ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್

Mar 30, 2026 - 13:13
ಏಪ್ರಿಲ್ 1 ರಿಂದ ಟೋಲ್‌ನಲ್ಲಿ ನಗದು ಪಾವತಿ ಬಂದ್
Toll

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಸೂಚನೆಯೊಂದನ್ನು ನೀಡಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ನೆಲಮಂಗಲ ಟೋಲ್ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಈಗಾಗಲೇ ಸಾರ್ವಜನಿಕ ಪ್ರಕಟಣೆಯ ಫಲಕಗಳನ್ನು ಹಾಕಲಾಗಿದೆ.

ಏನೇನು ಬದಲಾವಣೆ?

ಹೊಸ ನಿಯಮದ ಪ್ರಕಾರ, ಟೋಲ್ ಬೂತ್​​ಗಳಲ್ಲಿ ನಗದು ಪಡೆಯಲಾಗುವುದಿಲ್ಲ. ಸುಗಮ ಪ್ರಯಾಣಕ್ಕಾಗಿ ಕಡ್ಡಾಯವಾಗಿ ಫಾಸ್ಟಾಗ್ ಅಥವಾ ಯುಪಿಐ ಮೂಲಕವೇ ಪಾವತಿ ಮಾಡಬೇಕಿದೆ. ಏಪ್ರಿಲ್ 15 ರಿಂದ ಫಾಸ್ಟಾಗ್ ಸ್ಕ್ಯಾನ್ ಆಗದಿದ್ದರೆ ಸಿಬ್ಬಂದಿ ಮ್ಯಾನುಯಲ್ ಆಗಿ ವಾಹನ ಸಂಖ್ಯೆ ನಮೂದಿಸಿ ಟೋಲ್ ಪಡೆಯುವುದನ್ನು ರದ್ದುಗೊಳಿಸಲಾಗಿದೆ. ಕೇವಲ ಆಟೋಮ್ಯಾಟಿಕ್ ಫಾಸ್ಟ್​ಟ್ಯಾಗ್ ರೀಡರ್ ಮೂಲಕ ಮಾತ್ರ ಪಾವತಿಗೆ ಅವಕಾಶವಿರುತ್ತದೆ. ನೆಲಮಂಗಲ-ಹಾಸನ ಹಾಗೂ ಬೆಂಗಳೂರು-ತುಮಕೂರು-ಪುಣೆ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಹೊಸ ನಿಯಮದ ಬಗ್ಗೆ ದೊಡ್ಡ ಫಲಕಗಳಲ್ಲಿ ಮಾಹಿತಿ ನೀಡಲಾಗಿದೆ.

ಹೀಗಾಗಿ ವಾಹನ ಸವಾರರು ತಮ್ಮ ಫಾಸ್ಟ್​ಟ್ಯಾಗ್ ಸಕ್ರಿಯವಾಗಿದೆಯೇ ಮತ್ತು ಅದರಲ್ಲಿ ಪೂರಕ ಬ್ಯಾಲೆನ್ಸ್ ಇದೆಯೇ ಎಂದು ಖಚಿತಪಡಿಸಿಕೊಂಡು ಹೆದ್ದಾರಿಗಿಳಿಯುವುದು ಉತ್ತಮ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.