ ಮನೆಯ ಪಿತೃಕಾರ್ಯದಲ್ಲಿ ಭಾಗಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ , ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
ಧನು:
ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ.. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಆರೋಗ್ಯ ಕಾರ್ಯಕರ್ತರಿಗೆ ಕೆಲಸದ ಒತ್ತಡ. ಪ್ರಕೃತಿ ರಕ್ಷಣಾ ಕಾರ್ಯದಲ್ಲಿ ಭಾಗಿ. ಗಣೇಶ ದ್ವಾದಶನಾಮ ಸ್ತೋತ್ರ, ಹನುಮಾನ್ ಚಾಲೀಸಾ, ಕಾರ್ತಿಕೇಯ ಸ್ತೋತ್ರ ಓದಿ.
ಮಕರ:
ಕಾರ್ಯಕ್ಷೇತ್ರ ಬದಲಾವಣೆಯಿಂದ ಅನುಕೂಲ.. ಹೆಸರು ಕೆಡಿಸುವವರ ಮಸಲತ್ತಿಗೆ ಸೋಲು. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ. ಹಿರಿಯರನ್ನು ಸ್ಮರಿಸುವ ಅವಕಾಶ ಪ್ರಾಪ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
ಕುಂಭ:
ಕೆಲಸ, ಕಾರ್ಯಗಳು ಕೊನೆಯ ಹಂತಕ್ಕೆ.. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರ್ಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ,ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಶನಿಮಹಾತ್ಮೆ ಓದಿ.
ಮೀನ:
ಎಲ್ಲಕಾರ್ಯಗಳಲ್ಲಿ ಮುನ್ನಡೆ... ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಗಳವರಿಂದ ಉತ್ತಮ ಸಹಕಾರ. ಅಪೇಕ್ಷಿಸಿದವರಿಗೆ ಸಹಾಯ ಮಾಡುವ ಅವಕಾಶ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.