ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ:
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 3
1.ಮೇಷ:
ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಆದಾಯ, ಲಾಭ ಹೆಚ್ಚಳ. ಹಿರಿಯ ವ್ಯಕ್ತಿಯ ಆಪ್ತ ಸಲಹೆಯಿಂದ ನೆಮ್ಮದಿ. ಲೇವಾದೇವಿ ವ್ಯವಹಾರದಲ್ಲಿ ಲಾಭ ಮಧ್ಯಮ. ಬಂಧುಗಳ ಭೇಟಿ. ಗೃಹಿಣಿಯರ ಸ್ವೋದ್ಯೋಗ ಯೋಜನೆ ಪ್ರಗತಿಯಲ್ಲಿ. ಮನೆಯಲ್ಲಿ ಎಲ್ಲರೂ ಆನಂದದ ಸ್ಥಿತಿಯಲ್ಲಿ. ಗಣೇಶ ಕವಚ, ಆದಿತ್ಯ ಹೃದಯ, ಸುಬ್ರಹ್ಮಣ್ಯ ಸ್ತೋತ್ರ ಪಾರಾಯಣ ಮಾಡಿ.
2.ವೃಷಭ:
ಹೋರಾಟವಿಲ್ಲದೆ ಬದುಕು ಇಲ್ಲ. ಶಸ್ತ್ರತ್ಯಾಗ ಮಾಡದೆ ಸಮರವನ್ನು ಮುಂದುವರಿಸಿ ವಿಜಯಿಯಾಗಿ. ನಿರೀಕ್ಷಿಸಿರದ ಕಡೆಯಿಂದ ಸಹಾಯ ಹಸ್ತ ಬರಲಿದೆ. ಉದ್ಯೋಗ, ಉದ್ಯಮ ಎರಡೂ ಸುಗಮ. ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ ವೃದ್ಧಿ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣದ ಸಾಧ್ಯತೆ. ಮನೆಯಲ್ಲಿ ಹಿರಿಯರು, ಗೃಹಿಣಿಯರು, ಮಕ್ಕಳ. ಆರೋಗ್ಯ ಉತ್ತಮ ಗಣೇಶ ದ್ವಾದಶನಾಮ ಸ್ತೋತ್ರ. ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
3.ಮಿಥುನ:
ಭವಿಷ್ಯವನ್ನು ಕುರಿತು ಅತಿಯಾಗಿ ಚಿಂತೆ ಮಾಡದೆ ವರ್ತಮಾನದಲ್ಲಿ ಜೀವಿಸುವುದನ್ನು ಕಲಿತರೆ ಜೀವನಯಾತ್ರೆ ಸುಗಮ. ಉದ್ಯೋಗದಲ್ಲಿ ಪ್ರತಿಭೆಗೆ ಮಾನ್ಯತೆ ಅಬಾಧಿತ. ಹುದ್ದೆ ಬದಲಾವಣೆ ಸಂಭವ. ಸಮೂಹ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಇನ್ನಷ್ಟು ಹೊಣೆಗಾರಿಕೆಗಳು. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ. ಧಾರ್ಮಿಕ ಸ್ಥಾನವೊಂದಕ್ಕೆ ಭೇಟಿ. ಮಕ್ಕಳ ಕಲಿಕೆ ಆಸಕ್ತಿ ಪ್ರಚೋದನೆಗೆ ಪ್ರಯತ್ನ ಅವಶ್ಯ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
4.ಕರ್ಕಾಟಕ:
ಪರಿಸರದ ಪ್ರಭಾವದಿಂದ ಮನಸ್ಸು ಅಸ್ತವ್ಯಸ್ತವಾಗುವುದು ಸಹಜ. ಉದ್ಯೋಗದಲ್ಲಿ ಪ್ರತಿಭೆಗೆ ಗೌರವ. ಸ್ವಂತ ಉದ್ಯಮ ಅಭಿವೃದ್ಧಿಯ ಪಥದಲ್ಲಿ. ಹಳೆಯ ಸಮಸ್ಯೆಯೊಂದು ಸರಳ ಉಪಾಯದಿಂದ ಪರಿಹಾರ. ಮನೆಯಲ್ಲಿ ದೇವತಾ ಕಾರ್ಯ ಆಯೋಜನೆ. ಗೃಹೋಪಯೋಗಿ ವಸ್ತುಗಳ ಖರೀದಿ. ಆಸ್ತಿ ವಿವಾದಕ್ಕೆ ಪರಿಹಾರ ಶೋಧನೆ.ಎ ಲ್ಲರ ಶಾರೀರಿಕ ಆರೋಗ್ಯ ಉತ್ತಮ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ರೋತ್ರ ಪಾರಾಯಣ ಮಾಡಿ.
5.ಸಿಂಹ:
ಯೋಜನೆಯ ಪ್ರಕಾರವೇ ಆಗುತ್ತಿರುವ ಕೆಲಸಗಳು. ಉದ್ಯೋಗದಲ್ಲಿ ಪದೋನ್ನತಿ ಹಾಗೂ ವಿಭಾಗ ಬದಲಾವಣೆ. ಸಹೋದ್ಯೋಗಿಗಳ ಸಕ್ರಿಯ ಸಹಕಾರ. ಸ್ವಂತ ಉದ್ಯಮ ಶೀಘ್ರಗತಿಯಲ್ಲಿ ಬೆಳವಣಿಗೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ದುಪ್ಪಟ್ಟು ಲಾಭ. ನಿರ್ದಿಷ್ಟ ವ್ಯಕ್ತಿಯೊಬ್ಬರ ಭೇಟಿ. ವ್ಯವಹಾರದ ನಿಮಿತ್ತ ಸಣ್ಣ ಪ್ರಯಾಣ ಸಂಭವ. ಗೃಹೋದ್ಯಮ ಉತ್ಪನ್ನಗಳ ಗ್ರಾಹಕರ ಸಂಖ್ಯೆ ವರ್ಧನೆ. ಮನೆಯಲ್ಲಿ ಉಲ್ಲಾಸದ ವಾತಾವರಣ. ಗಣೇಶ ಅಷ್ಟಕ,ಶಿವಸ್ತೋತ್ರ, ನವಗ್ರಹ ಸ್ತೋತ್ರ ಓದಿ.
6.ಕನ್ಯಾ:
ಸ್ಥಿರವಾದ ಉದ್ಯೋಗ ಪ್ರಾಪ್ತಿ. ಕಾರ್ಯತತ್ಪರತೆಗೆ ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮಕ್ಕೆ ಹೊಸ ಪಾಲುದಾರರ ಸೇರ್ಪಡೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟದ ಸಾಧ್ಯತೆ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ವಿನಿಯೋಗ. ಕುಟುಂಬದ ಸಮಸ್ಯೆ ಸುಲಭೋಪಾಯದಿಂದ ಪರಿಹಾರ. ಅಧ್ಯಾತ್ಮ ಚಿಂತನೆ, ಸತ್ಸಂಗದಲ್ಲಿ ಆಸಕ್ತಿ. ಸಂಸಾರದ ಸದಸ್ಯರೆಲ್ಲರ ಆರೋಗ್ಯ ಉತ್ತಮ. ಗಣೇಶ ಸ್ರೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ರೋತ್ರ ಓದಿ.
7.ತುಲಾ:
ಆತಂಕದ ಕ್ಷಣಗಳು ತೊಲಗಿ ಮನಸ್ಸಿಗೆ ನೆಮ್ಮದಿ. ಪ್ರಾಪಂಚಿಕ ಸಮಸ್ಯೆಗಳಿಗೆ ಅಧ್ಯಾತ್ಮದ ಮೂಲಕ ಪರಿಹಾರ ಕಾಣುವ ಪ್ರಯತ್ನ ಸಫಲ. ಉದ್ಯೋಗ ಕ್ಷೇತ್ರದಲ್ಲಿ ಪ್ರತಿಭೆ ಮತ್ತು ಕಾರ್ಯತತ್ಪರತೆಗೆ ಮನ್ನಣೆ. ಉದ್ಯಮ ರಂಗದಲ್ಲಿ ಜಯಭೇರಿ ಬಾರಿಸಿ ಸಮಾಜದಲ್ಲಿ ಕೀರ್ತಿ. ಇಷ್ಟದೇವರ ಸ್ಥಳಕ್ಕೆ ಅನಿರೀಕ್ಷಿತ ಭೇಟಿ. ಮನೆಯಲ್ಲಿ ಸಮಾಧಾನದ ವಾತಾವರಣ. ಗಣೇಶ ಸ್ತೋತ್ರ, ನವಗ್ರಹ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.
8.ವೃಶ್ಚಿಕ:
ಮಕ್ಕಳ ಉದ್ಯಮ ಯಶಸ್ಸಿನ ಪಥದಲ್ಲಿ. ಕುಟುಂಬದಲ್ಲಿ ಶಿಶು ಜನನ. ಉದ್ಯೋಗ ಸ್ಥಾನದಲ್ಲಿದ್ದ ಕಿರಿಕಿರಿ ತೊಲಗಿ ಮನಸ್ಸಿಗೆ ಸಮಾಧಾನ. ಸೋದರ ವರ್ಗದಲ್ಲಿ ವಿವಾಹ ನಿಶ್ಚಯ. ಸ್ವಂತ ಉದ್ಯಮದ ವ್ಯವಹಾರ ಕ್ಷೇತ್ರ ವಿಸ್ತರಣೆ. ಉದ್ಯೋಗ ಅರಸುತ್ತಿರುವವರಿಗೆ ಹೊಸ ಅವಕಾಶಗಳು ಗೋಚರ. ವಸ್ತ್ರ, ಆಭರಣ ಖರೀದಿ. ಮನೆ ನವೀಕರಿಸಲು ಸಿದ್ಧತೆ. ಆರೋಗ್ಯ ಉತ್ತಮ.ಗಣಪತಿ, ಶಿವ, ವಿಷ್ಣು ದೇವಿ ಸ್ತೋತ್ರಗಳನ್ನು ಓದಿ.
9.ಧನು:
ಶಾಂತಿ, ನೆಮ್ಮದಿಗಳನ್ನು ಹುಡುಕಾಟದಲ್ಲಿರುವಾಗ ಧುತ್ತನೆ ಎರಗುವ ಸವಾಲುಗಳು ಕ್ಷಣಾರ್ಧದಲ್ಲಿ ತೊಲಗುತ್ತವೆ. ಉದ್ಯೋಗ ಸ್ಥಾನದಲ್ಲಿ ಕಾರ್ಯದಕ್ಷತೆಯನ್ನು ಗುರುತಿಸಿದ ಮೇಲಧಿಕಾರಿಗಳಿಂದ ಪ್ರಶಂಸೆ. ಪಾಲುದಾರಿಕೆಯ ಉದ್ಯಮದಲ್ಲಿ ಯಶಸ್ಸು. ಕೃಷ್ಯುತ್ಪಾದನೆಗಳಿಂದ ಆದಾಯ ವೃದ್ಧಿ. ಹೈನುಗಾರಿಕೆ ವ್ಯವಹಾರಸ್ಥರಿಗೆ ಅನುಕೂಲದ ದಿನ. ಜೇನುಸಾಕಣೆಯಲ್ಲಿ ಆಸಕ್ತಿ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ಗೇಶ ಅಷ್ಟಕ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಪಾರಾಯಣ ಮಾಡಿ.
10.ಮಕರ:
ದಿನದ ಆರಂಭದಲ್ಲಿ ಪ್ರಶ್ನಾರ್ಥಕ ಚಿಹ್ನೆಯಂತೆ ಎದುರಾದ ಆತಂಕ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ಶುಭ ಸನ್ನಿವೇಶ. ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ. ಮಕ್ಕಳ ಭವಿಷ್ಯ ಚಿಂತನೆ. ಸ್ವಂತ ಉದ್ಯಮದಲ್ಲಿ ಪೈಪೋಟಿ ಎದುರಿಸುವ ಪ್ರಯತ್ನ ಸಫಲ. ನೂತನ ಗೃಹ ಖರೀದಿಗೆ ಮಾತುಕತೆ. ವಿವಾಹ ಪ್ರಯತ್ನದಲ್ಲಿ ಮುನ್ನಡೆ. ಗುರುಹಿರಿಯರ ಆಶೀರ್ವಾದ, ಮಾರ್ಗದರ್ಶನದಲ್ಲಿ ಬದುಕಿನ ಪ್ರಯಾಣ ಸುಗಮ.ಗಣೇಶ ಕವಚ,ದುರ್ಗಾಸ್ತೋತ್ರ, ಹನುಮಾನ್ ಚಾಲೀಸಾ ಓದಿ.
11.ಕುಂಭ:
ಅನಿರೀಕ್ಷಿತ ಧನಾಗಮ. ಬಂಧುವರ್ಗದಲ್ಲಿ ಮಂಗಲ ಕಾರ್ಯ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆ. ಹೊಸ ಉತ್ಪನ್ನಗಳು ಮಾರುಕಟ್ಟೆಗೆ. ಹೊಸ ಸೇವಾಕ್ಷೇತ್ರಗಳ ಅನ್ವೇಷಣೆ. ಧಾರ್ಮಿಕ ಸಂಸ್ಥೆಯಲ್ಲಿ ಉನ್ನತ ಸ್ಥಾನ ಪ್ರಾಪ್ತಿ. ಪ್ರವಚನ, ಭಜನೆ, ಸತ್ಸಂಗದಲ್ಲಿ ಪಾಲುಗೊಳ್ಳುವ ಆಸಕ್ತಿ. ಸಂಗಾತಿ ಮತ್ತು ಮಕ್ಕಳೊಂದಿಗೆ ಸಾಮರಸ್ಯ. ಗಣೇಶ ಸ್ತೋತ್ರ, ಶಿವ ಸ್ತೋತ್ರ, ಶನಿಸ್ತೋತ್ರ ಓದಿ.
12.ಮೀನ:
ಶನಿಮಹಾತ್ಮ ಆಗಾಗ ಮಹಿಮೆ ತೋರುತ್ತಿದ್ದರೂ ಕೃಪೆಯನ್ನೂ ತೋರುವುದರಿಂದ ಸಂಕಟಗಳು ದೂರ. ಉದ್ಯೋಗದಲ್ಲಿ ಆದಾಯ,ಕೀರ್ತಿ ವೃದ್ಧಿ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನದಿಂದ ಅಪೇಕ್ಷಿತ ಕಾರ್ಯಗಳು ಸಫಲ. ಹಿರಿಯರ ಬಳುವಳಿಯಾಗಿ ಬಂದ ಸಾಮಾಜಿಕ ಜವಾಬ್ದಾರಿ ನಿರ್ವಹಣೆ. ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಪ್ರಾಪ್ತಿ. ಸಂಗಾತಿಯ ಸಹಕಾರದಿಂದ ಕಾರ್ಯಗಳು ಯಶಸ್ವಿ. ಗಣೇಶ ಸ್ರೋತ್ರ, ವಿಷ್ಣು ಸಹಸ್ರನಾಮ, ದೇವೀಸ್ತುತಿ ಪಾರಾಯಣ ಮಾಡಿ.