ಫೆ.21ಕ್ಕೆ ಅಸ್ಸಾಂಗೆ ಅಮಿತಾ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫೆ.21ರಂದು ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಗೆ ಭೇಟಿ ನೀಡಲಿದ್ದಾರೆ.
ಫೆ.21ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಗೆ ಭೇಟಿ ನೀಡಲಿದ್ದಾರೆ.
ಅಮಿತ್ ಶಾ ಅವರು ಫೆ.20ರಂದು ಅಸ್ಸಾಂ ತಲುಪುವ ನಿರೀಕ್ಷೆಯಿದೆ. ಮಾರನೇ ದಿನ ಫೆ.21ರಂದು ಭಾರತ-ಬಾಂಗ್ಲಾ ಅಂತಾರಾಷ್ಟ್ರೀಯ ಗಡಿಯ ಬಳಿಯ ನಟನ್‌ಪುರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ವೈಬ್ರೆಂಟ್ ವಿಲೇಜಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಗೃಹ ಸಚಿವಾಲಯ ಆಯೋಜಿಸಿರುವ ಈ ವಿವಿಪಿಯಲ್ಲಿ, ಜೀವನೋಪಾಯ ಸೃಷ್ಟಿ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರಚಾರ, ಕೌಶಲ್ಯ ಅಭಿವೃದ್ಧಿ ಮತ್ತು ಕೃಷಿ ಮತ್ತು ಸಂಬಂಧಿತ ವಲಯಗಳನ್ನು ಬಲಪಡಿಸುವತ್ತ ಗಮನಹರಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಅಮಿತ್ ಶಾ ಭೇಟಿ ಹಿನ್ನೆಲೆ ಗುರುವಾರ ರಾಜ್ಯ ಸಚಿವ ಕೌಶಿಕ್ ರೈ, ಕಚಾರ್ ಜಿಲ್ಲಾ ಆಯುಕ್ತ ಆಯುಷ್ ಗರ್ಗ್, ಗಡಿ ಭದ್ರತಾ ಪಡೆ ಅಧಿಕಾರಿಗಳು ಮತ್ತು ಪೊಲೀಸರು ಸಿದ್ಧತೆ ಮತ್ತು ಭದ್ರತಾ ವ್ಯವಸ್ಥೆ ಪರಿಶೀಲಿಸಲು ನಟನ್‌ಪುರ ಗ್ರಾಮಕ್ಕೆ ಭೇಟಿ ನೀಡಿದರು.
ಕಚಾರ್ ಜಿಲ್ಲೆಯ ಕಟಿಗೋರಾ ಪ್ರದೇಶದಲ್ಲಿರುವ ನಟನ್‌ಪುರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಪ್ರಜೆಗಳು ಸೇರಿದಂತೆ 200ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ. ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದು ಬಿಜೆಪಿಯ ಯೋಜನೆಯಾಗಿದ್ದು, ಈ ಭೇಟಿ ಮಹತ್ವದ್ದಾಗಿದೆ.


