ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?

Daily Horoscope: ಇಂದು (ಗುರುವಾರ) ನಿಮ್ಮ ದಿನ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯಿರಿ.

Oct 15, 2026 - 09:58
ದಿನ ಭವಿಷ್ಯ: ಇಂದು ಯಾರಿಗೆ ಶುಭ ಫಲ?

ಮೇಷ:

ದೇವಿಯ ವಿಶೇಷ ಅನುಗ್ರಹ.. ಉದ್ಯೋಗ ಸ್ಥಾನದಲ್ಲಿ ಕಿರಿಯರಿಂದ ಗೌರವ. ಶೇರು ಮಾರುಕಟ್ಟೆಯಲ್ಲಿ ಜಯಭೇರಿ. ದೂರ ದೇಶದಲ್ಲಿರುವ ಮಕ್ಕಳಿಂದ ಸಂತೋಷದ ಸಮಾಚಾರ. ಮಹಿಳಾ ಉದ್ಯಮಿಗಳಿಗೆ ಯಶಸ್ಸು. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ  ಓದಿ.

ವೃಷಭ:

ಯುವಜನ ವರ್ಗಕ್ಕೆ ವಿಶೇಷ  ಅನುಕೂಲ.. ಖಾದಿ ಉಡುಪು ಹಾಗೂ ವಸ್ತ್ರ ವ್ಯಾಪಾರಿಗಳಿಗೆ ಹೇರಳ ಲಾಭ. ಶ್ರಮಿಕ ವರ್ಗಕ್ಕೆ ಅನುಕೂಲವಾದ ವಾತಾವರಣ. ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ವೃದ್ಧಿ. ಕೇಟರಿಂಗ್ ವ್ಯವಹಾರಸ್ಥರಿಗೆ ಮಧ್ಯಮ ಲಾಭ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.

ಮಿಥುನ:

ತಾತ್ಕಾಲಿಕ ಉದ್ಯೋಗಸ್ಥರ ಸ್ಥಿತಿ ಸುಧಾರಣೆ.. ಮಾತಿನಲ್ಲಿ ತಪ್ಪದಂತೆ ಎಚ್ಚರಿಕೆ ಇರಲಿ. ಮೊಂಡುವಾದ ಮಾಡುವವರೊಡನೆ ಜಗಳ ಬೇಡ. ಹಿತಶತ್ರುಗಳ ವಿಷಯದಲ್ಲಿ ಹುಷಾರಾಗಿರಿ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕರ್ಕಾಟಕ:

ಶ್ರದ್ಧೆಯಿಂದ ದುಡಿಯುವುದೊಂದೇ ನಿಮ್ಮ ಕಾಯಕವಾಗಿರಲಿ.. ಉದ್ಯೋಗಸ್ಥರ ಆರ್ಥಿಕ ತೊಂದರೆ  ಪರಿಹಾರ. ಉದ್ಯಮಗಳಿಗೆ ಅನಾಯಾಸವಾಗಿ ನೆರವು. ಭ್ರಷ್ಟ ರಾಜಕಾರಣಿಗಳ ಕುತಂತ್ರ ಬಯಲು. ಮಹಿಳೆಯರ ಸ್ವೋದ್ಯೋಗ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಗಣೇಶ ಅಷ್ಟಕ, ದತ್ತಪಂಜರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

ಸಿಂಹ:

ಮತ್ಸರಿಗಳ ಕಿರುಕುಳಕ್ಕೆ ಸೋಲು.. ಹಲವು  ವ್ಯವಹಾರಗಳತ್ತ ಗಮನ ಕೊಡಲು ಒತ್ತಡ. ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ. ಉದ್ಯಮದ ಸ್ವರೂಪ ಬದಲಾವಣೆಯ ಪ್ರಕ್ರಿಯೆಗೆ ಚಾಲನೆ. ಸಿವಿಲ್ ಎಂಜಿನಿಯರರಿಗೆ ಅನುಕೂಲದ ದಿನ. ಗಣೇಶ ದ್ವಾದಶನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

ಕನ್ಯಾ:

ಉದ್ಯೋಗದ ಸಂಬಂಧ ಸಣ್ಣ ಪ್ರವಾಸ.. ಹೊಸ ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ. ಪ್ರತಿಭೆ  ಹಾಗೂ ಕಾರ್ಯನಿಷ್ಠೆಗೆ ಮಾಲಿಕರಿಂದ ಶ್ಲಾಘನೆ. ಉದ್ಯೋಗ ಅರಸುವವರಿಗೆ ಯೋಗ್ಯ ಹುದ್ದೆಯ  ಭರವಸೆ. ಕುಟುಂಬದ ಸದಸ್ಯರಿಗೆ ಆನಂದೋತ್ಸಾಹ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯ ದಹನ ಶಿವಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

ತುಲಾ:

ಉದ್ಯಮಿಗಳ ಪಾಲಿಗೆ ಕಡಿಮೆಯಾದ ಪೈಪೋಟಿ.. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಮಾರ್ಗದರ್ಶನ. ಲೇವಾದೇವಿ ವ್ಯವಹಾರ ಬೇಡ. ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಯೋಗ್ಯ ಪಾಠ. ಹಿರಿಯರ ಆಸ್ತಿ ಜೋಪಾನಕ್ಕೆ ಕ್ರಮ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದೇವೀಕವಚ, ಓದಿ.

ವೃಶ್ಚಿಕ:

ವಿವಿಧ ಬಗೆಯ ವೃತ್ತಿಗಳವರಿಗೆ ಹಿತಾನುಭವ.. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿ ಇಲ್ಲ. ಸರ್ಕಾರಿ ಅಧಿಕಾರಿಗಳ ಆತಂಕ ಕೊಂಚ ದೂರ. ಉನ್ನತ ರಾಜಕಾರಣಿಗಳಿಗೆ ಅಧಿಕಾರ ದಾಹ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಗಣೇಶ ಪಂಚರತ್ನ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ , ಹನುಮಾನ್ ಚಾಲೀಸಾ ಓದಿ.

ಧನು:

ಉದ್ಯಮಶೀಲರ ಪ್ರತಿಭೆಗೆ ಪುರಸ್ಕಾರ.. ಉದ್ಯೋಗ ಘಟಕದ ಕಾರ್ಯನಿರ್ವಹಣೆಗೆ ಹೊಸ ರೂಪ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಹಿರಿಯ ನಾಗರಿಕರಿಗೆ ಸರ್ಕಾರಿ ನೆರವು ದೊರಕಿಸಲು ಸಹಾಯ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

ಮಕರ:

ಸಂದಿಗ್ಧ ಪರಿಸ್ಥಿತಿಗಳಿಂದ ಸದ್ಯಕ್ಕೆ ಮುಕ್ತಿ.. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ  ವಿಜಯ.  ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿಗೆ ಧನವ್ಯಯ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ. ಗಣೇಶ ಸ್ತೋತ್ರ, ವೇದಸಾರ ಶಿವಸ್ತೋತ್ರ, ಹನುಮಾನ್ ಚಾಲೀಸಾ ಓದಿ.

ಕುಂಭ.

ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ.. ಸರ್ಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಿಂದ ಲಾಭ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತೃಪ್ತಿಯ ಅನುಭವ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

ಮೀನ:

ಸಹಚರರಿಂದ  ವಿಶೇಷ ಸಹಾಯ.. ಸೇವಾ ರೂಪದ ಕಾರ್ಯಗಳು  ಮುನ್ನಡೆ. ಸ್ವಂತ ಉದ್ಯಮ ಹೊಸ ರೂಪದಲ್ಲಿ ಆರಂಭ.  ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.