T20 Women Asia Cup-2026: ನಾಳೆ ಫೈನಲ್.. ಭಾರತ - ಶ್ರೀಲಂಕಾ ಮುಖಾಮುಖಿ

T20 Women Asia Cup-2026: ನಾಳೆ 'ಮಹಿಳಾ ಟಿ20 ಏಷ್ಯಾ ಕಪ್-2026' ಟೂರ್ನಿಯ ಹೈ-ವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.

Sep 12, 2026 - 17:45
Sep 12, 2026 - 17:46
T20 Women Asia Cup-2026: ನಾಳೆ ಫೈನಲ್.. ಭಾರತ - ಶ್ರೀಲಂಕಾ ಮುಖಾಮುಖಿ
ಚಿತ್ರಕೃಪೆ @ ಎಕ್ಸ್ (Cricbuzz)

T20 Women Asia Cup-2026: ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಾಳೆ (ಭಾನುವಾರ) 'ಮಹಿಳಾ ಟಿ20 ಏಷ್ಯಾ ಕಪ್-2026' ಟೂರ್ನಿಯ ಹೈ-ವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಪಂದ್ಯವು ಶುರುವಾಗಲಿದೆ. 

ಭಾರತವು ಬಲಿಷ್ಠ ಬ್ಯಾಟಿಂಗ್ ಲೈನ್-ಅಪ್ ಹೊಂದಿದ್ದು, ಶಫಾಲಿ ವರ್ಮಾ, ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಭರ್ಜರಿಯಾಗಿ ಆಡುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸ್ಟಾರ್ ಬೌಲರ್ ದೀಪ್ತಿ ಶರ್ಮಾ ಅಬ್ಬರಿಸುತ್ತಿದ್ದಾರೆ. 
  
ಶ್ರೀಲಂಕಾ ಹಾಲಿ ಚಾಂಪಿಯನ್ ಆಗಿದೆ. ನಾಯಕಿ & ಆಲ್‌ರೌಂಡರ್ ಚಾಮರಿ ಅಟಪಟ್ಟು ಹಾಗೂ ಹರ್ಷಿತಾ ಸಮರವಿಕ್ರಮ ಅವರ ಬ್ಯಾಟಿಂಗ್  ಬಲ ತಂಡಕ್ಕಿದೆ. 

ಮೊದಲ ಸೆಮಿಫೈನಲ್‌ನಲ್ಲಿ, ಬಾಂಗ್ಲಾದೇಶ ವಿರುದ್ಧ ಭಾರತವು ಜಯಗಳಿಸಿತ್ತು. ಆರಂಭದಲ್ಲಿ ಬ್ಯಾಟಿಂಗ್ ಮಾಡಿದ ಭಾರತವು ಬಾಂಗ್ಲಾಗೆ ನಿಗದಿತ 20 ಓವರ್‌ಗಳಲ್ಲಿ 149/6 ರನ್ ಟಾರ್ಗೆಟ್ ನೀಡಿತು. ಆದಾಗ್ಯೂ ಬಾಂಗ್ಲಾದೇಶವು ಅದೇ 20 ಓವರ್‌ಗಳಲ್ಲಿ 109/7 ರನ್ ಗಳಿಸಲಷ್ಟೇ ಶಕ್ತವಾಗಿತ್ತು.  

ನಿನ್ನೆ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವನಿತೆಯರ ತಂಡವನ್ನು ಶ್ರೀಲಂಕಾ ಮಣಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತು. 131 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ, 8 ಎಸೆತಗಳು ಬಾಕಿ ಇರುವಾಗಲೇ 6 ವಿಕೆಟ್ ಕಳೆದುಕೊಂಡು 134 ಬಾರಿಸಿ ಗೆದ್ದು ಬೀಗಿತು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.