2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ

ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್​​ನ ಗ್ರೂಪ್​ ಪಟ್ಟಿಗಳ ಡ್ರಾ ಕಾರ್ಯಕ್ರಮದಲ್ಲಿ ಯುಎಸ್​ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಾಣಿಸಿಕೊಂಡಿದ್ದು ವಿಶೇಷ. 

Dec 6, 2025 - 14:16
2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ

2026ರ ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಂಬರುವ ಜೂನ್ 11ರಿಂದ ಜುಲೈ 19ರವರೆಗೆ ಪ್ರತಿಷ್ಠಿತ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗಳು ನಡೆಯಲಿವೆ. ಈ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಇದೇ ಮೊದಲ ಬಾರಿಗೆ ಜಗತ್ತಿನ 48 ಬಲಿಷ್ಠ ಫುಟ್ಬಾಲ್ ತಂಡಗಳು ಈ ಪ್ರತಿಷ್ಠಿತ ವಿಶ್ವಕಪ್‌ಗಾಗಿ ಕಾದಾಡಲಿವೆ.
 
48 ತಂಡಗಳನ್ನು ಈ ಬಾರಿ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಂತೆ ಒಂದು ಗ್ರೂಪ್​ನಲ್ಲಿ 4 ತಂಡಗಳು ಕಾಣಿಸಿಕೊಳ್ಳಲಿದೆ. ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸಲಿರುವ ಈ ವಿಶ್ವಕಪ್​​ನ ಗ್ರೂಪ್​ ಪಟ್ಟಿಗಳ ಡ್ರಾ ಕಾರ್ಯಕ್ರಮದಲ್ಲಿ ಯುಎಸ್​ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಕಾಣಿಸಿಕೊಂಡಿದ್ದು ವಿಶೇಷ. 

ಫಿಫಾ ವಿಶ್ವಕಪ್ 2026 ಗ್ರೂಪ್:
ಗ್ರೂಪ್​ A: ಮೆಕ್ಸಿಕೊ, ಸೌತ್ ಕೊರಿಯಾ, ಸೌತ್ ಆಫ್ರಿಕಾ, ಯುರೋಪಿಯನ್ ಪ್ಲೇಆಫ್ ಡಿ ವಿಜೇತ.
ಗ್ರೂಪ್​ B: ಕೆನಡಾ, ಸ್ವಿಟ್ಜರ್ಲೆಂಡ್, ಕತಾರ್, ಯುರೋಪಿಯನ್ ಪ್ಲೇಆಫ್ ಎ ವಿಜೇತ.
ಗ್ರೂಪ್​ C: ಬ್ರೆಝಿಲ್, ಮೊರಾಕೊ, ಸ್ಕಾಟ್ಲೆಂಡ್, ಹೈಟಿ
ಗ್ರೂಪ್​ D: ಯುಎಸ್ಎ, ಆಸ್ಟ್ರೇಲಿಯಾ, ಪರಾಗ್ವೆ, ಯುರೋಪಿಯನ್ ಪ್ಲೇಆಫ್ ಸಿ ವಿಜೇತ
ಗ್ರೂಪ್​ E: ಜರ್ಮನಿ, ಈಕ್ವೆಡಾರ್, ಐವರಿ ಕೋಸ್ಟ್, ಕುರಾಕಾವೊ
ಗ್ರೂಪ್​ F: ನೆದರ್ಲ್ಯಾಂಡ್ಸ್, ಜಪಾನ್, ಟುನೀಶಿಯಾ, ಯುರೋಪಿಯನ್ ಪ್ಲೇಆಫ್ ಬಿ ವಿಜೇತ.
ಗ್ರೂಪ್​ G: ಬೆಲ್ಜಿಯಂ, ಇರಾನ್, ಈಜಿಪ್ಟ್, ನ್ಯೂಝಿಲೆಂಡ್
ಗ್ರೂಪ್​ H: ಸ್ಪೇನ್, ಉರುಗ್ವೆ, ಸೌದಿ ಅರೇಬಿಯಾ, ಕೇಪ್ ವರ್ಡೆ
ಗ್ರೂಪ್​ I: ಫ್ರಾನ್ಸ್, ಸೆನೆಗಲ್, ನಾರ್ವೆ, ಫಿಫಾ ಪ್ಲೇಆಫ್ 2 ವಿಜೇತರು.
ಗ್ರೂಪ್​ J: ಅರ್ಜೆಂಟೀನಾ, ಆಸ್ಟ್ರಿಯಾ, ಅಲ್ಜೀರಿಯಾ, ಜೋರ್ಡಾನ್
ಗ್ರೂಪ್​ K: ಪೋರ್ಚುಗಲ್, ಕೊಲಂಬಿಯಾ, ಉಜ್ಬೇಕಿಸ್ತಾನ್, ಫಿಫಾ ಪ್ಲೇಆಫ್ 1 ವಿಜೇತ.
ಗ್ರೂಪ್​ L: ಇಂಗ್ಲೆಂಡ್, ಕ್ರೊಯೇಷಿಯಾ, ಪನಾಮ, ಘಾನಾ.