ಆರ್ಬಿಐ ರಿಪೋ ದರ ಶೇ. 5.25ಕ್ಕೆ ಇಳಿಕೆ
ರಿಪೋದರ 25 ಮೂಲಾಂಕಗಳು ಇಳಿಕೆ. ಶೇ. 5.50ರಿಂದ ಶೇ. 5.25ಕ್ಕೆ ಇಳಿಕೆ.
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಿದೆ. ಈ ಮೂಲಕ ಬಡ್ಡಿದರ ಶೇ. 5.50ರಷ್ಟು ಇದ್ದದ್ದು ಶೇ. 5.25ಕ್ಕೆ ಇಳಿದಿದೆ. ಬುಧವಾರದಿಂದ ನಡೆದ ಎಂಪಿಸಿ ಸಭೆಯ ನಿರ್ಧಾರಗಳನ್ನು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇಂದು ಶುಕ್ರವಾರ ಪ್ರಕಟಿಸಿದ್ದಾರೆ. ಎಂಪಿಸಿಯ ಆರೂ ಸದಸ್ಯರು ಸರ್ವಾನುಮತದಿಂದ ರಿಪೋ ದರವನ್ನು 25 ಮೂಲಾಂಕಗಳಷ್ಟು ಇಳಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಈ ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದೂ ಹೇಳಿದ್ದಾರೆ.
ದೇಶದಲ್ಲಿ ಹಣದುಬ್ಬರವು ಆರ್ಬಿಐ ನಿರೀಕ್ಷಿಸುದದಕ್ಕಿಂತಲೂ ಕಡಿಮೆ ಆಗಿದೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ ಈ ವರ್ಷ ಹಣದುಬ್ಬರ ಶೇ 2ರಷ್ಟು ಮಾತ್ರವೇ ಇರುತ್ತದೆ ಎಂದು ನಿರೀಕ್ಷಿಸಿದ್ದಾರೆ. ಹಿಂದಿನ ಎಂಪಿಸಿ ಸಭೆಯಲ್ಲಿ ಮಾಡಿದ ಅಂದಾಜಿಗಿಂತಲೂ ಶೇ. 0.6ರಷ್ಟು ಕಡಿಮೆ ಹಣದುಬ್ಬರ ದಾಖಲಾಗಬಹುದು ಎಂದಿದ್ದಾರೆ.
ಭಾರತದ ಆರ್ಥಿಕತೆ ಈ ವರ್ಷ ಮೊದಲಾರ್ಧ ಶೇ. 8ರಷ್ಟು ಬೆಳೆದಿದೆ ಎಂದು ಹೇಳಿರುವ ಸಂಜಯ್ ಮಲ್ಹೋತ್ರಾ, ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7.3ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದ್ದಾರೆ
ಆರ್ಬಿಐ ಎಂಪಿಸಿ ಡಿಸೆಂಬರ್ ಸಭೆಯಲ್ಲಿ ಪ್ರಮುಖ ನಿರ್ಧಾರಗಳು
ರಿಪೋದರ 25 ಮೂಲಾಂಕಗಳು ಇಳಿಕೆ. ಶೇ. 5.50ರಿಂದ ಶೇ. 5.25ಕ್ಕೆ ಇಳಿಕೆ.
ಜಿಡಿಪಿ ದರ 2025-26ರಲ್ಲಿ ಶೇ. 7.3ರಷ್ಟು ಬೆಳೆಯಬಹುದು
ಹಣದುಬ್ಬರ 2025-26ರಲ್ಲಿ ಶೇ. 2ಕ್ಕೆ ಸೀಮಿತಗೊಳ್ಳಬಹುದು.
ಆರ್ಬಿಐ ಪಾಲಿಸಿ ನಿಲುವು ಅಥವಾ ಪಾಲಿಸಿ ಸ್ಟಾನ್ಸ್ ನ್ಯೂಟ್ರಲ್ ಆಗಿರುತ್ತದೆ
ಭಾರತದ ಫಾರೆಕ್ಸ್ ರಿಸರ್ವ್ ನಿಧಿ 686 ಬಿಲಿಯನ್ ಡಾಲರ್


