T20 Asia Cup-2026: ಇಂದು ಭಾರತ - ಬಾಂಗ್ಲಾದೇಶ ಸೆಮಿಫೈನಲ್‌ ಪಂದ್ಯ

T20 Asia Cup-2026: ಮಹಿಳಾ ಟಿ20 ಏಷ್ಯಾ ಕಪ್-2026 ಟೂರ್ನಿಯು ಅಂತಿಮ ಘಟ್ಟಕ್ಕೆ ಬಂದಿದೆ. ಇಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.

Sep 10, 2026 - 14:56
T20 Asia Cup-2026: ಇಂದು ಭಾರತ - ಬಾಂಗ್ಲಾದೇಶ ಸೆಮಿಫೈನಲ್‌ ಪಂದ್ಯ

T20 Asia Cup-2026: ಮಹಿಳಾ ಟಿ20 ಏಷ್ಯಾ ಕಪ್-2026 ಟೂರ್ನಿಯು ಅಂತಿಮ ಘಟ್ಟಕ್ಕೆ ಬಂದಿದೆ. ಇಂದು (ಸೆ.10) ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ಶುರುವಾಗಲಿದೆ. ಭಾರತವು  ಬಾಂಗ್ಲಾದೇಶವನ್ನು ಎದುರಿಸಲಿದೆ. 

ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ವನಿತೆಯರು ಥಾಯ್ಲೆಂಡ್, ಹಾಂಗ್‌ಕಾಂಗ್ & ಪಾಕಿಸ್ತಾನಗಳ ವಿರುದ್ಧ ಗೆಲುವು ಸಾಧಿಸಿ, ಅಜೇಯರಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಯುಎಇ ತಂಡವನ್ನು ಸೋಲಿಸುವುದರೊಂದಿಗೆ ಬಾಂಗ್ಲಾ ಅಗ್ರ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆದಿದೆ.

ನಾಳೆ (ಸೆ.11) ಎರಡನೇ ಸೆಮಿಫೈನಲ್‌ ಜರುಗಲಿದ್ದು, ಪಾಕಿಸ್ತಾನವು ಶ್ರೀಲಂಕಾದ ವಿರುದ್ಧ ಸೆಣಸಲಿದೆ. 

ಸಂಭಾವ್ಯ ಪ್ಲೇಯಿಂಗ್ 11:

* ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಪ್ರತಿಕಾ ರಾವಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ಪ್ರೇಮಾ ರಾವತ್, ಕ್ರಾಂತಿ ಗೌಡ್, ಶ್ರೀಚರಣಿ ಹಾಗೂ ನಂದಿನಿ ಶರ್ಮಾ.

* ಬಾಂಗ್ಲಾದೇಶ: ಜುಬೈರಿಯಾ ಫರ್ದೌಸ್, ನಿಗಾರ್ ಸುಲ್ತಾನ (ನಾಯಕಿ), ಶೋಭನಾ ಮೋಸ್ತರಿ, ದಿಲಾರಾ ಅಖ್ತರ್, ಶೋರ್ನಾ ಅಖ್ತರ್, ರಾಬೇಯಾ ಖಾನ್, ಶರ್ಮಿನ್ ಅಖ್ತರ್, ನಾಹಿದಾ ಅಖ್ತರ್, ಸುಲ್ತಾನ ಖಾತುನ್, ಮರುಫಾ ಅಖ್ತರ್ ಮತ್ತು ಫಾಹಿಮಾ ಖಾತುನ್.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.