ಅಕ್ರಮವಾಗಿ ನಕಲಿ ರಸಗೊಬ್ಬರ, ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ
ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ
ಯಾದಗಿರಿ: ನಕಲಿ ರಸಗೊಬ್ಬರ, ಕ್ರಿಮಿನಾಶಕ ಸಾಗಿಸುತ್ತಿದ್ದ ವಾಹನ ಜಪ್ತಿ ಮಾಡಿದ್ದು, 2.26 ಲಕ್ಷ ರೂ. ಮೌಲ್ಯದ ನಕಲಿ ಕ್ರಿಮಿನಾಶಕವನ್ನು ಗೋಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ವಾಹನ ಚಾಲಕ ಸೈಯದ್ ಅಮೀನ್ ಸಾಬ್ ಉಕ್ಕಲಿ ಎಂಬಾತನನ್ನು ಬಂಧಿಸಿದ್ದಾರೆ.ವಿಜಯಪುರ ಜಿಲ್ಲೆಯ ಸಿಂದಗಿಯಿಂದ ಚಾಮನಾಳ ಕಡೆಗೆ ಟಾಟಾ ಎಸಿ ವಾಹನವೊಂದು ಹೊರಟಿತ್ತು. ಖಚಿತ ಮಾಹಿತಿಯ ಮೇರೆಗೆ ಗೋಗಿ ಪೊಲೀಸರು ವಾಹನವನ್ನು ಪರಿಶೀಲಿಸಿದ್ದಾರೆ. ಈ ವೇಳೆ 2.26 ಲಕ್ಷ ರೂ. ಮೌಲ್ಯದ ವಸ್ತು ಪತ್ತೆಯಾಗಿದ್ದು, ಅದರಲ್ಲಿ 70 ಸಾವಿರ ರೂ. ಮೌಲ್ಯದ 50 ಚೀಲ ರಸಗೊಬ್ಬರ, 1.44 ಲಕ್ಷ ಮೌಲ್ಯದ 44 ಡಬ್ಬಾ ಕ್ರಿಮಿನಾಶಕ ಪತ್ತೆಯಾಗಿದೆ.ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.