ಬರ್ಲಿನ್ ಗಣೇಶನಿಗೆ ಪುತ್ತೂರಿನ ಕರಕುಶಲತೆಯ ಕಿರೀಟ: ಶತಮಾನದ ಹೊಸ್ತಿಲಲ್ಲಿ ಡಿ.ಶಿವ ಭಟ್ ಜ್ಯುವೆಲ್ಲರ್ಸ್‌ನ ವಿಶಿಷ್ಟ ಸಾಧನೆ

Puttur: ಶತಮಾನದ ಹೊಸ್ತಿಲಿನಲ್ಲಿರುವ ಪುತ್ತೂರಿನ ಡಿ.ಶಿವ ಭಟ್ ಜ್ಯುವೆಲ್ಲರ್ಸ್‌ನ ವಿಶಿಷ್ಟ ಸಾಧನೆ ಮಾಡಿದೆ.

Nov 21, 2026 - 10:18
Nov 21, 2026 - 10:19
ಬರ್ಲಿನ್ ಗಣೇಶನಿಗೆ ಪುತ್ತೂರಿನ ಕರಕುಶಲತೆಯ ಕಿರೀಟ: ಶತಮಾನದ ಹೊಸ್ತಿಲಲ್ಲಿ ಡಿ.ಶಿವ ಭಟ್ ಜ್ಯುವೆಲ್ಲರ್ಸ್‌ನ ವಿಶಿಷ್ಟ ಸಾಧನೆ

ಪುತ್ತೂರು: ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ಹಿಂದೂ ದೇಗುಲದ ವಿನಾಯಕ ಮೂರ್ತಿಗಾಗಿ ಪುತ್ತೂರಿನಲ್ಲಿ ವಿಶೇಷ ವಿನ್ಯಾಸದ ಬೆಳ್ಳಿ ಕಿರೀಟವೊಂದನ್ನು ಸಿದ್ಧಪಡಿಸಲಾಗಿದೆ. 

ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಶತಮಾನದ ಹೊಸ್ತಿಲಲ್ಲಿರುವ ಪ್ರತಿಷ್ಠಿತ ಡಿ.ಶಿವ ಭಟ್ ಜ್ಯುವೆಲ್ಲರ್ಸ್‌ನ ನುರಿತ ಕರಕುಶಲ ಕರ್ಮಿಗಳು ಆರು ತಿಂಗಳ ಸತತ ಪರಿಶ್ರಮದಿಂದ ಈ ವಿಶಿಷ್ಟ ಕಲಾಕೃತಿಯನ್ನು ರೂಪಿಸಿದ್ದಾರೆ.

ಶ್ಯಾಮಲಾ ನಾಯಕ್ ಪುಣಚ ಹಾಗೂ ಅವರ ಕುಟುಂಬದವರ ಸೇವಾರ್ಥವಾಗಿ ಸಮರ್ಪಿಸಲಾಗುತ್ತಿರುವ ಈ ಬೆಳ್ಳಿ ಕಿರೀಟವು ಕೇವಲ ಆಭರಣವಲ್ಲ, ಪುತ್ತೂರಿನ ಕರಕುಶಲ ಪರಂಪರೆ, ಕಲಾತ್ಮಕತೆ ಮತ್ತು ಭಕ್ತಿಭಾವದ ಸುಂದರ ಸಂಗಮವಾಗಿದೆ. ಸಿದ್ಧ ವಿನ್ಯಾಸಗಳಿಗಿಂತ ಭಿನ್ನವಾಗಿ, ಗಣಪತಿಯ ಆರಾಧನಾ ಪರಂಪರೆ ಹಾಗೂ ಭಕ್ತರ ಆಶಯಗಳಿಗೆ ಅನುಗುಣವಾಗಿ ಕಿರೀಟದ ವಿನ್ಯಾಸ, ಸೂಕ್ಷ್ಮ ಅಲಂಕಾರಿಕ ವಿವರಗಳು ಮತ್ತು ಬೆಳ್ಳಿಯ ಕೆತ್ತನೆಗಳನ್ನು ರೂಪಿಸಲಾಗಿದೆ. ಆರು ತಿಂಗಳ ಪರಿಶ್ರಮ, ತಾಳ್ಮೆ ಮತ್ತು ನಿಖರತೆಯ ಫಲವಾಗಿ ಈ ಕಲಾಕೃತಿ ಸಿದ್ಧಗೊಂಡಿದೆ.

ನೂರು ವರ್ಷಗಳ ಪರಂಪರೆ, ಮೂರು ತಲೆಮಾರುಗಳ ವಿಶ್ವಾಸ:

1927ರಲ್ಲಿ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಸ್ಥಾಪನೆಯಾದ ಡಿ.ಶಿವ ಭಟ್ ಜ್ಯುವೆಲ್ಲರ್ಸ್ ಸಂಸ್ಥೆಯು ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿದೆ. ಸಂಸ್ಥಾಪಕ ಡಿ.ಶಿವ ಭಟ್ ಅವರಿಂದ ಆರಂಭವಾದ ಈ ಪಯಣವನ್ನು ಎರಡನೇ ತಲೆಮಾರಿನ ಗೋವಿಂದ ಭಟ್ ಮುಂದುವರಿಸಿದರು. ಪ್ರಸ್ತುತ ಮೂರನೇ ತಲೆಮಾರಿನ ಈಶ್ವರ ಮುರಳಿ ಅವರ ನೇತೃತ್ವದಲ್ಲಿ ಸಂಸ್ಥೆಯು ಪರಂಪರೆ ಮತ್ತು ಆಧುನಿಕತೆಯನ್ನು ಸಮನ್ವಯಗೊಳಿಸಿಕೊಂಡು ಮುನ್ನಡೆಯುತ್ತಿದೆ.

ಕರಾವಳಿಯ ಮಹಿಳೆಯರ ಆಭರಣ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಕರಿಮಣಿ ಸರಗಳ ತಯಾರಿಕೆಯಲ್ಲಿ ಸಂಸ್ಥೆ ತನ್ನದೇಯಾದ ಪರಿಣತಿಯನ್ನು ಬೆಳೆಸಿಕೊಂಡಿದೆ. ಕೈಯಿಂದ ತಯಾರಿಸಿದ ವೈವಿಧ್ಯಮಯ ಶಾರ್ಟ್ ಕರಿಮಣಿ ವಿನ್ಯಾಸಗಳು, ಮಂಗಳಸೂತ್ರ, ನೆಕ್ಲೆಸ್, ಚೈನ್, ಬಳೆ, ಉಂಗುರ ಹಾಗೂ ಬ್ರೈಡಲ್ ಜ್ಯುವೆಲ್ಲರಿಗಳ ವಿಶಾಲ ಸಂಗ್ರಹ ಇಲ್ಲಿದೆ. ಗ್ರಾಹಕರ ಇಚ್ಛೆಯಂತೆ ವಿಶೇಷ ವಿನ್ಯಾಸದ ಕರಿಮಣಿ ಸರಗಳನ್ನು ಆರ್ಡರ್ ಮೇರೆಗೆ ಸಿದ್ಧಪಡಿಸುವ ವ್ಯವಸ್ಥೆಯೂ ಇದೆ. ಈ ಮೂಲಕ 'ಪುತ್ತೂರಿನ ಕರಿಮಣಿ ಸ್ಪೆಷಲಿಸ್ಟ್' ಎಂಬ ಗುರುತನ್ನು ಸಂಸ್ಥೆ ಗಟ್ಟಿಗೊಳಿಸಿದೆ.

ಜಾಗತಿಕ ಪ್ರದರ್ಶನ, ರಾಷ್ಟ್ರೀಯ ಗೌರವ:

ಕಾಲಕ್ಕೆ ತಕ್ಕಂತೆ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿರುವ ಸಂಸ್ಥೆಯ ಈಶ್ವರ ಮುರಳಿ ಅವರು ಮುಂಬೈನಲ್ಲಿ ನಡೆದ 'IIJS Bharat Premiere 2026' ಅಂತರರಾಷ್ಟ್ರೀಯ ಆಭರಣ ಪ್ರದರ್ಶನದಲ್ಲಿ ಭಾಗವಹಿಸಿ, ಜಾಗತಿಕ ಆಭರಣ ಮಾರುಕಟ್ಟೆಯ ಹೊಸ ಟ್ರೆಂಡ್‌ಗಳು ಮತ್ತು ವಿನ್ಯಾಸಗಳನ್ನು ಪರಿಚಯಿಸಿಕೊಂಡಿದ್ದಾರೆ.

ಇದಲ್ಲದೆ, ಹೈದರಾಬಾದ್‌ನಲ್ಲಿ ನಡೆದ JewelZ – Business Exchange on Jewellery & Watches 2026 ಕಾರ್ಯಕ್ರಮದಲ್ಲಿ ಡಿ.ಶಿವ ಭಟ್ ಜ್ಯುವೆಲ್ಲರ್ಸ್‌ಗೆ 'Best Regional Jewellery Brand' ಪ್ರಶಸ್ತಿ ಲಭಿಸಿದೆ. ಈಶ್ವರ ಮುರಳಿ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಡಿಜಿಟಲ್ ಯುಗಕ್ಕೆ ಪರಂಪರೆಯ ಹೆಜ್ಜೆ:

ಸಂಸ್ಥೆಯ ಪರಂಪರೆ ಮತ್ತು ಕರಕುಶಲತೆಯನ್ನು ಜಾಗತಿಕ ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ನೂತನ ವೆಬ್‌ಸೈಟ್ ಆರಂಭಿಸಲಾಗಿದೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ವೆಬ್‌ಸೈಟ್ ಅನಾವರಣಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನೂ ವಿಸ್ತರಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ಸೇವೆ ಒದಗಿಸುವ ಯೋಜನೆ ಸಂಸ್ಥೆಯದ್ದಾಗಿದೆ.

ಪರಂಪರೆಯ ಮೌಲ್ಯವೇ ನಮ್ಮ ಶಕ್ತಿ:

'ಆಭರಣಗಳ ವಿನ್ಯಾಸಗಳು ಬದಲಾಗಿವೆ, ತಂತ್ರಜ್ಞಾನವೂ ಬದಲಾಗಿದೆ. ಆದರೆ ಗ್ರಾಹಕರ ಮಾತನ್ನು ಆಲಿಸಿ, ಅವರ ಭಾವನೆ ಮತ್ತು ಅಗತ್ಯಗಳಿಗೆ ತಕ್ಕಂತೆ ಆಭರಣವನ್ನು ರೂಪಿಸುವ ನಮ್ಮ ಮೂಲ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬರ್ಲಿನ್ ಗಣೇಶನಿಗಾಗಿ ಸಿದ್ಧಪಡಿಸಿದ ಬೆಳ್ಳಿ ಕಿರೀಟದ ಹಿಂದೆ ಹಲವು ಹಂತಗಳ ಪರಿಶ್ರಮ, ತಾಳ್ಮೆ ಮತ್ತು ನಿಖರತೆ ಅಡಗಿದೆ. ನಮ್ಮ ಕರಕುಶಲ ಕರ್ಮಿಗಳ ಅನುಭವ ಮತ್ತು ಕಲಾತ್ಮಕತೆಯನ್ನು ಈ ಕಿರೀಟ ಪ್ರತಿಬಿಂಬಿಸುತ್ತದೆ' ಎಂದು ಸಂಸ್ಥೆಯ ಮಾಲಕ ಈಶ್ವರ ಮುರಳಿ ತಿಳಿಸಿದ್ದಾರೆ.

2027ರಲ್ಲಿ ಶತಮಾನೋತ್ಸವದ ಸಂಭ್ರಮ:

2027ರಲ್ಲಿ ನೂರು ವರ್ಷಗಳನ್ನು ಪೂರೈಸಲಿರುವ ಡಿ.ಶಿವ ಭಟ್ ಜ್ಯುವೆಲ್ಲರ್ಸ್ ಸಂಸ್ಥೆಯು 'ನೂರು ವರ್ಷಗಳ ಪರಂಪರೆ – ತಲೆಮಾರುಗಳ ವಿಶ್ವಾಸ' ಎಂಬ ಧ್ಯೇಯವಾಕ್ಯದೊಂದಿಗೆ ಶತಮಾನೋತ್ಸವ ಆಚರಣೆಗೆ ಸಜ್ಜಾಗಿದೆ. ವಿಶೇಷ ಲಾಂಛನ ಬಿಡುಗಡೆಗೊಳಿಸಿರುವ ಸಂಸ್ಥೆಯು ಗ್ರಾಹಕರಿಗಾಗಿ ಹೊಸ ಆಭರಣ ಸಂಗ್ರಹಗಳು ಮತ್ತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜಿಸಿದೆ.

ಪುತ್ತೂರಿನ ಸಾಂಪ್ರದಾಯಿಕ ಕರಕುಶಲತೆಯನ್ನು ಬರ್ಲಿನ್‌ನ ಗಣೇಶನ ಸನ್ನಿಧಿಗೆ ತಲುಪಿಸಿರುವ ಈ ಪ್ರಯತ್ನವು ಸ್ಥಳೀಯ ಪ್ರತಿಭೆಗೆ ಜಾಗತಿಕ ವೇದಿಕೆ ದೊರೆಯುತ್ತಿರುವುದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.